AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚಾರ್ಲಿ’ ನಂತರ ಅದ್ದೂರಿ ಪ್ರದರ್ಶನದ ಹಾದಿಯಲ್ಲಿ ‘ಚೇಸ್’; ವರ್ಕ್ ಆಯ್ತು ವಿಲೋಕ್ ಶೆಟ್ಟಿ ಪ್ರಯೋಗ

‘ಚೇಸ್’ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಐದು ದಿನಗಳಾದ ಮೇಲೂ ಸಿನಿಮಾ ಮೇಲಿನ ಅಭಿರುಚಿ ಹೆಚ್ಚಾಗುತ್ತಿದೆ.

‘ಚಾರ್ಲಿ’ ನಂತರ ಅದ್ದೂರಿ ಪ್ರದರ್ಶನದ ಹಾದಿಯಲ್ಲಿ ‘ಚೇಸ್’; ವರ್ಕ್ ಆಯ್ತು ವಿಲೋಕ್ ಶೆಟ್ಟಿ ಪ್ರಯೋಗ
ಚೇಸ್ ಸಿನಿಮಾ ಪೋಸ್ಟರ್​
TV9 Web
| Edited By: |

Updated on:Jul 22, 2022 | 2:47 PM

Share

ಇತ್ತೀಚೆಗೆ ಯಾರ ಬಾಯಲ್ಲಿ ಕೇಳಿದರೂ ‘777 ಚಾರ್ಲಿ’ (777 Charlie) ಚಿತ್ರದ ಜಪ ಜೋರಾಗಿತ್ತು. ಆ ಸಿನಿಮಾದ ಕ್ರೇಜ್ ಇನ್ನೂ ಕೂಡ ಕಡಿಮೆಯಾದಂತಿಲ್ಲ ಎಂದೇ ಹೇಳಬಹುದು. ಒಮ್ಮೊಮ್ಮೆ ಹೀಗೂ ಯೋಚನೆ ಬಂದಿದ್ದು ಇದೆ.. ‘777 ಚಾರ್ಲಿ’ ಆದ ಮೇಲೆ ಪ್ರೇಕ್ಷಕರ ಮನಸ್ಸನ್ನು ಮುಟ್ಟುವವರು ಯಾರು? ಈ ಪ್ರಶ್ನೆಗೆ ಉತ್ತರವಾಗಿ ‘ಚೇಸ್’ (Chase Kannada Movie) ಬಂದಿದೆ. ಚಾರ್ಲಿಯಂತೆಯೇ ‘ಚೇಸ್’ ಸಿನಿಮಾ ಕೂಡ ಕನ್ನಡ ಚಿತ್ರರಂಗದ (Sandalwood) ಪ್ರೇಕ್ಷಕರ ಮನಸ್ಸನ್ನು ಸೆಳೆದಿದೆ. ಥಿಯೇಟರ್​ಗೆ ಬಂದು ‘ಚೇಸ್’ ನೋಡುವವರ ಸಂಖ್ಯೆ ಹೆಚ್ಚಾಗಿದೆ.

ಒಂದು ಸಿನಿಮಾದ ಬಗ್ಗೆ ನಾನಾ ರೀತಿಯಲ್ಲಿ ಅದೆಷ್ಟೇ ಪ್ರಮೋಷನ್ ಕೊಟ್ಟರು ಮೊದಲ ಶೋಗೆ ಬಂದವರಿಗೆ ಸಿನಿಮಾ ಹಿಡಿಸಿದರೆ ಮುಗೀತು.. ಆ ಸಿನಿಮಾ ಯಶಸ್ವಿ ಹಾದಿಯಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲ. ಈಗ ಅಂಥ ದಾರಿ ಹಿಡಿದಿರುವುದೇ ‘ಚೇಸ್’ ಸಿನಿಮಾ. ವಿಲೋಕ್ ಶೆಟ್ಟಿ ಅವರು ನಿರ್ದೇಶನದಲ್ಲಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಶೈಲಿಯ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ, ಬರುತ್ತಲೇ ಇವೆ. ಆದರೆ ಅದರಲ್ಲಿ ಹೊಸತನವೇನಿದೆ? ಅದನ್ನು ಕೊಡುವ ರೀತಿ ಎಂಥದ್ದು ಎನ್ನುವುದರ ಮೇಲೆ ನೋಡುಗ ತೀರ್ಮಾನ ಮಾಡುತ್ತಾನೆ. ಈ ವಿಚಾರದಲ್ಲಿ ವಿಲೋಕ್ ಶೆಟ್ಟಿ ಪ್ರಯೋಗ ಗೆದ್ದಿದೆ ಎನ್ನಬಹುದು.

ಸಮಾಜವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಯ ಬಗ್ಗೆ ಮೂಡಿಬಂದಿರುವ ಈ ಸಿನಿಮಾ ಎಲ್ಲರನ್ನೂ ಥಿಯೇಟರ್ನ ಮಬ್ಬುಗತ್ತಲಲ್ಲಿ ಗಟ್ಟಿಯಾಗಿ ಕೂರಿಸುತ್ತದೆ. ಆ ಸಮಸ್ಯೆಯನ್ನು ಅರ್ಥವಾಗುವಂತೆ ತೋರಿಸುತ್ತಾ ಹೋದಂತೆ ಅದೇ ಪ್ರೇಕ್ಷಕ ಸೀಟಿನ ತುದಿ ಅಂಚಿಗೆ ಬಂದು ಕೂರುತ್ತಾನೆ. ಈ ಮಧ್ಯೆ ಕಣ್ಣಿಗೆ ಕಟ್ಟುವಂತಿರುವ ದೃಶ್ಯವೈಭವದ ಸೊಬಗನ್ನು ಸವಿಯುವಂತೆ ಮಾಡಿದೆ. ಎಲ್ಲಾ ಒಟ್ಟುಗೂಡಿಸಿದರೆ ಅದ್ಭುತ ಸಿನಿಮಾ ನೋಡಿದ ಖುಷಿ ಜೊತೆಗೆ, ಪೈಸಾ ವಸೂಲ್ ಸಿನಿಮಾ ಅಂತಾನೆ ಹೇಳಬಹುದು. ಈ ಸಿನಿಮಾದ ಹಿಂದಿರುವ ತ್ಯಾಗ, ಶ್ರಮ ಅಷ್ಟಿಷ್ಟಲ್ಲ. ಕೊರೊನಾ ಕಾಲಕ್ಕೂ ಮುನ್ನ ಶುರುವಾಗಿ ಇನ್ನೇನು ರಿಲೀಸ್ ಆಗಬೇಕು ಎನ್ನುವಷ್ಟರಲ್ಲಿ ಸಂಕಷ್ಟ ಎದುರಾಗಿತ್ತು. ಆ ಎಲ್ಲವನ್ನೂ ದಾಟಿ, ‘ಚೇಸ್’ ಚಿತ್ರಕ್ಕೆ ಫ್ರೆಶ್ ಫೀಲ್ ಕೊಟ್ಟು ರಿಲೀಸ್ ಮಾಡಲಾಗಿದೆ.

ಇದನ್ನೂ ಓದಿ
Image
‘777 ಚಾರ್ಲಿ’ ಸಿನಿಮಾದಲ್ಲಿ ಡಿಲೀಟ್ ಮಾಡಿದ್ದ ದೃಶ್ಯವನ್ನು ರಿಲೀಸ್ ಮಾಡಿದ ಟೀಂ; ಇಲ್ಲಿದೆ ವಿಡಿಯೋ
Image
Rakshit Shetty: 150 ಕೋಟಿ ರೂ. ಗಳಿಸಿದ ‘777 ಚಾರ್ಲಿ’; ಪ್ರಾಣಿಗಳ ರಕ್ಷಣೆಗೆ ಶೇ.5ರಷ್ಟು ಹಣ ದೇಣಿಗೆ ನೀಡಿದ ರಕ್ಷಿತ್​ ಶೆಟ್ಟಿ
Image
Rakshit Shetty: ‘777 ಚಾರ್ಲಿ’ ಸಿನಿಮಾಗೆ ಸೀಕ್ವೆಲ್​; ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ
Image
‘777 ಚಾರ್ಲಿ’ ಸಿನಿಮಾಗೆ ಮಾತ್ರ ತೆರಿಗೆ ವಿನಾಯಿತಿ ಯಾಕೆ? ಬೊಮ್ಮಾಯಿ ಸರ್ಕಾರದ ಕಿವಿ ಹಿಂಡಿದ ಮಂಸೋರೆ

ರಾಜ್ಯಾದ್ಯಂತ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಐದು ದಿನಗಳಾದ ಮೇಲೂ ಸಿನಿಮಾ ಮೇಲಿನ ಅಭಿರುಚಿ ಹೆಚ್ಚಾಗುತ್ತಿದೆ. ‘ಚೇಸ್’ ಚಿತ್ರವನ್ನು ‘ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್’ ಬ್ಯಾನರ್​ ಅಡಿಯಲ್ಲಿ ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ನಿರ್ಮಾಣದಲ್ಲಿ ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

Published On - 2:47 pm, Fri, 22 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್