Bigg Boss: ‘ಬಿಗ್​ ಬಾಸ್’​ ಮನೆಗೆ ಹೊಗ್ತಾರಾ ಸ್ಟಾರ್​ ನಿರೂಪಕಿ? ಎಲ್ಲರಿಗಿಂತ ಹೆಚ್ಚು ಸಂಭಾವನೆ ಸಿಗೋದು ಇವರಿಗೆ

Anchor Udaya Bhanu: 1990ರ ದಶಕದಲ್ಲಿ ಇವರು ಫೇಮಸ್​ ನಿರೂಪಕಿ ಆಗಿದ್ದರು. ಹಲವು ಟಿವಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅನುಭವ ಇವರಿಗೆ ಇದೆ.

Bigg Boss: ‘ಬಿಗ್​ ಬಾಸ್’​ ಮನೆಗೆ ಹೊಗ್ತಾರಾ ಸ್ಟಾರ್​ ನಿರೂಪಕಿ? ಎಲ್ಲರಿಗಿಂತ ಹೆಚ್ಚು ಸಂಭಾವನೆ ಸಿಗೋದು ಇವರಿಗೆ
ಉದಯ ಭಾನು
Follow us
TV9 Web
| Updated By: ಮದನ್​ ಕುಮಾರ್​

Updated on:Aug 10, 2022 | 9:30 AM

ಎಲ್ಲ ಭಾಷೆಯಲ್ಲೂ ಬಿಗ್​ ಬಾಸ್ (Bigg Boss)​ ಕಾರ್ಯಕ್ರಮ ಜನರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಪ್ರತಿ ಸೀಸನ್​ನಲ್ಲೂ ಬೇರೆ ಬೇರೆ ಮನಸ್ಥಿತಿ ಇರುವ ಸ್ಪರ್ಧಿಗಳು ಭಾಗವಹಿಸುತ್ತಾರೆ. ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳಿಗೆ ಅವಕಾಶ ನೀಡಲಾಗುತ್ತದೆ. ಕಿರುತೆರೆ, ಸಿನಿಮಾ, ರೇಡಿಯೋ, ಕ್ರೀಡೆ ಮುಂತಾದ ಕ್ಷೇತ್ರದಿಂದ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬುದು ಬಹಿರಂಗ ಸತ್ಯ. ಅವರವರ ಬೇಡಿಕೆಗೆ ಅನುಗುಣವಾಗಿ ಸಂಭಾವನೆ ಫಿಕ್ಸ್​ ಆಗುತ್ತದೆ. ಯಾರು ಎಷ್ಟು ದಿನ ಬಿಗ್​ ಬಾಸ್​ ಮನೆಯೊಳಗೆ ಇರುತ್ತಾರೆ ಎಂಬುದರ ಆಧಾರದ ಮೇಲೂ ಸ್ಪರ್ಧಿಗಳ ಸಂಭಾವನೆ ನಿಗದಿ ಆಗುತ್ತದೆ. ಈಗ ತೆಲುಗು ಬಿಗ್​ ಬಾ​ಸ್​  (Bigg Boss Telugu) ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಸ್ಟಾರ್​ ನಿರೂಪಕಿ ಉದಯ ಭಾನು (Anchor Udaya Bhanu) ಅವರು ಅತಿ ಹೆಚ್ಚು ಸಂಭಾವನೆ ಪಡೆಯಲಿದ್ದಾರೆ ಎಂಬ ಗುಸುಗುಸು ಹಬ್ಬಿದೆ.

ತೆಲುಗು ಬಿಗ್​ ಬಾಸ್​ ಈವರೆಗೆ 5 ಸೀಸನ್​ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈ ಬಾರಿ 6ನೇ ಸೀಸನ್​ಗೆ ಸಕಲ ಸಿದ್ಧತೆ ನಡೆದಿದೆ. ಅಕ್ಕಿನೇನಿ ನಾಗಾರ್ಜುನ ಅವರು ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇತ್ತೀಚೆಗಷ್ಟೇ ಇದರ ಪ್ರೋಮೋ ಬಿಡುಗಡೆ ಆಗಿದೆ. ‘ಸ್ಟಾರ್​ ಮಾ’ ವಾಹಿನಿ ಮತ್ತು ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಒಟಿಟಿ ಮೂಲಕ ಈ ಶೋ ಪ್ರಸಾರ ಆಗಲಿದೆ.

ಪ್ರತಿ ಬಾರಿ ಬಿಗ್​ ಬಾಸ್​ ಆರಂಭಕ್ಕೂ ಮುನ್ನ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತದೆ. ಈ ಸಲ ತೆಲುಗು ಬಿಗ್​ ಬಾಸ್​ನಲ್ಲಿ ಖ್ಯಾತ ನಿರೂಪಕಿ ಉದಯ ಭಾನು ಅವರು ಸ್ಪರ್ಧಿಸುತ್ತಾರೆ ಎಂಬ ಗಾಸಿಪ್​ ಹಬ್ಬಿದೆ. 1990ರ ದಶಕದಲ್ಲಿ ಅವರು ಫೇಮಸ್​ ನಿರೂಪಕಿ ಆಗಿದ್ದರು. ಹಲವು ಟಿವಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅನುಭವ ಅವರಿಗೆ ಇದೆ.

ಇದನ್ನೂ ಓದಿ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
Image
‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?
Image
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ

ನಿರೂಪಣೆ ಮಾಡಿದ್ದು ಮಾತ್ರವಲ್ಲದೇ ಹಲವು ಸೀರಿಯಲ್​ ಹಾಗೂ ಸಿನಿಮಾಗಳಲ್ಲೂ ಉದಯ ಭಾನು ನಟಿಸಿದ್ದಾರೆ. ಈಗ ಅವರಿಗೆ ಬಿಗ್​ ಬಾಸ್​ ಆಫರ್​ ನೀಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ.

ಬೇರೆಲ್ಲ ಸ್ಪರ್ಧಿಗಳಿಗಿಂತ ಉದಯ ಭಾನು ಅವರಿಗೆ ಅತಿ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಆದರೆ ಯಾರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ‘ಬಿಗ್​​ ಬಾಸ್​ ಒಟಿಟಿ’ ಆರಂಭ ಆಗಿದೆ. ಇದರಲ್ಲಿ 16 ಸ್ಪರ್ಧಿಗಳು ಹಣಾಹಣಿ ನಡೆಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:30 am, Wed, 10 August 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ