Spoorthi Gowda: ನಾಲ್ಕನೇ ಸ್ಪರ್ಧಿಯಾಗಿ ಸ್ಫೂರ್ತಿ ಗೌಡ ಎಂಟ್ರಿ; ಮಲೆನಾಡ ಹುಡಗಿಗೆ ಇದೆ ಒಂದು ಕೆಟ್ಟ ಹವ್ಯಾಸ

Bigg Boss OTT kannada: ಸ್ಫೂರ್ತಿ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಅದರಿಂದ ಅರ್ಧಕ್ಕೆ ಓಡಿ ಬಂದರು. ಇಂಜಿನಿಯರಿಂಗ್ ಕೂಡ ಅರ್ಧಕ್ಕೆ ತೊರೆದಿದ್ದಾರೆ.

Spoorthi Gowda: ನಾಲ್ಕನೇ ಸ್ಪರ್ಧಿಯಾಗಿ ಸ್ಫೂರ್ತಿ ಗೌಡ ಎಂಟ್ರಿ; ಮಲೆನಾಡ ಹುಡಗಿಗೆ ಇದೆ ಒಂದು ಕೆಟ್ಟ ಹವ್ಯಾಸ
ಸ್ಫೂರ್ತಿ
TV9kannada Web Team

| Edited By: Rajesh Duggumane

Aug 06, 2022 | 8:54 PM

Bigg Boss OTT Kannada Season 1: ‘ಬಿಗ್ ಬಾಸ್ ಒಟಿಟಿ’ (Bigg Boss OTT) ಇಂದು (ಆಗಸ್ಟ್ 6) ಆರಂಭಗೊಂಡಿದೆ. ನಾಲ್ಕನೇ ಸ್ಪರ್ಧಿಯಾಗಿ ಸ್ಫೂರ್ತಿ ಗೌಡ ಅವರು ಎಂಟ್ರಿ ನೀಡಿದ್ದಾರೆ. ಅವರು ಮಲೆನಾಡ ಮೂಲದವರು. ನಟಿಯಾಗಬೇಕು ಎಂದು ಕನಸು ಕಂಡವರು ಅವರು. ಆ ಕನಸು ಈಡೇರಿದೆ. ‘ಬಿಗ್ ಬಾಸ್’ ವೇದಿಕೆ ಮೇಲೆ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಹಿನ್ನೆಲೆಯ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

‘ಮಲೆನಾಡ ಹುಡುಗಿ ನಾನು. ಬೆಂಗಳೂರು ಒಂದು ಮಾಯಾನಗರಿ. ಐದನೇ ಕ್ಲಾಸ್​ನಲ್ಲಿ ‘ಮುಂಗಾರು ಮಳೆ’ ಸಿನಿಮಾ ನೋಡಿದೆ. ಆಗಲೇ ನಾನು ನಟಿ ಆಗಬೇಕು ಎಂದು ಕನಸು ಕಂಡೆ. ನಾನು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟೆ. ನನಗೆ ಜೀವನದಲ್ಲಿ ಏನು ಬೇಕು ಎಂಬುದು ಗೊತ್ತು. ಆದರೆ, ಕಷ್ಟ ಅಂದಾಗ ಓಡಿ ಬರ್ತೀನಿ. ಬಿಗ್ ಬಾಸ್ ಮನೆಯಲ್ಲಿ ಈಗ ಲಾಕ್ ಆಗ್ತೀನಿ’ ಎಂದರು ಸ್ಫೂರ್ತಿ.

‘ನನ್ನ ಅಮ್ಮ ತೀರಿ ಹೋಗಿ ಒಂದು ವರ್ಷ ಆಯ್ತು. ನಾನು ವೀಕ್ ಅಂದ್ಕೊಂಡಿದಾರೆ. ಇದರ ಬೆನಿಫಿಟ್ ತಗಳೋಕೆ ಎಲ್ಲರೂ ನೋಡ್ತಾರೆ. ಸ್ಮೈಲ್ ಮಾಡುತ್ತಾ ಇರೋದೆ ಯಾವಾಗಲೂ ಸ್ಟ್ರಾಂಗ್ ಅಂತ ನನ್ನ ಅರ್ಥ. ಯಾವುದೇ ಕಾರಣಕ್ಕೂ ಕುಗ್ಗಬಾರದು ಎಂದು ನನ್ನ ಅಮ್ಮ ಹೇಳಿಕೊಟ್ಟಿದ್ದಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: Sonu Srinivas Gowda: ‘ಬಿಗ್ ಬಾಸ್ ಒಟಿಟಿ’ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ

ಸ್ಫೂರ್ತಿ ಅವರು ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು. ಅದರಿಂದ ಅರ್ಧಕ್ಕೆ ಓಡಿ ಬಂದರು. ಇಂಜಿನಿಯರಿಂಗ್ ಕೂಡ ಅರ್ಧಕ್ಕೆ ತೊರೆದಿದ್ದಾರೆ. ಕಷ್ಟ ಎನಿಸಿದಾಗ ಅವರು ಮಾಡುತ್ತಿರುವ ಕೆಲಸದಿಂದ ಹೊರ ಬರುತ್ತಾರೆ. ಈ ಹವ್ಯಾಸದ ಬಗ್ಗೆ ಸ್ಫೂರ್ತಿ ಕಿಚ್ಚ ಸುದೀಪ್ ಅವರ ಎದುರು ಹೇಳಿಕೊಂಡಿದ್ದಾರೆ.

ಈ ಬಾರಿ ‘ಬಿಗ್ ಬಾಸ್​’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್​​ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು ಆಗುವುದಿಲ್ಲ. ದಿನದ 24 ಗಂಟೆ ವೂಟ್ ಆ್ಯಪ್​ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಜತೆಗೆ ನಿತ್ಯ ಏನೆಲ್ಲ ಆಯಿತು ಎಂಬುದನ್ನು ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಈ ಸಂಚಿಕೆ ಪ್ರಸಾರದ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada