Sonu Srinivas Gowda: ಮೊದಲ ವಾರವೇ ಸೋನು ಗೌಡ ನಾಮಿನೇಟ್​; 8 ಸ್ಪರ್ಧಿಗಳ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ

Bigg Boss OTT Kannada Nomination: 16 ಸ್ಪರ್ಧಿಗಳ ಪೈಕಿ ಸೋನು ಗೌಡ ಸೇರಿದಂತೆ ಒಟ್ಟು 8 ಜನರನ್ನು ನಾಮಿನೇಟ್​ ಮಾಡಲಾಗಿದೆ.​ ಮೊದಲ ವಾರ ಯಾರು ಬಿಗ್​ ಬಾಸ್​ ಮನೆಯಿಂದ ಹೊರಬರುತ್ತಾರೆ ಎಂಬ ಕೌತುಕ ಮೂಡಿದೆ.

Sonu Srinivas Gowda: ಮೊದಲ ವಾರವೇ ಸೋನು ಗೌಡ ನಾಮಿನೇಟ್​; 8 ಸ್ಪರ್ಧಿಗಳ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ
ಸೋನು ಶ್ರೀನಿವಾಸ್ ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on: Aug 07, 2022 | 5:39 PM

ಶುರುವಿನಲ್ಲೇ ಅನೇಕ ಟ್ವಿಸ್ಟ್​ಗಳನ್ನು ಪಡೆದುಕೊಳ್ಳುತ್ತ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಮೊದಲ ಸೀಸನ್​ ಸಾಗುತ್ತಿದೆ. ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟು ಕೆಲವೇ ಗಂಟೆಗಳು ಕಳೆಯುತ್ತಿದ್ದಂತೆಯೇ ನಾಮಿನೇಷನ್​ ಪ್ರಕ್ರಿಯೆ ಶುರುವಾಗಿದೆ. ಮೊದಲ ವಾರ ಯಾರು ಹೊರಗೆ ಹೋಗಬೇಕು ಎಂಬ ಚರ್ಚೆ ಆರಂಭ ಆಗಿದೆ. ವಾಡಿಕೆಯಂತೆ ಸ್ಪರ್ಧಿಗಳೆಲ್ಲರೂ ಒಂದಷ್ಟು ಹೆಸರನ್ನು ಗೌಪ್ಯವಾಗಿ ಬಿಗ್​ ಬಾಸ್​ಗೆ ಸೂಚಿಸಿದ್ದಾರೆ. ಆ ಪೈಕಿ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಹೆಸರು ಕೂಡ ಇದೆ. ಹಾಗಾದರೆ ಅವರು ಮೊದಲ ವಾರವೇ ಬಿಗ್​ ಬಾಸ್​ ಮನೆಯಿಂದ ಹೊರ ನಡೆಯುತ್ತಾರಾ ಎಂಬ ಕೌತುಕ ಮೂಡಿದೆ. ಸೋನು ಆಯ್ಕೆ ಆಗಿರುವ ಬಗ್ಗೆ ನೆಟ್ಟಿಗರಿಗೆ ಅಸಮಾಧಾನ ಇದೆ. ಅವರು ಬೇಗ ಎಲಿಮಿನೇಟ್​ ಆಗಲಿ ಎಂದು ತುಂಬ ಜನರು ಕಮೆಂಟ್​ ಮಾಡುತ್ತಿದ್ದಾರೆ. ಈಗ ಅವರು ನಾಮಿನೇಟ್​ ಆಗಿರುವುದರಿಂದ ಬಿಗ್​ ಬಾಸ್​ (Bigg Boss) ಒಟಿಟಿ ಮೊದಲ ವಾರದ ಎಪಿಸೋಡ್​ಗಳು ಬಹಳ ಕುತೂಹಲ ಹುಟ್ಟುಹಾಕಿವೆ.

ಸೋನು ಶ್ರೀನಿವಾಸ್​ ಗೌಡ ಸೇರಿದಂತೆ ಒಟ್ಟು 8 ಜನರು ಮೊದಲ ವಾರವೇ ನಾಮಿನೇಟ್​ ಆಗಿದ್ದಾರೆ. ಸ್ಫೂರ್ತಿ ಗೌಡ, ಆರ್ಯವರ್ಧನ್​ ಗುರೂಜಿ, ಜಯಶ್ರೀ ಆರಾಧ್ಯಾ, ನಂದಿನಿ, ಜಶ್ವಂತ್​, ಕಿರಣ್​ ಯೋಗೇಶ್ವರ್​ ಮತ್ತು ಅಕ್ಷತಾ ಕುಕ್ಕಿ ಅವರ ಮೇಲೆ ಎಲಿಮಿನೇಷನ್​ ಕತ್ತಿ ತೂಗುತ್ತಿದೆ. ಈ ಪೈಕಿ ಯಾರು ಬಿಗ್​ ಬಾಸ್​ ಮನೆಯಿಂದ ಮೊದಲು ಹೊರಬರುತ್ತಾರೆ ಎಂದು ತಿಳಿಯಲು ವೀಕೆಂಡ್​ ಎಪಿಸೋಡ್​ ನೋಡಬೇಕು.

ಇನ್ನುಳಿದ ಸ್ಪರ್ಧಿಗಳಾದ ಚೈತ್ರಾ ಹಳ್ಳಿಕೇರಿ, ಅರ್ಜುನ್​ ರಮೇಶ್​, ಲೋಕೇಶ್​, ಸೋಮಣ್ಣ ಮಾಚಿಮಾಡ, ರಾಕೇಶ್​ ಅಡಿಗ, ಸಾನ್ಯಾ ಐಯ್ಯರ್, ಉದಯ್​ ಸೂರ್ಯ, ರೂಪೇಶ್​ ಶೆಟ್ಟಿ ಸದ್ಯಕ್ಕೆ ಸೇಫ್​ ಆಗಿದ್ದಾರೆ. ನಾಮಿನೇಟ್​ ಆಗಿರುವವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಹೆಚ್ಚು ಶ್ರಮ ಹಾಕಬೇಕು. ಕಡಿಮೆ ಸಮಯದಲ್ಲಿಯೇ ವೀಕ್ಷಕರಿಂದ ಹೆಚ್ಚ ವೋಟ್​ ಪಡೆಯಲು ಪ್ರಯತ್ನಿಸಬೇಕು.

ಇದನ್ನೂ ಓದಿ
Image
Sonu Srinivas Gowda: ‘ಸುದೀಪ್​ ಇರುವ ವೇದಿಕೆಗೆ ಇದು ಗೌರವ ಅಲ್ಲ’: ಸೋನು ಶ್ರೀನಿವಾಸ್​ ಗೌಡ ಆಯ್ಕೆ ಆಗಿದ್ದಕ್ಕೆ ನೆಟ್ಟಿಗರು ಗರಂ
Image
Bigg Boss OTT Kannada: ಮೊದಲ ದಿನವೇ ಬಿಗ್​ ಬಾಸ್​ನಲ್ಲಿ ಕಣ್ಣೀರ ಕೋಡಿ; ನೋವು ತೋಡಿಕೊಂಡು ಗಳಗಳನೆ ಅತ್ತ ಸ್ಪರ್ಧಿಗಳು
Image
‘ನಾನು ಸ್ಮೋಕ್​ ಮಾಡ್ತೀನಿ, ಅದ್ರಲ್ಲಿ ತಪ್ಪೇನಿದೆ?’ ‘ಬಿಗ್​ ಬಾಸ್​​’ನಲ್ಲಿ ಸೋನು ಗೌಡ ನೇರ ಪ್ರಶ್ನೆ
Image
ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಬಿಗ್​ ಬಾಸ್​​ಗೆ ಸ್ಪರ್ಧಿ; ಈ ಕಲಾವಿದನ ಬದುಕು ಎಷ್ಟು ಕಷ್ಟ ಇತ್ತು ಗೊತ್ತಾ?

ಕನ್ನಡದಲ್ಲಿ ಇದೇ ಮೊದಲ ಸಲ ‘ಬಿಗ್​ ಬಾಸ್​ ಒಟಿಟಿ’ ಶುರುವಾಗಿದೆ. ‘ವೂಟ್​ ಸೆಲೆಕ್ಟ್​’ ಮೂಲಕ ಈ ಶೋ ಪ್ರಸಾರ ಆಗುತ್ತಿದೆ. ಇದು ವೀಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ. ಟಿವಿಗೆ ಹೋಲಿಸಿದರೆ ಇಲ್ಲಿ ಒಂದಷ್ಟು ಬದಲಾವಣೆಗಳು ಎದುರಾಗುವ ಸಾಧ್ಯತೆ ಇದೆ. ದಿನ 24 ಗಂಟೆಯೂ ಸ್ಪರ್ಧಿಗಳ ಚಟುವಟಿಕೆಯನ್ನು ವೀಕ್ಷಿಸಲು ‘ವೂಟ್​ ಸೆಲೆಕ್ಟ್​’ ಚಂದಾದಾರರಿಗೆ ಅವಕಾಶ ಇದೆ. ಪ್ರತಿದಿನ ಸಂಜೆ 7 ಗಂಟೆಗೆ ಹೈಲೈಟ್ಸ್​ ಎಪಿಸೋಡ್​ ಪ್ರಸಾರ ಆಗಲಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ