ಕ್ರಿಕೆಟ್ ದಿಗ್ಗಜರಿಂದ ಸಿಕ್ಕ ಗಿಫ್ಟ್ಗಳ ಪೂರ್ತಿ ಪಟ್ಟಿ ನೀಡಿದ ಕಿಚ್ಚ ಸುದೀಪ್; ಇವುಗಳಿಗೆ ಬೆಲೆ ಕಟ್ಟೋಕಾಗಲ್ಲ
Kichcha Sudeep | Vikrant Rona: ಕ್ರಿಕೆಟ್ ಆಟಗಾರರಿಂದ ಕಿಚ್ಚ ಸುದೀಪ್ ಅವರಿಗೆ ಸಿಕ್ಕಿರುವ ಉಡುಗೊರೆಗಳು ಒಂದೆರಡಲ್ಲ. ಯಾರಿಂದ ಏನೆಲ್ಲ ಸಿಕ್ಕಿದೆ ಎಂಬ ಬಗ್ಗೆ ಅವರು ಪೂರ್ತಿ ಮಾಹಿತಿ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೂ ಕ್ರಿಕೆಟ್ಗೂ ಎಲ್ಲಿಲ್ಲದ ನಂಟು. ಸಿನಿಮಾ ಬಳಿಕ ಅವರು ಹೆಚ್ಚು ಆಸಕ್ತಿ ಹೊಂದಿರುವ ಕ್ಷೇತ್ರ ಎಂದರೆ ಅದು ಕ್ರಿಕೆಟ್. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅನೇಕ ಕ್ರಿಕೆಟಿಗರು ಕಿಚ್ಚ ಸುದೀಪ್ ಅವರಿಗೆ ಹಲವು ಉಡುಗೊರೆಗಳನ್ನು ಕೊಟ್ಟಿದ್ದಾರೆ. ಅವುಗಳ ಪೂರ್ತಿ ಪಟ್ಟಿಯನ್ನು ಈ ವಿಡಿಯೋದಲ್ಲಿ ಅವರು ನೀಡಿದ್ದಾರೆ. ಕ್ರಿಕೆಟ್ ಲೋಕದ ದಿಗ್ಗಜರಿಂದ ಅವರಿಗೆ ಬೆಲೆ ಕಟ್ಟಲಾಗದಂತಹ ಗಿಫ್ಟ್ಗಳು ಸಿಕ್ಕಿವೆ. ಅವರು ನಟಿಸಿರುವ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಆ ಪ್ರಯುಕ್ತ ‘ಟಿವಿ9 ಕನ್ನಡ’ಕ್ಕೆ ನೀಡಿದ ಸಂದರ್ಶನದಲ್ಲಿ (Kichcha Sudeep Interview) ಈ ವಿಚಾರಗಳ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
Latest Videos