‘ಅಟ್ಲೀಸ್ಟ್​​ ಇಷ್ಟ ಅಂತಾದ್ರೂ ಹೇಳು’; ಸ್ಫೂರ್ತಿಗೆ ನೇರವಾಗಿ ಹೇಳಿದ ರಾಕೇಶ್

‘ಬಿಗ್ ಬಾಸ್’ ಮನೆಯಲ್ಲಿ ಈವರೆಗೆ ಸಾಕಷ್ಟು ಪ್ರೇಮ ಕಥೆಗಳು ಹುಟ್ಟಿಕೊಂಡಿವೆ. ಈ ವರ್ಷವೂ ಯಾವುದಾದರೂ ಪ್ರೇಮಕಥೆಗಳು ಹುಟ್ಟಿಕೊಳ್ಳಲಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

‘ಅಟ್ಲೀಸ್ಟ್​​ ಇಷ್ಟ ಅಂತಾದ್ರೂ ಹೇಳು’; ಸ್ಫೂರ್ತಿಗೆ ನೇರವಾಗಿ ಹೇಳಿದ ರಾಕೇಶ್
ರಾಕೇಶ್​-ಸ್ಫೂರ್ತಿ
TV9kannada Web Team

| Edited By: Rajesh Duggumane

Aug 10, 2022 | 9:00 PM

‘ಬಿಗ್ ಬಾಸ್ ಒಟಿಟಿ’ (Bigg Boss OTT) ದಿನ ಕಳೆದಂತೆ ರಂಗು ಹೆಚ್ಚಿಸಿಕೊಳ್ಳುತ್ತಿದೆ. ಒಂದೇ ವಾರದಲ್ಲಿ ಎಲ್ಲರ ನಿಜವಾದ ಮುಖ ಬಯಲಾಗುತ್ತಿದೆ. ಯಾರು ಮೃದು ಎಂದುಕೊಂಡಿದ್ದರೋ ಅವರ ವೈಲೆಂಟ್ ಮುಖ ಅನಾವರಣಗೊಂಡಿದೆ. ವೈಲೆಂಟ್ ಎಂದುಕೊಂಡವರಲ್ಲೂ ಒಂದು ಮಗು ಮನಸ್ಸು ಇದೆ ಎಂಬುದು ಗೊತ್ತಾಗುತ್ತಿದೆ. ಈ ಮಧ್ಯೆ ಮನೆಯಲ್ಲಿ ಲವ್ ವಿಚಾರ ಚರ್ಚೆಗೆ ಬರುತ್ತಿದೆ. ಸ್ಫೂರ್ತಿ ಗೌಡ (Spoorthi Gowda) ಹಾಗೂ ರಾಕೇಶ್ ಇಬ್ಬರೂ ದಿನ ಕಳೆದಂತೆ ಅನ್ಯೋನ್ಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರ ಸಾಕಷ್ಟು ಹೈಲೈಟ್ ಆಗುತ್ತಿದೆ.

‘ಬಿಗ್ ಬಾಸ್’ ಮನೆಯಲ್ಲಿ ಈವರೆಗೆ ಸಾಕಷ್ಟು ಪ್ರೇಮ ಕಥೆಗಳು ಹುಟ್ಟಿಕೊಂಡಿವೆ. ಈ ಪೈಕಿ ಕೆಲ ಜೋಡಿಗಳು ಮದುವೆ ಆದ ಉದಾಹರಣೆ ಇದೆ. ಈ ವರ್ಷವೂ ಯಾವುದಾದರೂ ಪ್ರೇಮಕಥೆಗಳು ಹುಟ್ಟಿಕೊಳ್ಳಲಿದೆಯೇ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ಈ ಸಂದರ್ಭದಲ್ಲಿ ಸ್ಫೂರ್ತಿ ಗೌಡ ಹಾಗೂ ರಾಕೇಶ್ ನಡುವೆ ಆಪ್ತತೆ ಬೆಳೆಯುತ್ತಿದೆ.

‘ಬಿಗ್ ಬಾಸ್​’ ಮನೆಯಲ್ಲಿ ರಾಕೇಶ್ ಹಾಗೂ ಸ್ಫೂರ್ತಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಒಂದು ಘಟನೆ ವೀಕ್ಷಕರ ಗಮನ ಸೆಳೆದಿದೆ. ‘ನಿಮಗೆ ಯಾರ ಮೇಲಾದರೂ ಲವ್ ಆದರೆ ಹೇಳ್ತೀರಾ?’ ಎಂದು ಸ್ಫೂರ್ತಿಗೆ ಪ್ರಶ್ನೆ ಮಾಡಿದರು ರಾಕೇಶ್. ‘ನಾನಾಗಿ ಯಾರಿಗೂ ಪ್ರಪೋಸ್ ಮಾಡಲ್ಲ. ಹುಡುಗನೇ ನನ್ನ ಬಳಿ ಬಂದು ಪ್ರೀತಿ ಹೇಳಿಕೊಳ್ಳಬೇಕು. ಆ ರೀತಿ ಮಾಡ್ತೀನಿ’ ಎಂದರು ಸ್ಫೂರ್ತಿ.

‘ನೀನು ಟಿಪಿಕಲ್ ಹುಡುಗಿ ತರ ಆಡ್ತೀರಲ್ಲ. ಲವ್ ಆದ್ರೆ ಲವ್ ಆಗಿದೆ ಎಂದು ಹೇಳಿಕೊಳ್ಳಬೇಕು. ಅಟ್ಲೀಸ್ಟ್​ ಇಷ್ಟ ಇದೆ ಎಂದ್ರೆ ಇಷ್ಟ ಇದೆ ಅಂತ ಹೇಳಿ’ ಎಂದರು ರಾಕೇಶ್. ‘ಇಲ್ಲಿ ಯಾರೂ ಇಷ್ಟ ಆಗಿಲ್ಲ. ಮನೆ ಹೊರಗೆ ಹೋಗಿ ಯಾರಾದರೂ ಇಷ್ಟ ಆದರೆ, ಇಷ್ಟ ಆಗಿದೆ ಅಂತ ಹೇಳ್ತೀನಿ’ ಎಂದರು ಅವರು.

ಇದನ್ನೂ ಓದಿ: ಸ್ಫೂರ್ತಿಗೆ ಪ್ರೀತಿಯಿಂದ ಚಪಾತಿ ತಿನ್ನಿಸಿದ ರಾಕೇಶ್; ‘ನಮ್ಮಿಬರ ಜೋಡಿ ಓಕೆ ನಾ’ ಎಂದು ಗುರೂಜಿ ಬಳಿ ಕೇಳಿದ ನಟಿ

ಇದನ್ನೂ ಓದಿ

ಸ್ಫೂರ್ತಿ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಅದರಿಂದ ಅರ್ಧಕ್ಕೆ ಓಡಿ ಬಂದರು. ಇಂಜಿನಿಯರಿಂಗ್ ಕೂಡ ಅರ್ಧಕ್ಕೆ ತೊರೆದಿದ್ದಾರೆ. ಕಷ್ಟ ಎನಿಸಿದಾಗ ಅವರು ಮಾಡುತ್ತಿರುವ ಕೆಲಸದಿಂದ ಹೊರ ಬರುತ್ತಾರೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಹಲವು ಟಾಸ್ಕ್​ಗಳನ್ನು ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada