AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾವು ಆಡೋಕೆ ಬಂದಿರೋದು, ಫೀಲಿಂಗ್ಸ್ ಬಗ್ಗೆ ಮಾತನಾಡೋಕಲ್ಲ’; ಸೋನು ಮುಖಕ್ಕೆ ಹೊಡೆದಂತೆ ಹೇಳಿದ ಸ್ಫೂರ್ತಿ

ಹಿಂದಿನ ದಿನ ರಾತ್ರಿ ರಾಕೇಶ್ ಹಾಗೂ ಸ್ಫೂರ್ತಿ ಮಾತನಾಡುತ್ತಾ ಕುಳಿತಿದ್ದರು. ಇಬ್ಬರೂ ಮಾತನಾಡುತ್ತಾ ನಗುತ್ತಾ ಇದ್ದರು. ಇದನ್ನು ನೋಡಿ ಸೋನು ತಪ್ಪಾಗಿ ತಿಳಿದುಕೊಂಡಿದ್ದಾರೆ. ಅವರಿಬ್ಬರೂ ತಮ್ಮ ಬಗ್ಗೆಯೇ ಮಾತನಾಡಿದ್ದಾರೆ ಎಂದು ಸೋನು ಭಾವಿಸಿದರು.

‘ನಾವು ಆಡೋಕೆ ಬಂದಿರೋದು, ಫೀಲಿಂಗ್ಸ್ ಬಗ್ಗೆ ಮಾತನಾಡೋಕಲ್ಲ’; ಸೋನು ಮುಖಕ್ಕೆ ಹೊಡೆದಂತೆ ಹೇಳಿದ ಸ್ಫೂರ್ತಿ
ಸೋನು-ಸ್ಫೂರ್ತಿ
TV9 Web
| Edited By: |

Updated on: Aug 09, 2022 | 8:16 PM

Share

‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT) ಮೊದಲ ವಾರವೇ ಕಿತ್ತಾಟ ಆರಂಭ ಆಗಿದೆ. ಸ್ಫೂರ್ತಿ ಗೌಡ ಹಾಗೂ ಸೋನು ಗೌಡ ನಡುವೆ ಜಗಳ ಆರಂಭ ಆಗಿದೆ. ಸಣ್ಣ ವಿಚಾರಕ್ಕೆ ಆರಂಭ ಆದ ಜಗಳ ದೊಡ್ಡ ಮಟ್ಟಕ್ಕೆ ತಿರುಗಿದೆ. ಇವರನ್ನು ಸಮಾಧಾನ ಮಾಡೋಕೆ ಅಕ್ಷತಾ, ಕಿರಣ್​, ರಾಕೇಶ್ ಅಡಿಗ (Rakesh Adiga) ಮೊದಲಾದವರು ಸಾಕಷ್ಟು ಪ್ರಯತ್ನಿಸಿದರು. ಹಿಂದಿನ ದಿನದ ಚರ್ಚೆ ಮೊದಲಾದ ವಿಚಾರಗಳನ್ನು ಇಟ್ಟುಕೊಂಡು ಸೋನು ಗೌಡ ಜಗಳಕ್ಕೆ ಬಂದರು. ಇದಕ್ಕೆ ಸ್ಫೂರ್ತಿ ತಿರುಗೇಟು ನೀಡಿದ್ದಾರೆ.

ಹಿಂದಿನ ದಿನ ರಾತ್ರಿ ರಾಕೇಶ್ ಹಾಗೂ ಸ್ಫೂರ್ತಿ ಮಾತನಾಡುತ್ತಾ ಕುಳಿತಿದ್ದರು. ಇಬ್ಬರೂ ಮಾತನಾಡುತ್ತಾ ನಗುತ್ತಾ ಇದ್ದರು. ಇದನ್ನು ನೋಡಿ ಸೋನು ತಪ್ಪಾಗಿ ತಿಳಿದುಕೊಂಡಿದ್ದಾರೆ. ಅವರಿಬ್ಬರೂ ತಮ್ಮ ಬಗ್ಗೆಯೇ ಮಾತನಾಡಿದ್ದಾರೆ ಎಂದು ಸೋನು ಭಾವಿಸಿದರು. ಮರುದಿನ ಇದೇ ವಿಚಾರ ಇಟ್ಟುಕೊಂಡು ಜಗಳ ಆರಂಭಿಸಿದ್ದಾರೆ. ಈ ಜಗಳ ಮಿತಿ ಮೀರಿದೆ.

ಸ್ಫೂರ್ತಿಗೆ ಡವ್​ ರಾಣಿ ಎಂದು ಕರೆದರು ಸೋನು ಗೌಡ. ಈ ವಿಚಾರ ಸ್ಫೂರ್ತಿಗೆ ಟ್ರಿಗರ್ ಮಾಡಿದೆ. ಈ ಕಾರಣಕ್ಕೆ ಸಿಟ್ಟು ಮಾಡಿಕೊಂಡಿದ್ದಾರೆ ಸ್ಫೂರ್ತಿ. ‘ನನ್ನ ವಿಚಾರಕ್ಕೆ ನೀನು ಬರಬೇಡ. ನಿನ್ನ ರೀತಿಯೇ ನಾನು ಇರೋಕೆ ಆಗಲ್ಲ’ ಎಂದು ಸ್ಫೂರ್ತಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಉತ್ತರಿಸಿದ ಸೋನು, ‘ನಾನು ಕೂಲ್​ ಆಗೇ ಹೇಳಿದ್ದು’ ಎಂದರು. ಇದು ಸ್ಫೂರ್ತಿಯನ್ನು ಮತ್ತಷ್ಟು ಟ್ರಿಗರ್ ಮಾಡಿದೆ.

ಇದನ್ನೂ ಓದಿ
Image
16 ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ವೋಟ್ ಪಡೆದ ಸೋಮಣ್ಣ ಮಾಚಿಮಾಡ; ಮೊದಲ ವಾರವೇ ಕಮಾಲ್
Image
ವಿಡಿಯೋ ಲೀಕ್ ವಿಚಾರದಲ್ಲಿ ಸೋನುಗೆ ಬುದ್ಧಿವಾದ ಹೇಳಿದ ಮನೆ ಮಂದಿ​; ಇದನ್ನು ಅವರು ಸ್ವೀಕರಿಸ್ತಾರಾ?
Image
‘ಮದುವೆ ಆದ ವ್ಯಕ್ತಿ ಜತೆ ರಿಲೇಶನ್​ಶಿಪ್​ನಲ್ಲಿದ್ದೆ, ಅವರಿಂದ ಜೂಜು ಕಲಿತೆ’; ಮಾರಿಮುತ್ತು ಮೊಮ್ಮೊಗಳು ಜಯಶ್ರೀ ಆರಾಧ್ಯ
Image
ರಾಕೇಶ್​​ಗೆ ಸ್ಫೂರ್ತಿ ಗೌಡ ಮೇಲೆ ಲವ್​​? ‘ಬಿಗ್​​ ಬಾಸ್​’ನಲ್ಲಿ ಮೊದಲ ವಾರವೇ ಹುಟ್ಟಿತು ಪ್ರೀತಿ-ಪ್ರೇಮದ ಚರ್ಚೆ

‘ನೀನು ಕೂಲ್​ ಆಗಿ ಹೇಳಿದರೂ ಅಷ್ಟೇ, ಹಾಟ್ ಆಗಿ ಹೇಳಿದರೂ ಅಷ್ಟೇ. ನೀನು ಹೇಳೋದು ನನಗೆ ಇಷ್ಟ ಆಗುವುದಿಲ್ಲ. ನನ್ನ ಜತೆ ಮಾತನಾಡೋಕೆ ಬರಬೇಡ. ಎಲ್ಲರೂ ಒಂದೇ ರೀತಿ ಇರೋಕೆ ಆಗಲ್ಲ’ ಎಂದಿದ್ದಾರೆ ಸ್ಫೂರ್ತಿ ಗೌಡ. ಈ ಮಾತಿನ ಚಕಮಕಿ ಸಾಕಷ್ಟು ಸಮಯ ಮುಂದುವರಿದೆ. ರಾಕೇಶ್ ಅವರು ಸ್ಫೂರ್ತಿ ಅವರನ್ನು ವಹಿಸಿಕೊಂಡು ಮಾತನಾಡಿದರು. ಇದರಿಂದ ಸೋನು ಮತ್ತಷ್ಟು ಅಸಮಾಧಾನಗೊಂಡರು.

ಇದನ್ನೂ ಓದಿ: ‘ನಾನು ಮುಟ್ತೀನಿ ಏನ್ ಮಾಡ್ತೀಯಾ?’; ಬಿಗ್ ಬಾಸ್​ ಮನೆಯಲ್ಲಿ ನಡೀತು ಕಿತ್ತಾಟದ ಸರಣಿ

‘ನನ್ನ ಮಾತಿಗೆ ಇಲ್ಲಿ ಬೆಲೆಯೇ ಇಲ್ಲ. ನನ್ನ ಫೀಲಿಂಗ್ಸ್​ಗೆ ಇಲ್ಲಿ ಬೆಲೆ ಇಲ್ಲವಲ್ಲ’ ಎಂದರು ಸೋನು. ‘ನಾವು ಆಡೋಕೆ ಬಂದಿರೋದು, ಫೀಲಿಂಗ್ಸ್ ಬಗ್ಗೆ ಮಾತನಾಡೋಕಲ್ಲ’ ಎಂದು ಸ್ಫೂರ್ತಿ ತಿರುಗೇಟು ನೀಡಿದರು.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ