Aamir Khan: ದೇಶದ ಜನರ ಕ್ಷಮೆ ಕೇಳಿದ ಆಮಿರ್ ಖಾನ್​; ‘ಲಾಲ್​ ಸಿಂಗ್ ಚಡ್ಡಾ’ ರಿಲೀಸ್​ ವೇಳೆ ಹೊಸ ಹೇಳಿಕೆ

Laal Singh Chaddha: ‘ಯಾರ ಭಾವನೆಗಾದರೂ ನಾನು ಧಕ್ಕೆ ತಂದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಯಾರನ್ನೂ ನೋಯಿಸಲು ನಾನು ಬಯಸುವುದಿಲ್ಲ’ ಎಂದು ಆಮಿರ್​ ಖಾನ್​ ಹೇಳಿಕೆ ನೀಡಿದ್ದಾರೆ.

Aamir Khan: ದೇಶದ ಜನರ ಕ್ಷಮೆ ಕೇಳಿದ ಆಮಿರ್ ಖಾನ್​; ‘ಲಾಲ್​ ಸಿಂಗ್ ಚಡ್ಡಾ’ ರಿಲೀಸ್​ ವೇಳೆ ಹೊಸ ಹೇಳಿಕೆ
Aamir Khan
Follow us
TV9 Web
| Updated By: ಮದನ್​ ಕುಮಾರ್​

Updated on:Aug 10, 2022 | 1:37 PM

ನಟ ಆಮಿರ್​ ಖಾನ್ (Aamir Khan)​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಮೀಮ್ಸ್​ ಹರಿದಾಡಿವೆ. ಅವರು ನಟಿಸಿರುವ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಅನೇಕರು ಅಭಿಯಾನ ಮಾಡುತ್ತಿದ್ದಾರೆ. ಇದರ ಬಿಸಿ ಅವರಿಗೆ ತಟ್ಟಿದೆ. ಹಾಗಾಗಿ ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಆಮಿರ್​ ಖಾನ್​ ಅವರು ದೇಶದ ಜನತೆಯ ಕ್ಷಮೆ (Aamir Khan Apology) ಕೇಳಿದ್ದಾರೆ ಎಂದು ವರದಿ ಆಗಿದೆ. ‘ಯಾವುದೇ ರೀತಿಯಲ್ಲಿ ನಾನು ಯಾರ ಭಾವನೆಗಾದರೂ ಧಕ್ಕೆ ತಂದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಯಾರನ್ನೂ ನೋಯಿಸಲು ನಾನು ಬಯಸುವುದಿಲ್ಲ. ಯಾರಿಗಾದರೂ ನನ್ನ ಸಿನಿಮಾ ನೋಡಲು ಇಷ್ಟವಿಲ್ಲ ಎಂದಾದರೆ ಅವರ ಭಾವನೆಯನ್ನೂ ನಾನು ಗೌರವಿಸುತ್ತೇನೆ’ ಎಂದು ಆಮಿರ್​ ಖಾನ್​ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎಂದು ಈ ಹಿಂದೆ ಆಮಿರ್​ ಖಾನ್​ ಹೇಳಿದ್ದನ್ನು ಜನರು ಈಗಲೂ ಮರೆತಿಲ್ಲ. ಹಾಗಾಗಿ ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ‘ಲಾಲ್​ ಸಿಂಗ್ ಚಡ್ಡಾ’ ಸಿನಿಮಾದ ರಿಲೀಸ್​ ವೇಳೆ ಬ್ಯಾನ್​ ಬಿಸಿ ಹೆಚ್ಚಾಗಿದೆ. ದೇಶಾದ್ಯಂತ ಈ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ನೆಟ್ಟಿಗರು ಅಭಿಯಾನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಆಮಿರ್​ ಖಾನ್​ ಕ್ಷಮೆ ಕೇಳಿದ್ದಾರೆ.

‘ಅನಗತ್ಯವಾಗಿ ನನ್ನ ಬಗ್ಗೆ ದ್ವೇಷ ಹಬ್ಬಿಸುತ್ತಿರುವುದರಿಂದ ನನಗೆ ಬೇಸರ ಆಗುತ್ತದೆ. ನಾನು ಭಾರತವನ್ನು ಇಷ್ಟಪಡುವ ವ್ಯಕ್ತಿ ಅಲ್ಲ ಎಂದು ಕೆಲವರು ನಂಬಿದ್ದಾರೆ. ಆದರೆ ಅದು ನಿಜವಲ್ಲ. ಜನರು ಹಾಗೆ ಅಂದುಕೊಂಡಿರುವುದು ದುರದೃಷ್ಟಕರ. ದಯವಿಟ್ಟು ನನ್ನ ಸಿನಿಮಾಗಳನ್ನು ನೋಡಿ. ಬಹಿಷ್ಕಾರ ಮಾಡಬೇಡಿ’ ಎಂದು ಆಮಿರ್​ ಖಾನ್ ಇತ್ತೀಚೆಗಷ್ಟೇ​ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ
Image
‘ಕೆಜಿಎಫ್ 2’ ಎದುರು ಬರದೆ ನಾವು ಬದುಕಿದೆವು; ಆಮಿರ್ ಖಾನ್​ಗೂ ಭಯ ಹುಟ್ಟಿಸಿದ್ದ ಯಶ್ ಚಿತ್ರದ ಅಬ್ಬರ
Image
ಆಗಸ್ಟ್​ 11ಕ್ಕೆ ಆಮಿರ್​ ಖಾನ್​ ವರ್ಸಸ್​ ಅಕ್ಷಯ್​ ಕುಮಾರ್​; ಪ್ರೇಕ್ಷಕರ ಬೆಂಬಲ ಯಾರ ಸಿನಿಮಾಗೆ?
Image
ಹಾಲಿವುಡ್​ನ ಚಾಕೊಲೇಟ್​ ತಂದು ಬಾಲಿವುಡ್​ನಲ್ಲಿ ಗೋಲ್​ಗಪ್ಪ ಮಾಡಿದ ಆಮಿರ್​ ಖಾನ್​; ಸಖತ್​ ಟ್ರೋಲ್​
Image
ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ

‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಆಗಸ್ಟ್​ 11ರಂದು ಬಿಡುಗಡೆ ಆಗುತ್ತಿದೆ. ಹಲವು ಕಾರಣದಿಂದ ಈ ಚಿತ್ರ ಚರ್ಚೆ ಹುಟ್ಟುಹಾಕಿದೆ. ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರದ ರಿಮೇಕ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಟ್ರೇಲರ್​ ನೋಡಿದ ಅನೇಕರು ಟೀಕೆ ಮಾಡಿದ್ದಾರೆ. ‘ಪಿಕೆ’ ಚಿತ್ರದ ರೀತಿಯಲ್ಲೇ ಆಮಿರ್​ ಖಾನ್​ ಮತ್ತೆ ಕಾಣಿಸಿಕೊಂಡಿದ್ದಾರೆ ಎಂಬ ಕಮೆಂಟ್​ಗಳು ಬಂದಿವೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಕರೀನಾ ಕಪೂರ್​ ಖಾನ್​ ನಟಿಸಿದ್ದಾರೆ. ತೆಲುಗು ಸ್ಟಾರ್​ ನಟ ನಾಗ ಚೈತನ್ಯ ಅವರು ಈ ಚಿತ್ರದಲ್ಲೊಂದು ಅತಿಥಿ ಪಾತ್ರ ಮಾಡಿದ್ದಾರೆ.

Published On - 1:33 pm, Wed, 10 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ