16 ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ವೋಟ್ ಪಡೆದ ಸೋಮಣ್ಣ ಮಾಚಿಮಾಡ; ಮೊದಲ ವಾರವೇ ಕಮಾಲ್

ಸೊಮಣ್ಣ ಮಾಚಿಮಾಡ ಅವರು ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ. ಈ ಕಾರಣಕ್ಕೆ ಕರ್ನಾಟಕದ ಅನೇಕರಿಗೆ ಅವರ ಪರಿಚಯ ಇದೆ.

16 ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ವೋಟ್ ಪಡೆದ ಸೋಮಣ್ಣ ಮಾಚಿಮಾಡ; ಮೊದಲ ವಾರವೇ ಕಮಾಲ್
ಸೋಮಣ್ಣ
TV9kannada Web Team

| Edited By: Rajesh Duggumane

Aug 09, 2022 | 4:26 PM

ಪತ್ರಕರ್ತರಾಗಿ ಸಾಕಷ್ಟು ಗಮನ ಸೆಳೆದ ಸೋಮಣ್ಣ ಮಾಚಿಮಾಡ (Somanna Machimada) ಅವರು ‘ಬಿಗ್ ಬಾಸ್ ಒಟಿಟಿ’ಗೆ ಸ್ಪರ್ಧಿಯಾಗಿ ತೆರಳಿದ್ದಾರೆ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡ ಅವರು, ‘ಬಿಗ್ ಬಾಸ್’ ಮನೆಯಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಬಿಗ್ ಬಾಸ್ (Bigg Boss)​ ಮನೆ ಸೇರಿದ ನಂತರದಲ್ಲಿ ಅವರ ಜನಪ್ರಿಯತೆ ಹೆಚ್ಚಿದೆ. ಈಗ ಸೋಮಣ್ಣ ಅವರು ಈ ವಾರ ನಾಮಿನೇಷನ್​​ನಿಂದ ಬಚಾವ್ ಆಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅವರಿಗೆ ಬಿದ್ದ ವೋಟ್.

ಕನ್ನಡ ವೀಕ್ಷಕರ ಪಾಲಿಗೆ ‘ಬಿಗ್ ಬಾಸ್ ಒಟಿಟಿ’ ಹೊಸದು. ಈ ಕಾರಣಕ್ಕೆ ಹೊಸ ಹೊಸ ಪ್ರಯೋಗಗಳನ್ನು ಶೋನಲ್ಲಿ ಮಾಡಲಾಗುತ್ತಿದೆ. ಎಲ್ಲರ ಗಮನ ಸೆಳೆಯಲು ಹಲವು ಕಸರತ್ತುಗಳನ್ನು ನಡೆಸಲಾಗುತ್ತಿದೆ. ಹೊಸ ವಿಧಾನಗಳನ್ನು ಕೂಡ ಅಳವಡಿಸಿಕೊಳ್ಳಲಾಗುತ್ತಿದೆ. ಆ ಪೈಕಿ ಪವರ್​​​​ಪ್ಲೇ ಕೂಡ ಒಂದು. ಇದರ ಅಡಿಯಲ್ಲಿ ಸುದೀಪ್​ ಅವರು ಜನರ ಮುಂದೆ ಒಂದು ಪ್ರಶ್ನೆ ಇಟ್ಟಿದ್ದರು. ‘ಮೊದಲ ವಾರ ನಿಮ್ಮನ್ನು ಇಂಪ್ರೆಸ್​ಮಾಡಿದ ಸ್ಪರ್ಧಿ ಯಾರು’ ಎಂಬುದು ಪ್ರಶ್ನೆ ಆಗಿತ್ತು. ಈ ಪ್ರಶ್ನೆಗೆ ಜನರು ಉತ್ತರ ನೀಡಿದ್ದಾರೆ. ಆ ಪೈಕಿ ಸೋಮಣ್ಣ ಅವರಿಗೆ ಹೆಚ್ಚಿನ ವೋಟ್ ಬಿದ್ದಿದೆ.

ಸೊಮಣ್ಣ ಮಾಚಿಮಾಡ ಅವರು ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ. ಈ ಕಾರಣಕ್ಕೆ ಕರ್ನಾಟಕದ ಅನೇಕರಿಗೆ ಅವರ ಪರಿಚಯ ಇದೆ. ಮನೆಯಲ್ಲಿ ಅವರು ಪ್ರಬುದ್ಧವಾಗಿ ಮಾತನಾಡುತ್ತಿದ್ದಾರೆ. ಈ ಕಾರಣಕ್ಕೆ ಅವರಿಂದ ಅನೇಕರು ಇಂಪ್ರೆಸ್​ ಆಗಿದ್ದಾರೆ.

ಈ ವಾರ ಮನೆಯಲ್ಲಿ ಎಲ್ಲರೂ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದಾರೆ. ಸೋಮಣ್ಣ ಅವರು ಅತಿ ಹೆಚ್ಚು ವೋಟ್ ಪಡೆದ ಕಾರಣ ಅವರು ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ. ಅಲ್ಲದೆ, ಆರ್ಯವರ್ಧನ್ ಗುರೂಜಿ ಹಾಗೂ ಸೋನು ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ ಸೋಮಣ್ಣ. ಆ ಇಬ್ಬರು ಈ ವಾರ ಯಾವ ಟಾಸ್ಕ್​ಗಳನ್ನೂ ಆಡುವಂತಿಲ್ಲ.

ಇದನ್ನೂ ಓದಿ: ‘ನಾನು ಮುಟ್ತೀನಿ ಏನ್ ಮಾಡ್ತೀಯಾ?’; ಬಿಗ್ ಬಾಸ್​ ಮನೆಯಲ್ಲಿ ನಡೀತು ಕಿತ್ತಾಟದ ಸರಣಿ

ಇದನ್ನೂ ಓದಿ

ಸದ್ಯ ಬಿಗ್ ಬಾಸ್ ಮನೆಯಲ್ಲಿ 16 ಸ್ಪರ್ಧಿಗಳು ಇದ್ದಾರೆ. ಆ ಪೈಕಿ ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಮೊದಲ ವಾರ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada