AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವಳನ್ನು ಮರೆತು ಬದುಕೋಕೆ ಆಗುತ್ತಿಲ್ಲ’; ಮಾಜಿ ಪತ್ನಿ ನೆನೆದು ಸೋಮಣ್ಣ ಮಾಚಿಮಾಡ ಕಣ್ಣೀರು

‘ವಿಚ್ಛೇದನದ ಸಂದರ್ಭದಲ್ಲಿ ನಾನು ಬೆಳಗ್ಗೆ ಕೋರ್ಟ್​​ಗೆ ಹೋಗುತ್ತಿದ್ದೆ, ಮಧ್ಯಾಹ್ನ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿದ್ದೆ. ನಾವಿಬ್ಬರೂ ಮ್ಯೂಚುವಲ್​ ಆಗಿ ವಿಚ್ಛೇದನ ಪಡೆದೆವು. ಇವತ್ತಿಗೂ ಮರೆತು ಬದುಕಲು ಸಾಧ್ಯವಾಗುತ್ತಿಲ್ಲ’ ಎಂದರು ಸೋಮಣ್ಣ.

‘ಅವಳನ್ನು ಮರೆತು ಬದುಕೋಕೆ ಆಗುತ್ತಿಲ್ಲ’; ಮಾಜಿ ಪತ್ನಿ ನೆನೆದು ಸೋಮಣ್ಣ ಮಾಚಿಮಾಡ ಕಣ್ಣೀರು
ಸೋಮಣ್ಣ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 08, 2022 | 3:19 PM

ಪತ್ರಕರ್ತ ಸೋಮಣ್ಣ ಮಾಚಿಮಾಡ (Somanna Machimada) ಅವರು ‘ಬಿಗ್ ಬಾಸ್ ಒಟಿಟಿ ಕನ್ನಡ ಸೀಸನ್​ 1’ಕ್ಕೆ ಕಾಲಿಟ್ಟಿದ್ದಾರೆ. ಪತ್ರಕರ್ತರಾಗಿ ಹಲವರ ಗಮನ ಸೆಳೆದ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಖ್ಯಾತಿ ಗಳಿಸುವ ಪ್ರಯತ್ನದಲ್ಲಿ ಇದ್ದಾರೆ. ಸೋಮಣ್ಣ ಅವರು ಬಿಗ್ ಬಾಸ್​ಗೆ ಎಂಟ್ರಿ ಕೊಡುವಾಗಲೇ ‘ನಾನು ಒಂಟಿ’ ಎಂಬ ಮಾತನ್ನು ಹೇಳಿಕೊಂಡಿದ್ದರು. ಹೀಗೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈಗ ಅವರು ಬಿಗ್​ ಬಾಸ್​​ನಲ್ಲಿ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

‘ವಿಚ್ಛೇದನದ ಸಂದರ್ಭದಲ್ಲಿ ನಾನು ಬೆಳಗ್ಗೆ ಕೋರ್ಟ್​​ಗೆ ಹೋಗುತ್ತಿದ್ದೆ, ಮಧ್ಯಾಹ್ನ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿದ್ದೆ. ನಾವಿಬ್ಬರೂ ಮ್ಯೂಚುವಲ್​ ಆಗಿ ವಿಚ್ಛೇದನ ಪಡೆದೆವು. ಇವತ್ತಿಗೂ ಮರೆತು ಬದುಕಲು ಸಾಧ್ಯವಾಗುತ್ತಿಲ್ಲ. ಆಕೆಯೇ ಫಸ್ಟ್, ಆಕೆಯೇ ಲಾಸ್ಟ್​’ ಎಂದು ಭಾವುಕರಾದರು ಸೋಮಣ್ಣ. ‘ನಾವು ಅವರ ಬಳಿ ಮರಳಿ ಬರುವಂತೆ ಕೋರಿಕೊಳ್ಳುತ್ತೇವೆ’ ಎಂದು ಮನೆ ಮಂದಿ ಕೋರಿದರು. ಇದಕ್ಕೆ ‘ನೋ’ ಎಂಬ ಉತ್ತರ ಹೇಳಿದರು ಸೋಮಣ್ಣ.

‘ಜೀವನದಲ್ಲಿ ಅವಳನ್ನು ನಾನು ಸ್ವಲ್ಪ ನೋಯಿಸಿದೆ ಅನಿಸುತ್ತದೆ. ನನ್ನ ಕೆಲಸದಲ್ಲಿ ನಾನು ಬ್ಯುಸಿ ಆಗಿಬಿಟ್ಟೆ. ನನಗೆ ಕೆಲಸ ಇಂಪಾರ್ಟೆಂಟ್ ಎನ್ನುತ್ತಿದೆ. ನನ್ನ ತಂದೆ ಸೇನೆಯಲ್ಲಿ ಇದ್ದರು. ನಾನೂ ಸೇನೆ ಸೇರಿದ್ದರೆ ನೀನು ಮನೆಯಲ್ಲಿ ಒಬ್ಬಳೇ ಇರಬೇಕಾಗುತ್ತಿತ್ತು ಎನ್ನುತ್ತಿದೆ. ಬಿಗ್ ಬಾಸ್​ಗೆ ಬರುವಾಗ ಅವಳಿಗೆ ಕರೆ ಮಾಡಿದೆ. ಆಗ ಸಮಾಧಾನ ಆಯಿತು’ ಎಂದರು ಸೋಮಣ್ಣ.

ಇದನ್ನೂ ಓದಿ
Image
‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ
Image
Rakesh Adiga: ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿ, ಕಳ್ಳತನ ಮಾಡಿ, ತಾಯಿ ತಲೆ ತಗ್ಗಿಸುವಂತೆ ಮಾಡಿದ್ದ ರಾಕೇಶ್​ ಅಡಿಗ
Image
Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Image
Somanna Machimada: ಬಿಗ್ ಬಾಸ್ ಮನೆಗೆ ಖ್ಯಾತ ಪತ್ರಕರ್ತ: ಸೋಮಣ್ಣ ಬಗ್ಗೆ ನಿಮಗೆಷ್ಟು ಗೊತ್ತು?

ಇದನ್ನೂ ಒದಿ: ಬಿಗ್ ಬಾಸ್ ಮನೆಗೆ ಖ್ಯಾತ ಪತ್ರಕರ್ತ: ಸೋಮಣ್ಣ ಬಗ್ಗೆ ನಿಮಗೆಷ್ಟು ಗೊತ್ತು?

‘ವಿಚ್ಛೇದನದ ನಂತರ ಗೆಳೆಯರು ದೂರ ಮಾಡಿದರು. ಕುಟುಂಬದವರು ನನ್ನ ಅವಾಯ್ಡ್ ಮಾಡಿದರು. ನನಗೆ ಕೊನೆಯಲ್ಲಿ ಉಳಿದುಕೊಂಡಿದ್ದು ಕೆಲಸ ಮಾತ್ರ. ಹೀಗಾಗಿ, ಜನರ ಜತೆ ಬೆರೆಯುವ ಉದ್ದೇಶದಿಂದ ಇಲ್ಲಿಗೆ ಬಂದೆ. ನನಗೆ ಚಿಕ್ಕಂದಿನಿಂದ ಆಗಿದ್ದೂ ಹೀಗೆ. ಸಣ್ಣ ವಯಸ್ಸಲ್ಲಿ ಅಪ್ಪನ ಪ್ರೀತಿ ಸಿಗಲಿಲ್ಲ. ಅಪ್ಪನ ಜತೆ ಊಟ ಮಾಡಿದ್ದೂ ನೆನಪಿಲ್ಲ. ಈ ಕಾರಣಕ್ಕೆ ನಾನು ಇಲ್ಲಿ ಬಂದೆ’ ಎಂದು ಕಣ್ಣೀರು ಹಾಕಿದ್ದಾರೆ ಅವರು.