Bigg Boss OTT Kannada: ರಿಯಲ್ ಲೈಫ್ನಲ್ಲಿ ಸಾನ್ಯಾ ಅಯ್ಯರ್ ಲವ್ ಮಾಡಿದ ಹುಡುಗನಿಂದ ಆಗಿತ್ತು ದೈಹಿಕ ಶೋಷಣೆ
Sanya Iyer | Deepa Iyer: ‘ಬಿಗ್ ಬಾಸ್ ಒಟಿಟಿ ಕನ್ನಡ’ ಸ್ಪರ್ಧಿ ಸಾನ್ಯಾ ಅಯ್ಯರ್ ಅವರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ. ಆ ಘಟನೆಗಳ ಬಗ್ಗೆ ತಾಯಿ ದೀಪಾ ಅಯ್ಯರ್ ವಿವರಿಸಿದ್ದಾರೆ.
ನಟಿ ಸಾನ್ಯಾ ಅಯ್ಯರ್ (Sanya Iyer) ಅವರ ಖಾಸಗಿ ಬದುಕಿನ ಅನೇಕ ಸತ್ಯಗಳು ಹೊರಬರುತ್ತಿವೆ. ‘ಪುಟ್ಟಗೌರಿ ಮದುವೆ’ ಸೀರಿಯಲ್ ಮೂಲಕ ಫೇಮಸ್ ಆದ ಅವರು ಈಗ ‘ಬಿಗ್ ಬಾಸ್ ಒಟಿಟಿ ಕನ್ನಡ ಸೀಸನ್ 1’ (Bigg Boss OTT Kannada) ಶೋ ಮೂಲಕ ಇನ್ನಷ್ಟು ಖ್ಯಾತಿ ಪಡೆಯುತ್ತಿದ್ದಾರೆ. ಸಾನ್ಯಾ ಅಯ್ಯರ್ ಜೀವನದ ಅನೇಕ ಕಹಿ ಘಟನೆಗಳ ಬಗ್ಗೆ ಅವರ ತಾಯಿ ದೀಪಾ ಅಯ್ಯರ್ (Deepa Iyer) ಮಾತನಾಡಿದ್ದಾರೆ. ಮಗಳು ಲವ್ ಮಾಡಿದ್ದ ಹುಡುಗ ದೈಹಿಕವಾಗಿ ಶೋಷಣೆ ಮಾಡುತ್ತಿದ್ದ ಎಂಬುದನ್ನು ಅವರು ಬಾಯ್ಬಿಟ್ಟಿದ್ದಾರೆ.