ಟಿವಿಯಲ್ಲಿ ಬರೋಕೆ ರೆಡಿ ಆಯ್ತು ‘ಆರ್​ಆರ್​ಆರ್​’; ಸ್ಪೆಷಲ್ ದಿನಕ್ಕೆ ವೀಕ್ಷಕರಿಗೆ ವಿಶೇಷ ಗಿಫ್ಟ್

‘ಆರ್​ಆರ್​ಆರ್​’ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆ ಇದೆ. ಬ್ರಿಟಿಷರ ವಿರುದ್ಧ ಹೋರಾಡಿದ ಕೋಮರಂ ಭೀಮ್ ಹಾಗೂ ಅಲ್ಲುರಿ ಸೀತಾರಾಮ ರಾಜು ಅವರ ಪಾತ್ರಗಳನ್ನು ಇಟ್ಟುಕೊಂಡು ಕಾಲ್ಪನಿಕ ಕಥೆ ಹೆಣೆದು ಸಿನಿಮಾ ಮಾಡಲಾಗಿದೆ.

ಟಿವಿಯಲ್ಲಿ ಬರೋಕೆ ರೆಡಿ ಆಯ್ತು ‘ಆರ್​ಆರ್​ಆರ್​’; ಸ್ಪೆಷಲ್ ದಿನಕ್ಕೆ ವೀಕ್ಷಕರಿಗೆ ವಿಶೇಷ ಗಿಫ್ಟ್
ರಾಮ್ ಚರಣ್​-ಜ್ಯೂ.ಎನ್​ಟಿಆರ್​
TV9kannada Web Team

| Edited By: Rajesh Duggumane

Aug 11, 2022 | 9:00 AM

ಎಸ್​​​.ಎಸ್​. ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ ಮಾರ್ಚ್​ ತಿಂಗಳಲ್ಲಿ ತೆರೆಗೆ ಬಂದು ಸಾಕಷ್ಟು ಸದ್ದು ಮಾಡಿತು. ಈ ಚಿತ್ರ ಥಿಯೇಟರ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಈ ಮೂಲಕ ಚಿತ್ರ ಹೊಸ ಹೊಸ ದಾಖಲೆ ಬರೆದಿದೆ. ರಾಮ್​ ಚರಣ್ ಹಾಗೂ ಜ್ಯೂ.ಎನ್​ಟಿಆರ್ ಕಾಂಬಿನೇಷನ್, ರಾಜಮೌಳಿ ಕಲ್ಪನೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕೆಲ ತಿಂಗಳ ಹಿಂದೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಚಿತ್ರಮಂದಿರ ಹಾಗೂ ಒಟಿಟಿಯಲ್ಲಿ ‘ಆರ್​ಆರ್​ಆರ್​’ ಸಿನಿಮಾ (RRR Movie) ಮಿಸ್ ಮಾಡಿಕೊಂಡವರು ಈಗ ಟಿವಿಯಲ್ಲಿ ವೀಕ್ಷಿಸಬಹುದು.

‘ಆರ್​ಆರ್​ಆರ್’ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬಂತು. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆ ಆಯಿತು. ಆ ಪೈಕಿ ಹಿಂದಿ ಭಾಷೆಯ ಚಿತ್ರ ಜೀ ಸಿನಿಮಾದಲ್ಲಿ ಆಗಸ್ಟ್ 15ರಂದು ಪ್ರಸಾರ ಕಾಣುತ್ತಿದೆ. ರಾತ್ರಿ 8 ಗಂಟೆಗೆ ಈ ಚಿತ್ರ ಪ್ರೀಮಿಯರ್ ಆಗಲಿದೆ. ಈ ಬಗ್ಗೆ ಜೀ ಸಿನಿಮಾದವರು ಘೋಷಣೆ ಮಾಡಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆ ಇದೆ. ಬ್ರಿಟಿಷರ ವಿರುದ್ಧ ಹೋರಾಡಿದ ಕೋಮರಂ ಭೀಮ್ ಹಾಗೂ ಅಲ್ಲುರಿ ಸೀತಾರಾಮ ರಾಜು ಅವರ ಪಾತ್ರಗಳನ್ನು ಇಟ್ಟುಕೊಂಡು ಕಾಲ್ಪನಿಕ ಕಥೆ ಹೆಣೆದು ಸಿನಿಮಾ ಮಾಡಲಾಗಿದೆ. ಈ ಕಾರಣಕ್ಕೆ ಸ್ವಾತಂತ್ರ್ಯ ದಿನಾಚರಣೆ ಸಮಯದಂದೇ ಸಿನಿಮಾ ಟಿವಿಯಲ್ಲಿ ಪ್ರಸಾರ ಕಾಣುತ್ತಿದೆ.

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ತುಂಬಾನೇ ವಿಶೇಷವಾಗಿದೆ. ಇದಕ್ಕೆ ಕಾರಣವೂ ಇದೆ. ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದಿದೆ. ಈ ಕಾರಣದಿಂದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ‘ಆರ್​ಆರ್​ಆರ್​’ ಚಿತ್ರ ಪ್ರಸಾರ ಕಾಣುತ್ತಿರುವುದು ವಿಶೇಷ.

ಇದನ್ನೂ ಓದಿ: ಅಬ್ಬಬ್ಬಾ ಸೆಟ್​ನಲ್ಲೇ ಶೂಟ್ ಆದ ದೃಶ್ಯಕ್ಕೆ ಇಷ್ಟೊಂದು ಗ್ರಾಫಿಕ್ಸ್​; ಇಲ್ಲಿದೆ ‘ಆರ್​ಆರ್​ಆರ್’ ಸಿನಿಮಾದ ಅಸಲಿ ವಿಡಿಯೋ

ಇದನ್ನೂ ಓದಿ

‘ಆರ್​ಆರ್​ಆರ್’ ಚಿತ್ರದಲ್ಲಿ ರಾಮ್​ ಚರಣ್ ಹಾಗೂ ಜ್ಯೂ.ಎನ್​ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನೂರಾರು ಕೋಟಿ ಬಜೆಟ್​ನಲ್ಲಿ ಸಿದ್ಧವಾದ ಸಿನಿಮಾಗೆ ಡಿವಿವಿ ದಾನಯ್ಯ ಅವರು ಬಂಡವಾಳ ಹೂಡಿದ್ದರು. ಎಂ.ಎಂ. ಕೀರವಾಣಿ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಚಿತ್ರದ ಹಲವು ಹಾಡುಗಳು ಸೂಪರ್ ಹಿಟ್ ಆಗಿವೆ. ಟಿವಿಯಲ್ಲಿ ಸಿನಿಮಾ ನೋಡಲು ವೀಕ್ಷಕರು ಕಾದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada