ಬಿಜೆಪಿ ಶಾಸಕ ಮಸಾಲೆ ಜಯರಾಮ್ಗೆ ತಮಟೆ ಬಾರಿಸುವುದು ಕೂಡ ಗೊತ್ತು
ಶಾಸಕರು ತಮಟೆ ಬಾರಿಸುತ್ತಿದ್ದರೆ ಕಾರ್ಯಕರ್ತರು ಕುಣಿಯುತ್ತಿದ್ದಾರೆ. ಅವರು ತಮಟೆ ಬಾರಿಸುವುದನ್ನು ಕೇಳಿಸಿಕೊಳ್ಳುತ್ತಿದ್ದರೆ ಅದರಲ್ಲಿ ಪರಿಣಿತರೇನೋ ಅನ್ನುವಂತಿದೆ.
ತುಮಕೂರು: ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ (Masale Jayaram) ಅವರು ನಿಸ್ಸಂದೇಹವಾಗಿ ಬಹುಮುಖ ಪ್ರತಿಭೆಯ ವ್ಯಕ್ತಿ ಅಂತ ಕಾಣುತ್ತದೆ ಮಾರಾಯ್ರೇ. ಶುಕ್ರವಾರ ಅವರು ತಮ್ಮ ಕ್ಷೇತ್ರದ ಭಾಗವಾಗಿರುವ ಕೊಡಿಹಳ್ಳಿಯಲ್ಲಿ (Kodihalli) ತಮಟೆ ಬಾರಿಸಿ ಕಾರ್ಯಕರ್ತರನ್ನು ರಂಜಿಸುತ್ತಾ ಹುರಿದುಂಬಿಸಿದರು. ಶಾಸಕರು ತಮಟೆ ಬಾರಿಸುತ್ತಿದ್ದರೆ ಕಾರ್ಯಕರ್ತರು ಕುಣಿಯುತ್ತಿದ್ದಾರೆ. ಅವರು ತಮಟೆ ಬಾರಿಸುವುದನ್ನು ಕೇಳಿಸಿಕೊಳ್ಳುತ್ತಿದ್ದರೆ ಅದರಲ್ಲಿ ಪರಿಣಿತರೇನೋ (expert) ಅನ್ನುವಂತಿದೆ, ಅಷ್ಟು ಸೊಗಸಾಗಿ ಬಾರಿಸುತ್ತಿದ್ದಾರೆ.
Latest Videos