Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ಲೀಕ್ ವಿಚಾರದಲ್ಲಿ ಸೋನುಗೆ ಬುದ್ಧಿವಾದ ಹೇಳಿದ ಮನೆ ಮಂದಿ​; ಇದನ್ನು ಅವರು ಸ್ವೀಕರಿಸ್ತಾರಾ?

ರೂಪೇಶ್ ಹಾಗೂ ಸೋನು ಮಾತನಾಡುತ್ತಿದ್ದರು. ಈ ವೇಳೆ ವಿಡಿಯೋ ವಿಚಾರ ಮುನ್ನೆಲೆಗೆ ಬಂತು. ‘ನೀನು ಆವಾಗಲೇ ದೂರು ಕೊಡಬೇಕಿತ್ತು’ ಎಂದರು ರೂಪೇಶ್. ಇದಕ್ಕೆ ಸೋನು ಉತ್ತರಿಸಿದ್ದಾರೆ.

ವಿಡಿಯೋ ಲೀಕ್ ವಿಚಾರದಲ್ಲಿ ಸೋನುಗೆ ಬುದ್ಧಿವಾದ ಹೇಳಿದ ಮನೆ ಮಂದಿ​; ಇದನ್ನು ಅವರು ಸ್ವೀಕರಿಸ್ತಾರಾ?
ಸೋನು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 08, 2022 | 10:41 PM

ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ಸೋನು ಗೌಡ (Sonu Gowda) ಅವರು ಈಗ ‘ಬಿಗ್ ಬಾಸ್ ಒಟಿಟಿ’ಗೆ ಕಾಲಿಟ್ಟಿದ್ದಾರೆ. ಖಾಸಗಿ ವಿಡಿಯೋ ಲೀಕ್ ವಿಚಾರದಲ್ಲಿ ಅವರು ಓಪನ್ ಆಗಿ ಮಾತನಾಡಿದ್ದಾರೆ. ಈ ವಿಡಿಯೋ ಲೀಕ್ ಆಗುವುದರ ಹಿಂದೆ ಬಾಯ್​ಫ್ರೆಂಡ್ ಕೈವಾಡ ಇದೆ ಎಂದು ಅವರು ಆರೋಪ ಮಾಡಿದ್ದರು. ಈ ವಿಚಾರ ದೊಡ್ಮನೆಯಲ್ಲೂ ಚರ್ಚೆ ಆಗುತ್ತಿದೆ. ಕೆಲವರಿಗೆ ಸೋನು ಗೌಡ ಅವರ ವಿಡಿಯೋ ಲೀಕ್ ವಿಚಾರ ಗೊತ್ತು, ಇನ್ನೂ ಕೆಲವರಿಗೆ ಗೊತ್ತಿಲ್ಲ. ಸೋನು ಗೌಡ ಅವರಿಗೆ ಈ ವಿಚಾರದಲ್ಲಿ ಕೆಲವರು ಬುದ್ಧಿವಾದ ಹೇಳಿದ್ದಾರೆ. ಅದನ್ನು ಅವರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರೂಪೇಶ್ ಹಾಗೂ ಸೋನು ಮಾತನಾಡುತ್ತಿದ್ದರು. ಈ ವೇಳೆ ವಿಡಿಯೋ ವಿಚಾರ ಮುನ್ನೆಲೆಗೆ ಬಂತು. ‘ನೀನು ಆವಾಗಲೇ ದೂರು ಕೊಡಬೇಕಿತ್ತು’ ಎಂದರು ರೂಪೇಶ್. ‘ಗುರು ನಾನು ಎಫ್​ಐಆರ್ ಕೂಡ ಮಾಡಿಸಿದ್ದೇನೆ. ಅವನು ಅಮೆರಿಕದಲ್ಲಿ ಇದ್ದಾನೆ. ಅವನ ಹುಡುಕೋದು ಹೇಗೆ’ ಎಂದು ಪ್ರಶ್ನೆ ಮಾಡಿದರು ಸೋನು. ‘ನೀವು ಗರ್ಲ್ಸ್​​ ಯಾಕೆ ಅಷ್ಟು ನಂಬಿಕೆ ಇಡ್ತೀರಾ’ ಎಂದು ಸೋನುಗೆ ರೂಪೇಶ್ ಕೇಳಿದ್ದಾರೆ.

‘ನೀನು ಈಗ ಆ ವಿಚಾರದಲ್ಲಿ ಕ್ಲ್ಯಾರಿಟಿ ಕೊಟ್ಟಾಗಿದೆ. ಮತ್ತೆ ಆ ವಿಚಾರದಲ್ಲಿ ಮಾತನಾಡಬೇಡ. ಹಾಗಿದ್ದಾಗ ಮಾತ್ರ ನೀನು ಇಲ್ಲಿಂದ ಹೊರ ಹೋಗುವಾಗ ಬೇರೆ ರೀತಿಯ ಸೋನು ಆಗಿರ್ತೀಯಾ’ ಎಂದು ರೂಪೇಶ್ ಕಿವಿಮಾತು ಹೇಳಿದರು. ಇದಕ್ಕೆ ಸೋನು ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ಬಂತು.

ಇದನ್ನೂ ಓದಿ
Image
ಮಗು ಜನಿಸಿ ಮೂರು ದಿನಕ್ಕೆ ಎರಡನೇ ಪತ್ನಿ ಬಗ್ಗೆ ಮೊದಲ ಹೆಂಡತಿಗೆ ಹೇಳಿದ್ದ ಬಿಗ್ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್
Image
‘ಮದುವೆ ಆದ ವ್ಯಕ್ತಿ ಜತೆ ರಿಲೇಶನ್​ಶಿಪ್​ನಲ್ಲಿದ್ದೆ, ಅವರಿಂದ ಜೂಜು ಕಲಿತೆ’; ಮಾರಿಮುತ್ತು ಮೊಮ್ಮೊಗಳು ಜಯಶ್ರೀ ಆರಾಧ್ಯ
Image
ರಾಕೇಶ್​​ಗೆ ಸ್ಫೂರ್ತಿ ಗೌಡ ಮೇಲೆ ಲವ್​​? ‘ಬಿಗ್​​ ಬಾಸ್​’ನಲ್ಲಿ ಮೊದಲ ವಾರವೇ ಹುಟ್ಟಿತು ಪ್ರೀತಿ-ಪ್ರೇಮದ ಚರ್ಚೆ
Image
‘ಅವಳನ್ನು ಮರೆತು ಬದುಕೋಕೆ ಆಗುತ್ತಿಲ್ಲ’; ಮಾಜಿ ಪತ್ನಿ ನೆನೆದು ಸೋಮಣ್ಣ ಮಾಚಿಮಾಡ ಕಣ್ಣೀರು

ಜಯಶ್ರೀ ಕೂಡ ಸೋನುಗೆ ಕಿವಿಮಾತು ಹೇಳಿದರು. ‘ನಾನು ಆಡಿಯನ್ಸ್ ಆಗಿ ನಿನಗೆ ಕೆಲ ಮಾತನ್ನು ಹೇಳಬೇಕಿದೆ. ನಾನು ಹೇಳ್ತೀನಿ ಬೇಜಾರು ಮಾಡಿಕೊಳ್ಳಬೇಡ. ನೀನು ಕೆಲ ವಿಡಿಯೋ ಮಾಡಿ ಉರ್ಕೊಳೋರು ಉರ್ಕೊಳಿ ಎಂದು ಕ್ಯಾಪ್ಶನ್ ಕೊಡ್ತೀಯಾ. ಅದು ಹೇಟರ್​​ಗಳನ್ನು ಮತ್ತೂ ಪ್ರವೋಕೆ ಮಾಡುತ್ತದೆ. ನಿನ್ನ ವ್ಯಕ್ತಿತ್ವ ಏನು ಎಂಬುದನ್ನು ಇಲ್ಲಿ ಪ್ರೂವ್ ಮಾಡು. ನಾಲ್ಕು ಜನ ರೆಸ್ಪೆಕ್ಟ್ ನೀಡುವ ರೀತಿ ಮಾತನಾಡು’ ಎಂದು ಸೋನುಗೆ ಹೇಳಿದ್ದಾರೆ ಜಯಶ್ರೀ.

ಇದನ್ನೂ ಓದಿ: ‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ

ಸೋನುಗೆ ಮಕ್ಕಳ ಬುದ್ಧಿ ಇನ್ನೂ ಹೋಗಿಲ್ಲ ಎಂದು ಕೆಲವರು ಆಡಿಕೊಂಡಿದ್ದು ಇದೆ. ಇದು ಸೋನುಗೂ ಗೊತ್ತಿದೆ. ಮನೆಯಿಂದ ಹೊರ ಹೋಗುವ ಮೊದಲು ತಮ್ಮನ್ನು ತಾವು ಸಾಬೀತು ಮಾಡಿ ಹೋಗುವ ಉದ್ದೇಶದಲ್ಲಿ ಅವರಿದ್ದಾರೆ.

Published On - 10:14 pm, Mon, 8 August 22

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !