AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Menon Marriage: ‘ಮೈನಾ’ ಸುಂದರಿಗೆ ಕಂಕಣ ಭಾಗ್ಯ: ಸ್ಟಾರ್​ ಹೀರೋ ಜತೆ ಮದುವೆ ಆಗಲಿರುವ ನಿತ್ಯಾ ಮೆನನ್​?

Nithya Menon: ಚಿತ್ರರಂಗದಲ್ಲೀಗ ಮದುವೆ ಸೀಸನ್​ ಶುರು ಆದಂತಿದೆ. ಆಲಿಯಾ ಭಟ್​-ರಣಬೀರ್​ ಕಪೂರ್​, ನಯನತಾರಾ-ವಿಘ್ನೇಶ್​ ಶಿವನ್​ ಬಳಿಕ ಖ್ಯಾತ ನಟಿ ನಿತ್ಯಾ ಮೆನನ್​ ಕೂಡ ಹಸೆಮಣೆ ಏರುತ್ತಿದ್ದಾರೆ ಎಂಬ ಬಗ್ಗೆ ಗುಸುಗುಸು ಹಬ್ಬಿದೆ.

Nithya Menon Marriage: ‘ಮೈನಾ’ ಸುಂದರಿಗೆ ಕಂಕಣ ಭಾಗ್ಯ: ಸ್ಟಾರ್​ ಹೀರೋ ಜತೆ ಮದುವೆ ಆಗಲಿರುವ ನಿತ್ಯಾ ಮೆನನ್​?
ನಿತ್ಯಾ ಮೆನನ್
TV9 Web
| Edited By: |

Updated on: Jul 20, 2022 | 11:57 AM

Share

ನಟಿ ನಿತ್ಯಾ ಮೆನನ್​ (Nithya Menon) ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳು ಕಳೆದಿವೆ. ಈಗಲೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಅನೇಕ ಸ್ಟಾರ್​ ಕಲಾವಿದರಿಗೆ ಜೋಡಿಯಾಗಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಈಗ ಅವರು ರಿಯಲ್​ ಲೈಫ್​ನಲ್ಲಿ ಜೋಡಿ ಹುಡುಕಿಕೊಂಡಿದ್ದಾರೆ. ಶೀಘ್ರದಲ್ಲೇ ನಿತ್ಯಾ ಮೆನನ್​ ಮದುವೆ (Nithya Menon Marriage) ಆಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ವಿಷಯ ತಿಳಿದು ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದ ನಿತ್ಯಾ ಮೆನನ್​ ಅವರು ಈಗ ಮಲಯಾಳಂ (Malayalam Film Industry) ಸ್ಟಾರ್​ ಹೀರೋ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂದು ಕೆಲವೆಡೆ ವರದಿ ಆಗಿದೆ. ಶೀಘ್ರದಲ್ಲೇ ಈ ಬಗ್ಗೆ ಅವರು ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.

ಚಿತ್ರರಂಗದಲ್ಲೀಗ ಮದುವೆ ಸೀಸನ್ ಶುರುವಾಗಿದೆ​ ಎಂದರೂ ತಪ್ಪಾಗದು. ಕೆಲವೇ ದಿನಗಳ ಹಿಂದೆ ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಏಪ್ರಿಲ್​ ತಿಂಗಳಲ್ಲಿ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರ ಮದುವೆ ನೆರವೇರಿತು. ಈಗ ನಿತ್ಯಾ ಮೆನನ್​ ವಿವಾಹದ ಬಗ್ಗೆ ಗುಸುಗುಸು ಹರಡಿದೆ. ಈ ಬಗ್ಗೆ ಅವರಿಂದಲೇ ಸೂಕ್ತ ಸ್ಪಷ್ಟನೆ ಸಿಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.

ಹಲವು ಸಿನಿಮಾಗಳಲ್ಲಿ ನಿತ್ಯಾ ಮೆನನ್​ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘19(1)(ಎ)’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಥಿಯೇಟರ್​ನಲ್ಲಿ ತೆರೆಕಾಣುವ ಬದಲು ನೇರವಾಗಿ ಒಟಿಟಿ ಮೂಲಕ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ವಿಜಯ್​ ಸೇತುಪತಿ ಕೂಡ ಅಭಿನಯಿಸಿದ್ದಾರೆ. ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ.

ಇದನ್ನೂ ಓದಿ
Image
Anita Bhat: ‘ನನ್ನ ಮಗಳಿಗೆ ಬಾಯ್​ ಫ್ರೆಂಡ್​ ಇದಾನೆ, ಆದ್ರೂ ಅವಳಿಗೆ ಮದುವೆ ಇಷ್ಟ ಇಲ್ಲ’: ಅನಿತಾ ಭಟ್​ ನೇರ ಮಾತು
Image
Priya Anand: ನಿತ್ಯಾನಂದ ಜತೆ ಮದುವೆ ಆಗ್ತೀನಿ ಅಂತ ‘ಜೇಮ್ಸ್​’ ನಟಿ ಪ್ರಿಯಾ ಆನಂದ್​ ಹೇಳಿದ್ದೇಕೆ?
Image
ಹನಿಮೂನ್ ಫೋಟೋ ಹಂಚಿಕೊಂಡ ನಯನತಾರಾ-ವಿಘ್ನೇಶ್; ನವ ದಂಪತಿ ತೆರಳಿದ್ದೆಲ್ಲಿಗೆ?
Image
ಹೆಣ್ಣಿನ ಕಡೆಯವರು ಕೇಳಿದ್ದು 11 ಕೋಟಿ ರೂ; ರಣಬೀರ್ ಕೊಟ್ಟಿದ್ದು 1 ಲಕ್ಷ ಮಾತ್ರ: ಆಲಿಯಾ ಮದುವೆ ಇನ್​ಸೈಡ್​​ ವಿಷಯ

ಮೂಲಗಳ ಪ್ರಕಾರ, ಮಲಯಾಳಂ ಚಿತ್ರರಂಗದ ಓರ್ವ ಸ್ಟಾರ್​ ಹೀರೋ ಜೊತೆ ನಿತ್ಯಾ ಮೆನನ್​ ಅವರು ಡೇಟಿಂಗ್​ ಮಾಡುತ್ತಿದ್ದಾರೆ. ಕಾಮನ್​ ಫ್ರೆಂಡ್​ ಮೂಲಕ ಇಬ್ಬರೂ ಪರಿಚಿತರಾದರು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. ಈಗ ಅವರಿಬ್ಬರ ಪ್ರೀತಿಯು ಮದುವೆ ಹಂತಕ್ಕೆ ಬಂದಿದೆ ಎಂದೆಲ್ಲ ಗಾಸಿಪ್​ ಹರಡಿದೆ. ಮದುವೆ ಆಗುವ ತೀರ್ಮಾನಕ್ಕೆ ಬಂದಿರುವುದರಿಂದ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲು ನಿತ್ಯಾ ಮೆನನ್​ ಹಿಂದೇಟು ಹಾಕುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ