Kichcha Sudeep: ಸುದೀಪ್-ಅಜಯ್​ ದೇವಗನ್​ ನಡುವಿನ ಟ್ವೀಟ್​ ಸಮರಕ್ಕೆ ಮೂರನೇ ವ್ಯಕ್ತಿ ಕಾರಣ; ಕಿಚ್ಚ ಹೇಳಿದ್ದೇನು?

Ajay Devgn | Kichcha Sudeep: ರಾಷ್ಟ್ರ ಭಾಷೆಯ ಕುರಿತಾದ ಚರ್ಚೆಯಲ್ಲಿ ಅಜಯ್​ ದೇವಗನ್​ ಮತ್ತು ಕಿಚ್ಚ ಸುದೀಪ್​ ನಡುವೆ ಟ್ವಿಟರ್​ನಲ್ಲಿ ಜಟಾಪಟಿ ನಡೆದಿತ್ತು. ಆ ಕುರಿತು ಸುದೀಪ್​ ಈಗ ಪ್ರತಿಕ್ರಿಯೆ ನೀಡಿದ್ದಾರೆ.

Kichcha Sudeep: ಸುದೀಪ್-ಅಜಯ್​ ದೇವಗನ್​ ನಡುವಿನ ಟ್ವೀಟ್​ ಸಮರಕ್ಕೆ ಮೂರನೇ ವ್ಯಕ್ತಿ ಕಾರಣ; ಕಿಚ್ಚ ಹೇಳಿದ್ದೇನು?
ಅಜಯ್ ದೇವಗನ್, ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 20, 2022 | 11:21 AM

ನಟ ಕಿಚ್ಚ ಸುದೀಪ್​ ಅವರು ಸದ್ಯ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಆ ಸಲುವಾಗಿ ಅವರು ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರಿಗೆ ಹತ್ತು-ಹಲವು ವಿಚಾರಗಳ ಬಗ್ಗೆ ಪ್ರಶ್ನೆ ಎದುರಾಗುತ್ತಿದೆ. ಏಪ್ರಿಲ್​ ತಿಂಗಳಲ್ಲಿ ಸುದೀಪ್​ ಮತ್ತು ಬಾಲಿವುಡ್​ ನಟ ಅಜಯ್​ ದೇವಗನ್​ (Ajay Devgn) ನಡುವೆ ಟ್ವಿಟರ್​ ಸಮರ ಏರ್ಪಟ್ಟಿತ್ತು. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಸುದೀಪ್​ ನೀಡಿದ್ದ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ಅಜಯ್​ ದೇವಗನ್​ ಅವರು ವಿವಾದ ಹುಟ್ಟುಹಾಕಿದ್ದರು. ಆ ವಿಚಾರದ ಬಗ್ಗೆ ಸುದೀಪ್ (Kichcha Sudeep)​ ಈಗ ಮತ್ತೆ ಮಾತನಾಡಿದ್ದಾರೆ. ಈ ವಿವಾದ ಶುರುವಾಗಲು ಮೂರನೇ ವ್ಯಕ್ತಿ ಕಾರಣ ಎಂದು ಅವರು ಹೇಳಿದ್ದಾರೆ. ‘ಹಿಂದುಸ್ತಾನ್​ ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

ರಾಷ್ಟ್ರ ಭಾಷೆಯ ಕುರಿತಾದ ಚರ್ಚೆಯಲ್ಲಿ ಅಜಯ್​ ದೇವಗನ್​ ಮತ್ತು ಸುದೀಪ್​ ನಡುವೆ ಟ್ವಿಟರ್​ನಲ್ಲಿ ಜಟಾಪಟಿ ನಡೆಯಿತು. ಆರಂಭದಲ್ಲಿ ಇಬ್ಬರೂ ಇಂಗ್ಲಿಷ್​ನಲ್ಲಿ ಟ್ವೀಟ್​ ಮಾಡಿದ್ದರು. ಆದರೆ ಅಜಯ್​ ದೇವಗನ್​ ಏಕಾಏಕಿ ಹಿಂದಿಯಲ್ಲಿ ಟ್ವೀಟ್​ ಮಾಡುವ ಮೂಲಕ ದಕ್ಷಿಣ ಭಾರತದವರನ್ನು ಕೆಣಕಿದರು. ಈ ಕುರಿತು ಸುದೀಪ್​ ಮಾತನಾಡಿದ್ದಾರೆ. ‘ಅಜಯ್​ ದೇವಗನ್​ ಆ ರೀತಿ ಮಾಡುವವರಲ್ಲ ಎಂಬುದು ನನಗೆ ಖಚಿತವಾಗಿ ತಿಳಿದಿದೆ. ಅವರು ಹಾಗೆ ಹಿಂದಿಯಲ್ಲಿ ಟ್ವೀಟ್​ ಮಾಡುವಂತೆ ಐಡಿಯಾ ನೀಡಿದ ಮೂರನೇ ವ್ಯಕ್ತಿ ಯಾರೋ ಇದ್ದಾರೆ. ಅದು ಯಾರು ಅಂತ ತಿಳಿಯಲು ಕೂಡ ನಾನು ಇಷ್ಟಪಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ದಕ್ಷಿಣ ಭಾರತದವರಾದ ನಾವೆಲ್ಲರೂ ಶಾಲೆಗೆ ಹೋಗಿ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಯುವುದಕ್ಕಿಂತ ಮುನ್ನವೇ ಹಿಂದಿ ಸಿನಿಮಾಗಳನ್ನು ನೋಡಿ ಆ ಭಾಷೆ ಕಲಿತೆವು. ಕಿಶೋರ್​ ಕುಮಾರ್​ ಮತ್ತು ಅಮಿತಾಭ್​ ಬಚ್ಚನ್​ ಅವರೇ ನಮಗೆ ಶಿಕ್ಷಕರು. ಅವರಿಂದಾಗಿಯೇ ನಾವು ಹಿಂದಿ ಕಲಿತಿದ್ದು’ ಎಂದು ಸುದೀಪ್​ ಹೇಳಿದ್ದಾರೆ.

ಇದನ್ನೂ ಓದಿ
Image
ಬಾಗಲಕೋಟೆಯಲ್ಲಿ ರಾ.. ರಾ.. ರಕ್ಕಮ್ಮ ಹಾಡಿಗೆ ನೂರಾರು ಜನರಿಂದ ಭರ್ಜರಿ ಸ್ಟೆಪ್
Image
Jacqueline Fernandez: ಸೆನ್ಸೇಶನ್ ಸೃಷ್ಟಿಸಿದ ‘ರಾ ರಾ ರಕ್ಕಮ್ಮ’; ಕನ್ನಡದಲ್ಲೇ ಧನ್ಯವಾದ ಹೇಳಿದ ಜಾಕ್ವೆಲಿನ್​
Image
 ‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ
Image
Vikrant Rona: ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

ಸುದೀಪ್​ ಅವರ ಗಮನವೆಲ್ಲ ಈಗ ‘ವಿಕ್ರಾಂತ್​ ರೋಣ’ ಸಿನಿಮಾದ ಮೇಲಿದೆ. ಈ ಚಿತ್ರಕ್ಕೆ ಅನೂಪ್​ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್​ ಮಂಜು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಬಿ. ಲೋಕನಾಥ್​ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡುಗಳು ಸೂಪರ್ ಹಿಟ್​ ಆಗಿವೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ