Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Bigg Boss OTT Kannada: ‘ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಬಿಟ್ಟೆ. ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ’ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಟಿಕ್ ಟಾಕ್ ಮತ್ತು ರೀಲ್ಸ್ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅಲಿಯಾಸ್ ಶಾಂಭವಿ ಅವರು ಈಗ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಿಂಚುತ್ತಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss OTT Kannada) ಶೋನಲ್ಲಿ ಸ್ಪರ್ಧಿಗಳು ತಮ್ಮ ಖಾಸಗಿ ಬದುಕಿನ ಅನೇಕ ವಿವರಗಳನ್ನು ತೆರೆದಿಡುತ್ತಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ (Sonu Srinivas Gowda Viral Video) ಲೀಕ್ ಆಗಿತ್ತು ಎಂಬುದು ಗೊತ್ತಿರುವ ವಿಚಾರ. ಆ ಬಗ್ಗೆ ಸ್ವತಃ ಸೋನು ಅವರೇ ಈಗ ದೊಡ್ಮನೆಯಲ್ಲಿ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮದು ಇನ್ನೊಂದು ವಿಡಿಯೋ ಇದೆ ಎಂದು ಸಹ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಪೂರ್ತಿ ವಿವರ..
‘ನನಗೆ ಗೊತ್ತಿರುವ ವ್ಯಕ್ತಿ ನನ್ನ ಜೊತೆ ಮೂರು ವರ್ಷ ಇದ್ದ. ಅವನು ಎಂಎಸ್ಸಿ ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ನಂತರ ಪ್ರಪೋಸ್ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ. ಎಲ್ಲ ಹುಡುಗಿಯರ ಲೈಫ್ನಲ್ಲಿ ಇದು ಕಾಮನ್. ಆದರೆ ಅವನು ಅದನ್ನೆಲ್ಲ ರೆಕಾರ್ಡ್ ಮಾಡಿಕೊಂಡ’ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.
‘ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ. ನನಗೇ ಆ ವಿಡಿಯೋ ಕಳಿಸಿದ. ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು’ ಎಂದು ಆ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ.
ಶಾಕಿಂಗ್ ಸಂಗತಿ ಏನೆಂದರೆ ಆ ವ್ಯಕ್ತಿಯ ಬಳಿ ಸೋನು ಗೌಡ ಅವರ ಇನ್ನೊಂದು ವಿಡಿಯೋ ಇದೆಯಂತೆ. ‘ವಿಡಿಯೋ ಲೀಕ್ ಆದ ಬಳಿಕ ನಾನು ಅಪ್ಪನ ಮನೆಗೆ ಒಮ್ಮೆಯೂ ಹೋಗಿಲ್ಲ. ಯಾಕೆಂದರೆ ನನಗೆ ಮುಖ ತೋರಿಸೋಕೆ ಆಗ್ತಾ ಇಲ್ಲ. ತಪ್ಪು ಮಾಡಿದ್ದೀನಿ. ಅದನ್ನು ಒಪ್ಪಿಕೊಳ್ತೇನೆ. ಹುಡುಗಿಯರು ನನ್ನ ರೀತಿ ಸ್ಟ್ರಾಂಗ್ ಆಗಿರಿ. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ. ಅವನ ಬಳಿ ಇದ್ದಿದ್ದು ಎರಡು ವಿಡಿಯೋ. ಒಂದು ವಿಡಿಯೋ ಲೀಕ್ ಮಾಡಿದ್ದಾನೆ. ಅವನ ಹತ್ತಿರ ಇನ್ನೊಂದು ವಿಡಿಯೋ ಇದೆ. ಅದನ್ನು ಯಾವಾಗ ಬಿಡುತ್ತಾನೋ ನನಗೆ ನಿಜವಾಗಿ ಗೊತ್ತಿಲ್ಲ. ನನಗೆ ಆದಂತೆ ಬೇರೆ ಯಾರಿಗೂ ಆಗಬಾರದು’ ಎಂದು ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಬಿಗ್ ಬಾಸ್ ಶೋಗೆ ಬಂದ ಬಳಿಕ ಸೋನು ಅವರನ್ನು ಹೆಚ್ಚು ಟ್ರೋಲ್ ಮಾಡಲಾಗುತ್ತಿದೆ. ‘ಟ್ರೋಲರ್ಗಳಿಂದ ನಾನು ಬೆಳೆದಿದ್ದೀನಿ ಅಂತ ಜನರು ಹೇಳ್ತಾರೆ. ಅದರೆ ಅದು ನಿಜವಲ್ಲ. ನನ್ನಿಂದಾಗಿ ಅವರು ಲೈಕ್ಸ್ ಮತ್ತು ಫಾಲೋವರ್ಸ್ ಪಡೆಯುತ್ತಿದ್ದಾರೆ’ ಎಂಬುದು ಸೋನು ಮಾತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:15 pm, Mon, 8 August 22