- Kannada News Photo gallery Cricket photos Cheteshwar Pujara slams record-breaking third double ton for Sussex
Cheteshwar Pujara: ಒಟ್ಟು 997 ರನ್: ಕೌಂಟಿ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Cheteshwar Pujara: ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿದ್ದ ದಾಖಲೆಯನ್ನು ಕೂಡ ಪೂಜಾರ ಮುರಿದಿದ್ದಾರೆ.
Updated on:Jul 21, 2022 | 5:33 PM

ಬ್ಯಾಕ್ ಟು ಬ್ಯಾಕ್ ಡಬಲ್ ಸೆಂಚುರಿ... ಸತತ ಮೂರು ದ್ವಿಶತಕ ಸಿಡಿಸುವ ಮೂಲಕ ಟೀಮ್ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಕೌಂಟಿ ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಕ್ರಿಕೆಟ್ನಲ್ಲಿ ಸಸೆಕ್ಸ್ ಪರ ಆಡುತ್ತಿರುವ ಚೇತೇಶ್ವರ ಪೂಜಾರ ಸತತವಾಗಿ ಮೂರು ದ್ವಿಶತಕ ಬಾರಿಸಿದ್ದಾರೆ. ವಿಶೇಷ ಎಂದರೆ ಇದೀಗ ಸಸೆಕ್ಸ್ ಪರ ಹಂಗಾಮಿ ನಾಯಕರಾಗಿರುವ ಪೂಜಾರ ತಮ್ಮ ನಾಯಕತ್ವದಲ್ಲೂ ಡಬಲ್ ಸೆಂಚುರಿ ಸಿಡಿಸಿದ್ದಾರೆ.

ನಾಯಕನಾಗಿ ಮಿಡ್ಲ್‌ಸೆಕ್ಸ್ ವಿರುದ್ಧ 234 ರನ್ ಬಾರಿಸಿ ಮಿಂಚಿದ್ದ ಪೂಜಾರ, ಇದಕ್ಕೂ ಮುನ್ನ ಡರ್ಹಾಮ್ ವಿರುದ್ಧ 203 ರನ್ ಬಾರಿಸಿದ್ದರು. ಅಲ್ಲದೆ ತನ್ನ ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಡರ್ಬಿಶೈರ್ ವಿರುದ್ಧ 201 ರನ್ ಗಳಿಸಿ ಅಬ್ಬರಿಸಿದ್ದರು.

ಈ ಮೂಲಕ 118 ವರ್ಷಗಳ ಇತಿಹಾಸ ಹೊಂದಿರುವ ಸಸೆಕ್ಸ್ ತಂಡದ ಪರ ಬ್ಯಾಕ್ ಟು ಬ್ಯಾಕ್ 3 ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಹಾಗೆಯೇ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿದ್ದ ದಾಖಲೆಯನ್ನು ಕೂಡ ಪೂಜಾರ ಮುರಿದಿದ್ದಾರೆ. ಅಜರು್ ಕೌಂಟಿ ಕ್ರಿಕೆಟ್ನಲ್ಲಿ 1991 ರಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ 212 ಮತ್ತು 1994 ರಲ್ಲಿ ಡರ್ಹಾಮ್ ವಿರುದ್ಧ 205 ರನ್ ಬಾರಿಸಿ ದಾಖಲೆ ಬರೆದಿದ್ದರು. ಇದೀಗ ಚೇತೇಶ್ವರ ಪೂಜಾರ ಬ್ಯಾಕ್ ಟು ಬ್ಯಾಕ್ 3 ದ್ವಿಶತಕಗಳನ್ನು ಬಾರಿಸಿ ಕೌಂಟಿ ಕ್ರಿಕೆಟ್ನಲ್ಲಿ ಅತೀ ಹೆಚ್ಚು ದ್ವಿಶತಕ ಬಾರಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಈ ಬಾರಿ ಕೌಂಟಿ ಕ್ರಿಕೆಟ್ಗೆ ಪಾದರ್ಪಣೆ ಮಾಡಿರುವ ಚೇತೇಶ್ವರ ಪೂಜಾರ 7 ಪಂದ್ಯಗಳನ್ನು ಆಡಿದ್ದಾರೆ. ಈ ಏಳು ಪಂದ್ಯಗಳಲ್ಲಿ 10 ಇನಿಂಗ್ಸ್ ಆಡಿದ್ದು, ಈ ವೇಳೆ ಬರೋಬ್ಬರಿ 997 ರನ್ಗಳನ್ನು ಕಲೆಹಾಕಿದ್ದಾರೆ. ಅಂದರೆ ಪೂಜಾರ 3 ದ್ವಿಶತಕಗಳಲ್ಲದೆ 2 ಶತಕಗಳನ್ನು ಸಿಡಿಸಿ ಅಬ್ಬರಿಸಿರುವುದು ವಿಶೇಷ. ಒಟ್ಟಿನಲ್ಲಿ ಇಂಗ್ಲೆಂಡ್ ಪಿಚ್ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಚೇತೇಶ್ವರ ಪೂಜಾರ ಎಲ್ಲರೂ ನಿಬ್ಬೆರಗಾಗುವಂತೆ ಮಾಡುತ್ತಿದ್ದಾರೆ.
Published On - 5:31 pm, Thu, 21 July 22









