‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ

ಅರವಿಂದ್ ಹಾಗೂ ದಿವ್ಯಾ ಒಟ್ಟಿಗೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ‘ರಾ ರಾ ರಕ್ಕಮ್ಮಾ..’ ಹಾಡಿಗೆ ರೀಲ್ಸ್ ಮಾಡಿ ಅದನ್ನು ಪೋಸ್ಟ್​ ಮಾಡಿದ್ದಾರೆ.

 ‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ
ಅರವಿಂದ್​-ದಿವ್ಯಾ
TV9kannada Web Team

| Edited By: Rajesh Duggumane

May 28, 2022 | 1:31 PM

ಕಿಚ್ಚ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ‘ರಾ ರಾ ರಕ್ಕಮ್ಮಾ..’ (Ra Ra Rakkamma Song) ಹಾಡಿನ ಟ್ರೆಂಡ್ ಎಲ್ಲೆಲ್ಲೂ ಜೋರಾಗಿದೆ. ಯೂಟ್ಯೂಬ್​​ನಲ್ಲಿ ಲಕ್ಷಲಕ್ಷ ವೀವ್ಸ್ ಕಂಡ ಈ ಹಾಡು ಇನ್​ಸ್ಟಾಗ್ರಾಮ್​ ರೀಲ್ಸ್​ನಲ್ಲೂ ಟ್ರೆಂಡ್ ಆಗಿದೆ. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಈ ಮೂಲಕ ಹಾಡಿನ ಹಾಗೂ ಚಿತ್ರದ ಖ್ಯಾತಿಯನ್ನು ಹೆಚ್ಚಿಸುತ್ತಿದ್ದಾರೆ. ಸದ್ಯ, ‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ (Divya Uruduga) ಹಾಗೂ ಅರವಿಂದ್ ಕೆಪಿ. ಈ ರೀಲ್ಸ್​ಗೆ ಲಕ್ಷಾಂತರ ಮಂದಿ ಲೈಕ್ಸ್ ಒತ್ತಿದ್ದಾರೆ.

‘ಬಿಗ್ ಬಾಸ್ ಸೀಸನ್​ 8’ರಲ್ಲಿ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಸ್ಪರ್ಧಿಸಿದ್ದರು. ಒಂದು ಟಾಸ್ಕ್​​ನಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡರು. ಆ ಬಳಿಕ ಇವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆಯಿತು. ಈ ಗೆಳೆತನ ಬಿಗ್​ ಬಾಸ್​ ಮನೆಯಲ್ಲೇ ಪ್ರೀತಿಗೆ ತಿರುಗಿತು. ಇಬ್ಬರೂ ಇದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. ಮನೆಯಿಂದ ಹೊರ ಬಂದ ನಂತರವೂ ಇಬ್ಬರೂ ಅನ್ಯೋನ್ಯವಾಗಿದ್ದಾರೆ. ಈ ಬಗ್ಗೆ ಫ್ಯಾನ್ಸ್​ಗೆ ಖುಷಿ ಇದೆ.

ಅರವಿಂದ್ ಹಾಗೂ ದಿವ್ಯಾ ಒಟ್ಟಿಗೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ‘ರಾ ರಾ ರಕ್ಕಮ್ಮಾ..’ ಹಾಡಿಗೆ ರೀಲ್ಸ್ ಮಾಡಿ ಅದನ್ನು ಪೋಸ್ಟ್​ ಮಾಡಿದ್ದಾರೆ. ಈ ಡ್ಯಾನ್ಸ್​ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇಬ್ಬರೂ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

View this post on Instagram

A post shared by Aravind K P (@aravind_kp)

ಕಿಚ್ಚ ಸುದೀಪ್ ಹಾಗೂ ಅರವಿಂದ್​-ದಿವ್ಯಾ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇದಕ್ಕೆ ಕಾರಣವಾಗಿದ್ದು ಬಿಗ್ ಬಾಸ್ ಮನೆ. ಪ್ರತಿ ವಾರ ಸುದೀಪ್ ನಿರೂಪಕರಾಗಿ ಬರುತ್ತಿದ್ದರಿಂದ ಇವರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಹೀಗಾಗಿ, ‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರಕ್ಕೆ ಇವರೂ ಸಾಥ್ ನೀಡುತ್ತಿದ್ದಾರೆ.

ಇದನ್ನೂ ಓದಿ: ನನ್ನ ಮದುವೆ ಆಗಿಹೋಗಿದೆ ಅಂತ ಎಲ್ಲರೂ ಹೇಳ್ತಾ ಇದಾರೆ ಎಂದ ಅರವಿಂದ್​ ಕೆಪಿ; ದಿವ್ಯಾ ರಿಯಾಕ್ಷನ್​ ಹೇಗಿತ್ತು?

‘ರಾ ರಾ ರಕ್ಕಮ್ಮಾ’ ಲಿರಿಕಲ್ ವಿಡಿಯೋ ಮಾತ್ರ ರಿಲೀಸ್ ಆಗಿದೆ. ಇದರಲ್ಲಿ ಸುದೀಪ್ ಹಾಗೂ ಜಾಕ್ವೆಲಿನ್ ಡ್ಯಾನ್ಸ್​​ನ ಝಲಕ್ ತೋರಿಸಲಾಗಿದೆ. ಹೀಗಾಗಿ ವಿಡಿಯೋ ಸಾಂಗ್ ನೋಡಬೇಕು ಎಂದು ಫ್ಯಾನ್ಸ್ ಕಾದಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರ ಜುಲೈ 28ರಂದು ತೆರೆಗೆ ಬರುತ್ತಿದೆ. ಅನೂಪ್ ಭಂಡಾರಿ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada