AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

Sonu Srinivas Gowda | Bigg Boss Kannada OTT: ‘ಬೇಗ ಫೋನ್​ ನಂಬರ್​ ಹೇಳಮ್ಮ ಡಯಲ್​ ಮಾಡುತ್ತೇನೆ’ ಎಂದು ಲೋಕೇಶ್​ ಕೇಳಿದರು. ಆಗ ಸೋನು ಶ್ರೀನಿವಾಸ್​ ಗೌಡ ಒಂದು ನಂಬರ್​ ಶೇರ್​ ಮಾಡಿದರು.

Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ
ಸೋನು ಶ್ರೀನಿವಾಸ್ ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on:Aug 10, 2022 | 11:38 AM

ಟಿಕ್​ಟಾಕ್​ ಮತ್ತು ರೀಲ್ಸ್​ ಮೂಲಕ ಫೇಮಸ್​ ಆದ ಸೋನು ಶ್ರೀನಿವಾಸ್​ ಗೌಡ ಅವರು ಈಗ ಬಿಗ್​ ಬಾಸ್​ ಮನೆಯಲ್ಲಿ ಹೈಲೈಟ್​ ಆಗುತ್ತಿದ್ದಾರೆ. ಅವರಿಗೆ ಈ ರಿಯಾಲಿಟಿ ಶೋನಲ್ಲಿ ಅವಕಾಶ ನೀಡಿರುವುದಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಹಿಗ್ಗಾಮುಗ್ಗ ಟ್ರೋಲ್​ ಮಾಡಲಾಗುತ್ತಿದೆ. ಈ ಹಿಂದೆ ಅವರ ಖಾಸಗಿ ವಿಡಿಯೋ (Sonu Srinivas Gowda Viral Video) ಲೀಕ್​ ಆಗಿ ವೈರಲ್​ ಆಗಿತ್ತು. ಆ ಬಗ್ಗೆ ಬಿಗ್​ ಬಾಸ್ ಮನೆಯೊಳಗೂ ಸೋನು ಶ್ರೀನಿವಾಸ್​ ಗೌಡ ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಈಗ ತಮ್ಮ ಫೋನ್​ ನಂಬರ್​ (Sonu Srinivas Gowda Phone Number) ಕೂಡ ಬಯಲು ಮಾಡಿದ್ದಾರೆ. ಆದರೆ ಅದರಲ್ಲಿ ಒಂದು ಟ್ವಿಸ್ಟ್​ ನೀಡಿದ್ದಾರೆ. ಇಂಥ ಹಲವು ಘಟನೆಗಳ ಮೂಲಕ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಸದ್ದು ಮಾಡುತ್ತಿದೆ.

ಸೋನು ಶ್ರೀನಿವಾಸ್​ ಗೌಡ ಅವರಿಗೆ ಸೋಶಿಯಲ್​ ಮೀಡಿಯಾಲ್ಲಿ ಸುಮಾರು 8 ಲಕ್ಷ ಫಾಲೋವರ್ಸ್ ಇದ್ದಾರೆ. ಅವರ ಫೋನ್ ನಂಬರ್​ ತಿಳಿದುಕೊಳ್ಳಬೇಕು ಎಂಬ ಹಂಬಲ ಅನೇಕರಿಗೆ ಇದೆ. ಆದರೆ ಅವರು ಅಷ್ಟು ಸುಲಭಕ್ಕೆ ಕಾಂಟ್ಯಾಕ್ಟ್​ ನಂಬರ್​ ಕೊಡುವವರಲ್ಲ. ಹಾಗಿದ್ದರೂ ಕೂಡ ಬಿಗ್​ ಬಾಸ್​ ಮನೆಯಲ್ಲಿ ಫೋನ್​ ನಂಬರ್​ ಶೇರ್​ ಮಾಡಿಕೊಂಡಿದ್ದಾರೆ. ಅದ್ರಲ್ಲೂ ಒಂದಷ್ಟು ಚಾಲಾಕಿತನ ತೋರಿಸಿದಾರೆ.

‘ಬೇಗ ಫೋನ್​ ನಂಬರ್​ ಹೇಳಮ್ಮ ಡಯಲ್​ ಮಾಡುತ್ತೇನೆ’ ಎಂದು ಲೋಕೇಶ್​ ಕೇಳಿದರು. ಅದಕ್ಕೆ ಸೋನು ಗೌಡ 99876543210 ಎಂದರು. ಇದು ಸುಳ್ಳು ನಂಬರ್​ ಎಂದರು ಸ್ಫೂರ್ತಿ ಗೌಡ. ‘ಅದನ್ನು ನಾನು ಉಲ್ಪಾ ಪಲ್ಟಾ ಹೇಳಿದ್ದೀನಿ. ಈ ನಂಬರ್​ ಯಾವುದೇ ಕಾರಣಕ್ಕೂ ಇರಲ್ಲ. ನಿಮ್ಮಂಥ ಜಾಣರು ಇರ್ತೀರಿ ಅಂತ ನಂಗೆ ಗೊತ್ತು’ ಎಂದಿದ್ದಾರೆ ಸೋನು ಗೌಡ.

ಇದನ್ನೂ ಓದಿ
Image
Sonu Srinivas Gowda: ಖಾಸಗಿ ವಿಡಿಯೋ ಲೀಕ್​ ಆಗಿದ್ದು ಹೇಗೆ? ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿದ ಸೋನು ಶ್ರೀನಿವಾಸ್​ ಗೌಡ
Image
Sanya Iyer: ಅಪ್ಪನೇ ಮಗಳ ಖಾಸಗಿ ವಿಡಿಯೋ ರೆಕಾರ್ಡ್​ ಮಾಡಿದ್ದ; ಸಾನ್ಯಾ ಅಯ್ಯರ್​ ತಾಯಿ ಹೇಳಿದ ಕರಾಳ ಸತ್ಯಗಳು
Image
Sonu Srinivas Gowda: ಮೊದಲ ವಾರವೇ ಸೋನು ಗೌಡ ನಾಮಿನೇಟ್​; 8 ಸ್ಪರ್ಧಿಗಳ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ
Image
Sonu Srinivas Gowda: ‘ಸುದೀಪ್​ ಇರುವ ವೇದಿಕೆಗೆ ಇದು ಗೌರವ ಅಲ್ಲ’: ಸೋನು ಶ್ರೀನಿವಾಸ್​ ಗೌಡ ಆಯ್ಕೆ ಆಗಿದ್ದಕ್ಕೆ ನೆಟ್ಟಿಗರು ಗರಂ

ಸೋನು ಗೌಡ ಅವರು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಆ ಆತನ ಜತೆ ವಿಡಿಯೋ ಕಾಲ್​ ಮಾಡುವಾಗ ಮಿತಿ ಮೀರಿ ನಡೆದುಕೊಂಡಿದ್ದರು. ಆ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡಿದ್ದ ಬಾಯ್​ ಫ್ರೆಂಡ್​ ನಂತರ ಬ್ಲಾಕ್​ ಮೇಲ್​ ಮಾಡಿದ ಹಾಗೂ ವಿಡಿಯೋ ವೈರಲ್​ ಮಾಡಿದ ಎಂದು ಸೋನು ಗೌಡು ಹೇಳಿಕೊಂಡಿದ್ದಾರೆ. ಆ ವಿಡಿಯೋ ವೈರಲ್​ ಆದ ಬಳಿಕ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿತ್ತು. ಅವುಗಳನ್ನೆಲ್ಲ ಎದುರಿಸಿ ಅವರು ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಶೈನ್​ ಆಗುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:36 am, Wed, 10 August 22

VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ