‘ನಾನು ಮುಟ್ತೀನಿ ಏನ್ ಮಾಡ್ತೀಯಾ?’; ಬಿಗ್ ಬಾಸ್​ ಮನೆಯಲ್ಲಿ ನಡೀತು ಕಿತ್ತಾಟದ ಸರಣಿ

ಮೊದಲ ವಾರವೇ ಇಡೀ ಮನೆ ರಣರಂಗ ಆಗುವ ಸೂಚನೆ ಸಿಕ್ಕಿದೆ. ಇದರಿಂದ ಕೆಲವರು ಹೈಲೈಟ್ ಆದರೆ, ಇನ್ನೂ ಕೆಲವರು ವೀಕ್ಷಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

‘ನಾನು ಮುಟ್ತೀನಿ ಏನ್ ಮಾಡ್ತೀಯಾ?’; ಬಿಗ್ ಬಾಸ್​ ಮನೆಯಲ್ಲಿ ನಡೀತು ಕಿತ್ತಾಟದ ಸರಣಿ
ರೂಪೇಶ್​-ರಾಕೇಶ್​-ಜಯಶ್ರೀ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 09, 2022 | 3:18 PM

‘ಬಿಗ್ ಬಾಸ್ ಒಟಿಟಿ’ (Bigg Boss OTT) ಆರಂಭವಾಗಿ ಕೆಲವೇ ದಿನಗಳು ಕಳೆದಿವೆ. ಆಗಲೇ ಮನೆಯಲ್ಲಿ ಕಿತ್ತಾಟಗಳ ಸರಣಿ ಆರಂಭ ಆಗಿದೆ. ಹೈಲೈಟ್ ಆಗಲು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸ್ಪರ್ಧಿಗಳ ಮಧ್ಯೆ ಜಗಳ ಆರಂಭ ಆಗಿದೆ. ಮೊದಲ ವಾರವೇ ಇಡೀ ಮನೆ ರಣರಂಗ ಆಗುವ ಸೂಚನೆ ಸಿಕ್ಕಿದೆ. ಇದರಿಂದ ಕೆಲವರು ಹೈಲೈಟ್ ಆದರೆ, ಇನ್ನೂ ಕೆಲವರು ವೀಕ್ಷಕರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಮನೆಯವರನ್ನು ಬಕ್ರಾ ಮಾಡುವ ಉದ್ದೇಶದಿಂದಲೂ ಕೆಲವರು ಕಿತ್ತಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ

ಸ್ಫೂರ್ತಿ-ಸೋನು

ಇದನ್ನೂ ಓದಿ
Image
‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ
Image
Rakesh Adiga: ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿ, ಕಳ್ಳತನ ಮಾಡಿ, ತಾಯಿ ತಲೆ ತಗ್ಗಿಸುವಂತೆ ಮಾಡಿದ್ದ ರಾಕೇಶ್​ ಅಡಿಗ
Image
Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Image
Somanna Machimada: ಬಿಗ್ ಬಾಸ್ ಮನೆಗೆ ಖ್ಯಾತ ಪತ್ರಕರ್ತ: ಸೋಮಣ್ಣ ಬಗ್ಗೆ ನಿಮಗೆಷ್ಟು ಗೊತ್ತು?

ಸ್ಫೂರ್ತಿ ಹಾಗೂ ಸೋನು ಗೌಡ ನಡುವೆ ಕಿತ್ತಾಟ ನಡೆದಿದೆ. ಇದಕ್ಕೆ ಕಾರಣವಾಗಿದ್ದು ‘ಡವ್ ರಾಣಿ’ ಎಂಬ ಶಬ್ದ. ಹಾಸ್ಯದಲ್ಲಿ ಆರಂಭವಾದ ಮಾತು ನಂತರ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸ್ಫೂರ್ತಿಯನ್ನು ಸೋನು ಅವರು ಡವ್ ರಾಣಿ ಎಂದು ಕರೆದಿದ್ದಾರೆ. ಈ ಕಾರಣಕ್ಕೆ ಜಗಳ ತೀವ್ರ ಸ್ವರೂಪ ಪಡೆದುಕೊಂಡಿತು.

ರಾಕೇಶ್-ರೂಪೇಶ್

ರಾಕೇಶ್ ಹಾಗೂ ರೂಪೇಶ್ ಮನೆಯಲ್ಲಿ ಕಿತ್ತಾಡಿಕೊಂಡಿದ್ದಾರೆ. ಹಾಗಂತ ಇದು ನಿಜವಾಗಿ ನಡೆದ ಜಗಳ ಆಗಿರಲೇ ಇಲ್ಲ. ಮನೆ ಮಂದಿಯನ್ನು ಕುರಿ ಮಾಡುವ ಉದ್ದೇಶದಿಂದ ಆದ ಜಗಳ. ರಾಕೇಶ್ ಹಾಗೂ ರೂಪೇಶ್ ದೊಡ್ಡದಾಗಿ ಕೂಗಾಡಿಕೊಳ್ಳಲು ಆರಂಭಿಸಿದರು. ಇದನ್ನು ನೋಡಿ ಮನೆಮಂದಿ ಎಲ್ಲ ಒಂದೆಡೆ ಸೇರಿದರು. ಈ ವೇಳೆ ರಾಕೇಶ್ ಅವರು ರೂಪೇಶ್ ಮೈಯನ್ನು ಮುಟ್ಟಿದರು. ‘ನನ್ನ ಮೈ ಮುಟ್ಟಬೇಡ ಸರಿ ಇರಲ್ಲ’ ಎಂದರು ರೂಪೇಶ್. ‘ನಾನು ಮುಟ್ತೀನಿ ಏನ್ ಮಾಡ್ತೀಯಾ?’ ಎಂದು ರಾಕೇಶ್ ರಾಂಗ್​ ಆದರು. ಇವರ ಜಗಳ ನೋಡಿ ಮನೆ ಮಂದಿ ಸ್ವಲ್ಪ ಭಯಗೊಂಡರು. ನಂತರ ಇದು ಜೋಕ್ ಅನ್ನೋದು ಗೊತ್ತಾಗಿದೆ.

ಮೊಟ್ಟೆ ವಿಚಾರಕ್ಕೆ ಅಸಮಾಧಾನ

ಸೋನು ಗೌಡ ಅವರು ಮೊಟ್ಟೆ ವಿಚಾರಕ್ಕೆ ಕೆಲವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ನಾನು ಒಂದು ಮೊಟ್ಟೆ ತೆಗೆದುಕೊಳ್ಳುತ್ತೇನೆ ಎಂದರೂ ನೀವು ಬಿಡಲಿಲ್ಲ’ ಎಂದು ಗುರೂಜಿ ವಿರುದ್ಧ ಅವರು ದೂರಿದ್ದಾರೆ.

ಜಯಶ್ರೀ-ಉದಯ್​

ಜಯಶ್ರೀ ಆರಾಧ್ಯ ಹಾಗೂ ಉದಯ್ ಸೂರ್ಯ ಅವರು ಸಣ್ಣ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಜಯಶ್ರೀ ಬಗ್ಗೆ ಉದಯ್ ತುಂಬಾನೇ ಸಿಟ್ಟಾಗಿದ್ದಾರೆ. ಈ ಪ್ರೋಮೋ ಸಖತ್ ವೈರಲ್ ಆಗಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ