AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಫೂರ್ತಿಗೆ ಪ್ರೀತಿಯಿಂದ ಚಪಾತಿ ತಿನ್ನಿಸಿದ ರಾಕೇಶ್; ‘ನಮ್ಮಿಬರ ಜೋಡಿ ಓಕೆ ನಾ’ ಎಂದು ಗುರೂಜಿ ಬಳಿ ಕೇಳಿದ ನಟಿ

ರಾಕೇಶ್ ಅವರು ಸ್ಫೂರ್ತಿಗೆ ಪ್ರೀತಿಯಿಂದ ಚಪಾತಿ ತಿನ್ನಿಸಿದರು. ಇದೇ ಸಮಯಕ್ಕೆ ಆರ್ಯವರ್ಧನ್ ಗುರೂಜಿ ಅವರ ಎಂಟ್ರಿ ಆಗಿದೆ. ‘ಏನ್ ನಡೀತಿದೆ ಇಲ್ಲಿ’ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಸ್ಫೂರ್ತಿ ಕೊಟ್ಟ ಉತ್ತರ ಸಾಕಷ್ಟು ಅಚ್ಚರಿ ಮೂಡಿಸಿದೆ.

ಸ್ಫೂರ್ತಿಗೆ ಪ್ರೀತಿಯಿಂದ ಚಪಾತಿ ತಿನ್ನಿಸಿದ ರಾಕೇಶ್; ‘ನಮ್ಮಿಬರ ಜೋಡಿ ಓಕೆ ನಾ’ ಎಂದು ಗುರೂಜಿ ಬಳಿ ಕೇಳಿದ ನಟಿ
ಸ್ಫೂರ್ತಿ-ರಾಕೇಶ್
TV9 Web
| Edited By: |

Updated on: Aug 09, 2022 | 8:48 PM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವರು ಖ್ಯಾತಿ ಗಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರಬಂದು ಮದುವೆ ಆಗಿದ್ದಾರೆ. ಈಗ ‘ಬಿಗ್ ಬಾಸ್ ಒಟಿಟಿ ಕನ್ನಡ’ ಆರಂಭ ಆಗಿದೆ. ಮನೆಯಲ್ಲಿ ರಾಕೇಶ್ (Rakesh Adiga) ಹಾಗೂ ಸ್ಫೂರ್ತಿ ಗೌಡ ಮಧ್ಯೆ ಏನೋ ನಡೆಯುತ್ತಿದೆ ಎಂಬ ಬಗ್ಗೆ ಪ್ರೇಕ್ಷಕರಿಗೆ ಅನುಮಾನ ಮೂಡಿದೆ. ಇಬ್ಬರೂ ಬಿಗ್ ಬಾಸ್ ಮನೆಯಲ್ಲಿ ಕ್ಲೋಸ್ ಆಗುತ್ತಿದ್ದಾರೆ. ಈಗ ರಾಕೇಶ್ ಹಾಗೂ ಸ್ಫೂರ್ತಿ ನಡುವಿನ ಫ್ರೆಂಡ್​ಶಿಪ್ ಪ್ರೀತಿಗೆ ತಿರುಗುತ್ತಿದೆಯೇ ಎಂಬ ಪ್ರಶ್ನೆ ವೀಕ್ಷಕರಿಗೆ ಮೂಡುತ್ತಿದೆ. ಸ್ಫೂರ್ತಿಗೂ ರಾಕೇಶ್​​​ ಕಡೆ ಒಲವು ಇದೆ ಎಂಬುದು ಸ್ಪಷ್ಟವಾಗುತ್ತಿದೆ.

‘ಬಿಗ್ ಬಾಸ್ ಒಟಿಟಿ’ ಶೋಗೆ ಸ್ಫೂರ್ತಿ ಹಾಗೂ ರಾಕೇಶ್ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಸ್ಫೂರ್ತಿ ಗೌಡ ಜತೆ ರಾಕೇಶ್​ ಫ್ಲರ್ಟ್​ ಮಾಡಿದ್ದರು. ರಾಕೇಶ್​ ಅವರು ಸ್ಫೂರ್ತಿ ಅವರ ಕೈ ಹಿಡಿದುಕೊಂಡು ಭವಿಷ್ಯ ನುಡಿಯುವ ನಾಟಕ ಮಾಡಿದ್ದರು. ಈ ವೇಳೆ ರಾಕೇಶ್ ಪ್ರೀತಿ-ಪ್ರೇಮದ ವಿಚಾರ ಎಳೆದು ತಂದಿದ್ದರು. ಈಗ ಈ ವಿಚಾರ ಮತ್ತೊಂದು ಹಂತಕ್ಕೆ ಹೋಗಿದೆ.

ರಾಕೇಶ್ ಅಡಿಗ ಚಪಾತಿ ತಿನ್ನುತ್ತಾ ಕೂತಿದ್ದರು. ಈ ವೇಳೆ ಬಂದ ಸ್ಫೂರ್ತಿ ಅವರು, ‘ಒಬ್ಬನೇ ತಿನ್ನುತ್ತಾ ಇದ್ದೀಯಾ. ನನಗೆ ಕೊಡಬೇಕು ಎಂದು ನಿನಗೆ ಅನಿಸುವುದಿಲ್ಲವೇ’ ಎಂದು ಪ್ರಶ್ನೆ ಮಾಡಿದರು. ಈ ವೇಳೆ ರಾಕೇಶ್ ಅವರು ಸ್ಫೂರ್ತಿಗೆ ಪ್ರೀತಿಯಿಂದ ಚಪಾತಿ ತಿನ್ನಿಸಿದರು. ಇದೇ ಸಮಯಕ್ಕೆ ಆರ್ಯವರ್ಧನ್ ಗುರೂಜಿ ಅವರ ಎಂಟ್ರಿ ಆಗಿದೆ. ‘ಏನ್ ನಡೀತಿದೆ ಇಲ್ಲಿ’ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ
Image
16 ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ವೋಟ್ ಪಡೆದ ಸೋಮಣ್ಣ ಮಾಚಿಮಾಡ; ಮೊದಲ ವಾರವೇ ಕಮಾಲ್
Image
ವಿಡಿಯೋ ಲೀಕ್ ವಿಚಾರದಲ್ಲಿ ಸೋನುಗೆ ಬುದ್ಧಿವಾದ ಹೇಳಿದ ಮನೆ ಮಂದಿ​; ಇದನ್ನು ಅವರು ಸ್ವೀಕರಿಸ್ತಾರಾ?
Image
‘ಮದುವೆ ಆದ ವ್ಯಕ್ತಿ ಜತೆ ರಿಲೇಶನ್​ಶಿಪ್​ನಲ್ಲಿದ್ದೆ, ಅವರಿಂದ ಜೂಜು ಕಲಿತೆ’; ಮಾರಿಮುತ್ತು ಮೊಮ್ಮೊಗಳು ಜಯಶ್ರೀ ಆರಾಧ್ಯ
Image
ರಾಕೇಶ್​​ಗೆ ಸ್ಫೂರ್ತಿ ಗೌಡ ಮೇಲೆ ಲವ್​​? ‘ಬಿಗ್​​ ಬಾಸ್​’ನಲ್ಲಿ ಮೊದಲ ವಾರವೇ ಹುಟ್ಟಿತು ಪ್ರೀತಿ-ಪ್ರೇಮದ ಚರ್ಚೆ

ಇದನ್ನೂ ಓದಿ: ರಾಕೇಶ್​​ಗೆ ಸ್ಫೂರ್ತಿ ಗೌಡ ಮೇಲೆ ಲವ್​​? ‘ಬಿಗ್​​ ಬಾಸ್​’ನಲ್ಲಿ ಮೊದಲ ವಾರವೇ ಹುಟ್ಟಿತು ಪ್ರೀತಿ-ಪ್ರೇಮದ ಚರ್ಚೆ

‘ನಮ್ಮಿಬ್ಬರ ಜೋಡಿ ಹೇಗೆ ಕಾಣುತ್ತಿದೆ ಗುರೂಜಿ? ನಮ್ಮ ಜಾತಕ ಹೊಂದುತ್ತದೆಯೇ? ಎಂದು ಗುರೂಜಿಗೆ ಸ್ಫೂರ್ತಿ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಗುರೂಜಿ, ‘ಈಗಲೇ ಹೇಳೋಕೆ ಆಗಲ್ಲ. ಹೌದು, ನಿಮ್ಮ ಮೊದಲನೇ ಲವ್ವಾ ಇದು?’ ಎಂದು ಮರು ಪ್ರಶ್ನೆ ಮಾಡಿದರು. ‘ಹೌದು ಮೊದಲ ಲವ್’ ಎಂದರು ಸ್ಫೂರ್ತಿ. ನಂತರ ಲವ್​​ ಏನು ಇಲ್ಲ ಎಂದು ತೇಪೆ ಹಚ್ಚುವ ಕೆಲಸ ಮಾಡಿದರು.