AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss OTT Kannada: ಮೊದಲ ದಿನವೇ ಬಿಗ್​ ಬಾಸ್​ನಲ್ಲಿ ಕಣ್ಣೀರ ಕೋಡಿ; ನೋವು ತೋಡಿಕೊಂಡು ಗಳಗಳನೆ ಅತ್ತ ಸ್ಪರ್ಧಿಗಳು

Bigg Boss OTT Kannada Highlights: ‘ಬಿಗ್​ ಬಾಸ್​ ಒಟಿಟಿ ಕನ್ನಡ’ ಸೀಸನ್​ 1ರ ಮೊದಲ ದಿನವೇ ಬಹುತೇಕ ಎಲ್ಲ ಸ್ಪರ್ಧಿಗಳು ಎಮೋಷನಲ್​ ಕಾರ್ಡ್ ಬಳಸಿಕೊಂಡಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯ ಬದುಕಿನ ಕಷ್ಟಗಳೂ ಒಂದೊಂದು ರೀತಿ ಇವೆ.

Bigg Boss OTT Kannada: ಮೊದಲ ದಿನವೇ ಬಿಗ್​ ಬಾಸ್​ನಲ್ಲಿ ಕಣ್ಣೀರ ಕೋಡಿ; ನೋವು ತೋಡಿಕೊಂಡು ಗಳಗಳನೆ ಅತ್ತ ಸ್ಪರ್ಧಿಗಳು
ಬಿಗ್ ಬಾಸ್ ಕನ್ನಡ ಒಟಿಟಿ
TV9 Web
| Updated By: ಮದನ್​ ಕುಮಾರ್​|

Updated on: Aug 07, 2022 | 2:57 PM

Share

ಜನಪ್ರಿಯ ರಿಯಾಲಿಟಿ ಶೋ ‘ಬಿಗ್​ ಬಾಸ್​ ಒಟಿಟಿ ಕನ್ನಡ’ ಸೀಸನ್​ 1 (Bigg Boss OTT Kannada) ಆರಂಭ ಆಗಿದೆ. ಆಗಸ್ಟ್​ 6ರಂದು ಅದ್ದೂರಿಯಾಗಿ ಗ್ರ್ಯಾಂಡ್​ ಓಪನಿಂಗ್ ಮಾಡಲಾಗಿದೆ. ಹಲವು ಕ್ಷೇತ್ರಗಳಲ್ಲಿ ಫೇಮಸ್​ ಆದ ವ್ಯಕ್ತಿಗಳಿಗೆ ಈ ಬಾರಿ ಚಾನ್ಸ್​ ನೀಡಲಾಗಿದೆ. ಕಿಚ್ಚ ಸುದೀಪ್​ (Kichcha Sudeep) ಅವರು ಎಲ್ಲರಿಗೂ ಆತ್ಮೀಯವಾಗಿ ವೆಲ್​ಕಮ್​ ಮಾಡಿದ್ದಾರೆ. 16 ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಮೊದಲ ದಿನವೇ ಅಸಲಿ ಆಟ ಶುರು ಆಗಿದೆ. ಬಿಗ್ ಬಾಸ್​ಗೆ ಬರುವ ವ್ಯಕ್ತಿಗಳು ತಮ್ಮ ಗೋಳು ಹೇಳಿಕೊಂಡು ಕಣ್ಣೀರು ಹಾಕುವುದು ಕಾಮನ್​. ಈ ಬಾರಿ ಮೊದಲ ದಿನವೇ ಎಲ್ಲರೂ ಗಳಗಳನೆ ಅತ್ತಿದ್ದಾರೆ. ಎಲ್ಲರ ಬದುಕಿನಲ್ಲೂ ಕಷ್ಟಗಳಿವೆ. ಅವುಗಳ ಬಗ್ಗೆ ಸ್ಪರ್ಧಿಗಳು ಬಾಯಿ ಬಿಟ್ಟಿದ್ದಾರೆ. ಆ ಕಾರಣದಿಂದ ಆರಂಭದಲ್ಲೇ ‘ಬಿಗ್​ ಬಾಸ್’ (Bigg Boss Kannada) ಮನೆಯೊಳಗೆ​ ಎಮೋಷನಲ್​ ವಾತಾವರಣ ನಿರ್ಮಾಣ ಆಗಿದೆ.

ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್​ ಗೌಡ, ಸ್ಫೂರ್ತಿ ಗೌಡ, ನಂದು-ಜಶ್ವಂತ್​, ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕ್ಕಿ, ಅರ್ಜುನ್​ ರಮೇಶ್​, ಕಿರಣ್​ ಯೋಗೇಶ್ವರ್​, ಲೋಕೇಶ್​, ಸೋಮಣ್ಣ ಮಾಚಿಮಾಡ, ರಾಕೇಶ್​ ಅಡಿಗ, ಸಾನ್ಯಾ ಐಯ್ಯರ್, ಉದಯ್​ ಸೂರ್ಯ, ರೂಪೇಶ್​ ಶೆಟ್ಟಿ, ಜಯಶ್ರೀ ಆರಾಧ್ಯ ಅವರು ಬಿಗ್​ ಬಾಸ್​ ಮನೆ ಸೇರಿಕೊಂಡಿದ್ದಾರೆ.

ಇದನ್ನೂ ಓದಿ
Image
‘ನಾನು ಸ್ಮೋಕ್​ ಮಾಡ್ತೀನಿ, ಅದ್ರಲ್ಲಿ ತಪ್ಪೇನಿದೆ?’ ‘ಬಿಗ್​ ಬಾಸ್​​’ನಲ್ಲಿ ಸೋನು ಗೌಡ ನೇರ ಪ್ರಶ್ನೆ
Image
‘ಬಿಗ್​ ಬಾಸ್​ ಒಟಿಟಿ’ಗೆ ಕಾಲಿಟ್ಟ ರಾಜಸ್ಥಾನಿ ಬೆಡಗಿ; ಕನ್ನಡ ಮಾತನಾಡುವುದನ್ನು ಕೇಳಿ ಮೆಚ್ಚಿಕೊಂಡ ಸುದೀಪ್​
Image
Rakesh Adiga: ‘ಬಿಗ್​ ಬಾಸ್​’ ಮನೆಗೆ ರಾಕೇಶ್ ಅಡಿಗ ಎಂಟ್ರಿ; ಆರಂಭ ಆಗುತ್ತಾ ಸೆಕೆಂಡ್ ಇನ್ನಿಂಗ್ಸ್​?
Image
ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಬಿಗ್​ ಬಾಸ್​​ಗೆ ಸ್ಪರ್ಧಿ; ಈ ಕಲಾವಿದನ ಬದುಕು ಎಷ್ಟು ಕಷ್ಟ ಇತ್ತು ಗೊತ್ತಾ?

ಮೊದಲ ವಾರ ಎಂಬುದು ಎಲ್ಲ ಸ್ಪರ್ಧಿಗಳಿಗೂ ತುಂಬ ಮುಖ್ಯ. ಆದಷ್ಟು ಬೇಗ ಪ್ರೇಕ್ಷಕರನ್ನು ಸೆಳೆದುಕೊಳ್ಳಬೇಕು. ತಾವೇನು ಎಂಬುದನ್ನು ಜಗತ್ತಿನ ಮುಂದೆ ಪರಿಚಯ ಮಾಡಿಕೊಳ್ಳಲು ತುಂಬ ಕಡಿಮೆ ಸಮಯ ಇರುತ್ತದೆ. ಹಾಗಾಗಿ ಮೊದಲ ವಾರದಲ್ಲಿ ಪ್ರತಿ ನಿಮಿಷವೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅದೇ ಕಾರಣಕ್ಕೋ ಏನೋ ಬಹುತೇಕ ಎಲ್ಲ ಸ್ಪರ್ಧಿಗಳು ಎಮೋಷನಲ್​ ಕಾರ್ಡ್​ ಅನ್ನು ಮೊದಲ ದಿನವೇ ಬಳಸಿಕೊಂಡಿದ್ದಾರೆ.

ಎಲ್ಲ ಸ್ಪರ್ಧಿಗಳ ಬದುಕಿನ ಕಷ್ಟ ಒಂದೊಂದು ರೀತಿ ಇದೆ. ಚೈತ್ರಾ ಹಳ್ಳಿಕೇರಿ ಅವರಿಗೆ ಗಂಡನ ಮನೆಯವರಿಂದಲೇ ಮೋಸ, ಸೋಮಣ್ಣ ಮಾಚಿಮಾಡ ಅವರಿಗೆ ಸಂಸಾರದಲ್ಲಿ ಬಿರುಕು, ಸ್ಫೂರ್ತಿ ಗೌಡ ಅವರಿಗೆ ಅಮ್ಮನ ಸಾವಿನಿಂದ ಅಂಟಿಕೊಂಡ ಕಳಂಕ, ತಂದೆಯ ಪ್ರೀತಿ ಸಿಕ್ಕಿಲ್ಲ ಎಂಬುದು ಸಾನ್ಯಾ ಐಯ್ಯರ್​ ಕೊರಗು.. ಹೀಗೆ ಎಲ್ಲ ಸ್ಪರ್ಧಿಗಳು ನೋವು ತೋಡಿಕೊಂಡಿದ್ದಾರೆ.

ವೂಟ್​ ಸೆಲೆಕ್ಟ್​ ಮೂಲಕ ಈ ಶೋ ಪ್ರಸಾರ ಆಗುತ್ತಿದೆ. ದಿನ 24 ಗಂಟೆಗೂ ಲೈವ್​ ನೋಡಬಹುದು. ಪ್ರತಿ ದಿನ ಸಂಜೆ 7 ಗಂಟೆಗೆ ಹೈಲೈಟ್ಸ್​ ಪ್ರಸಾರ ಆಗಲಿದೆ. ವಾರಾಂತ್ಯದಿಂದ ಕಿಚ್ಚ ಸುದೀಪ್​ ಪಂಚಾಯಿತಿ ನಡೆಸಲಿದ್ದಾರೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ