Akkineni Nagarjuna: ‘ಬಿಗ್ ಬಾಸ್ ತೆಲುಗು ಸೀಸನ್ 6’ ನಿರೂಪಣೆಗೆ ಸಜ್ಜಾದ ನಾಗಾರ್ಜುನ; ಇಲ್ಲಿದೆ ಹೊಸ ಪ್ರೋಮೋ
Bigg Boss Telugu season 6: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿವಾದ, ಕಿರಿಕ್, ಗಲಾಟೆ ಇದ್ದೇ ಇರುತ್ತದೆ. ಸೆಲೆಬ್ರಿಟಿಗಳ ಇನ್ನೊಂದು ಮುಖ ಈ ಮನೆಯಲ್ಲಿ ಬಹಿರಂಗ ಆಗುತ್ತದೆ.
ಎಲ್ಲ ಭಾಷೆಯಲ್ಲಿಯೂ ‘ಬಿಗ್ ಬಾಸ್’ (Bigg Boss) ಕಾರ್ಯಕ್ರಮ ಯಶಸ್ವಿ ಆಗಿದೆ, ತಮ್ಮದೇ ಆದ ಪ್ರೇಕ್ಷಕರ ವರ್ಗವನ್ನು ಹೊಂದಿರುವ ಈ ಕಾರ್ಯಕ್ರಮದ ಬಗ್ಗೆ ಜನರಿಗೆ ಸದಾ ಕೌತುಕ ಇರುತ್ತದೆ. ಅದರಲ್ಲೂ ಹೊಸ ಸೀಸನ್ ಆರಂಭ ಆಗುವಾಗ ಹೆಚ್ಚಿನ ನಿರೀಕ್ಷೆ ಮನೆ ಮಾಡಿರುತ್ತದೆ. ಈಗ ತೆಲುಗಿನಲ್ಲಿ 6ನೇ ಸೀಸನ್ (Bigg Boss Telugu season 6) ಆರಂಭಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಕೂಡ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸದ್ಯ ಇದರ ಪ್ರೋಮೋ ರಿಲೀಸ್ ಆಗಿದೆ. ಅದನ್ನು ಕಂಡು ಬಿಗ್ ಬಾಸ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಆದಷ್ಟು ಬೇಗ ಶೋ ಆರಂಭ ಆಗಲಿ ಎಂದು ಕಾಯುತ್ತಿದ್ದಾರೆ.
ಕಳೆದ ಬಾರಿ ಕೂಡ ಅಕ್ಕಿನೇನಿ ನಾಗಾರ್ಜುನ ಅವರು ನಿರೂಪಣೆ ಮಾಡಿದ್ದರು. ಅವರು ನಿರೂಪಣೆ ಮಾಡುವ ಬಗ್ಗೆ ಜನರಿಗೆ ಪರ-ವಿರೋಧದ ಅಭಿಪ್ರಾಯ ಇದೆ. ಹಾಗಿದ್ದರೂ ಕೂಡ ಅವರು ‘ಬಿಗ್ ಬಾಸ್ ತೆಲುಗು ಸೀಸನ್ 6’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸದ್ಯ ಪ್ರೋಮೋ ಗಮನ ಸೆಳೆಯುತ್ತಿದೆ.
ಕಿರುತೆರೆ, ಸಿನಿಮಾ, ರೇಡಿಯೋ, ಸೋಶಿಯಲ್ ಮೀಡಿಯಾ ಮುಂತಾದ ಕ್ಷೇತ್ರಗಳಿಂದ ಸೆಲೆಬ್ರಿಟಿಗಳನ್ನು ಆಯ್ಕೆ ಮಾಡಿಕೊಂಡು ‘ಬಿಗ್ ಬಾಸ್’ ರಿಯಾಲಿಟಿ ಶೊಗೆ ಕಳಿಸಲಾಗುತ್ತದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ಪಡೆಯುತ್ತಾರೆ ಎಂಬುದನ್ನು ತಿಳಿಯುವ ಕಾತರ ಹೆಚ್ಚಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 2ನೇ ವಾರದಲ್ಲಿ ಈ ಶೋ ಆರಂಭ ಆಗಲಿದೆ. ‘ಸ್ಟಾರ್ ಮಾ’ ವಾಹಿನಿಯಲ್ಲಿ ಪ್ರಸಾರ ಆಗಲಿದೆ.
Here is the promo of #BBLiveOnHotstar presented by our favorite King @iamnagarjuna.
The much awaited season of entertainment begins on @DisneyPlusHSTel!
Last year was a blast but this year will be bigger – Are you ready for #BiggBossTelugu6 ? pic.twitter.com/paeFddkdcB
— Disney+ Hotstar Telugu (@DisneyPlusHSTel) August 9, 2022
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿವಾದ, ಕಿರಿಕ್, ಗಲಾಟೆ ಇದ್ದೇ ಇರುತ್ತದೆ. ಸೆಲೆಬ್ರಿಟಿಗಳ ಇನ್ನೊಂದು ಮುಖ ಈ ಮನೆಯಲ್ಲಿ ಬಹಿರಂಗ ಆಗುತ್ತದೆ. ಆ ಕಾರಣದಿಂದ ಪ್ರೇಕ್ಷಕರಿಗೆ ಈ ಶೋ ಬಗ್ಗೆ ಎಲ್ಲಿಲ್ಲದ ಕೌತುಕ. ಇಂಟರೆಸ್ಟಿಂಗ್ ವ್ಯಕ್ತಿತ್ವ ಇರುವ ಸೆಲೆಬ್ರಿಟಿಗಳು ಎಂಟ್ರಿ ಪಡೆದುಕೊಂಡರೆ ಶೋ ಮಜಾ ಹೆಚ್ಚುತ್ತದೆ. ಈ ಹಿಂದೆ ‘ಬಿಗ್ ಬಾಸ್ ತೆಲುಗು ಒಟಿಟಿ’ಯಲ್ಲಿ ಭಾಗವಹಿಸಿದ ಕೆಲವು ಸ್ಪರ್ಧಿಗಳಿಗೆ ಬಿಗ್ ಬಾಸ್ ಹೊಸ ಸೀಸನ್ನಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ.
ಕನ್ನಡದಲ್ಲಿ ಇದೇ ಮೊದಲ ಬಾರಿಗೆ ‘ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ ಆರಂಭ ಆಗಿದೆ. 16 ಸ್ಪರ್ಧಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಎಂದಿನಂತೆ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:40 pm, Tue, 9 August 22