Aamir Khan: ಮತ್ತೆ ಸಿಗರೇಟ್​ ಚಟ ಹತ್ತಿಸಿಕೊಂಡ ಆಮಿರ್​ ಖಾನ್​; ಸಾಕ್ಷಿ ಸಮೇತ ಸಿಕ್ಕಿಬಿದ್ದ ನಟ

Laal Singh Chaddha | Aamir Khan: ಪುತ್ರ ಆಜಾದ್ ಖಾನ್​ ಸಲುವಾಗಿ ಆಮಿರ್​ ಖಾನ್​ ಅವರು ಸಿಗರೇಟ್​ ಚಟ ಬಿಟ್ಟಿದ್ದಾರೆ ಎಂಬುದನ್ನು ನಿಜ ಎಂದು ಅಭಿಮಾನಿಗಳು ನಂಬಿದ್ದರು. ಆದರೆ ಈಗ ವೈರಲ್​ ಆಗಿರುವ ಫೋಟೋದಿಂದ ಸತ್ಯ ಬಯಲಾಗಿದೆ.

Aamir Khan: ಮತ್ತೆ ಸಿಗರೇಟ್​ ಚಟ ಹತ್ತಿಸಿಕೊಂಡ ಆಮಿರ್​ ಖಾನ್​; ಸಾಕ್ಷಿ ಸಮೇತ ಸಿಕ್ಕಿಬಿದ್ದ ನಟ
ಆಮಿರ್ ಖಾನ್, ಕರೀನಾ ಕಪೂರ್ ಖಾನ್ ವೈರಲ್​ ಫೋಟೋ
Follow us
TV9 Web
| Updated By: ಮದನ್​ ಕುಮಾರ್​

Updated on: Jul 28, 2022 | 2:20 PM

ಬಾಲಿವುಡ್​ನ ಖ್ಯಾತ ನಟ ಆಮಿರ್​ ಖಾನ್ (Aamir Khan)​ ಅವರ ಸಂಪೂರ್ಣ ಗಮನ ಈಗ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಮೇಲಿದೆ. ಸಾಕಷ್ಟು ಸಮಯ ತೆಗೆದುಕೊಂಡು ಅವರು ಈ ಸಿನಿಮಾ ಮಾಡಿದ್ದಾರೆ. ಆಗಸ್ಟ್​ 11ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಗಲಿದೆ. ಆ ಪ್ರಯುಕ್ತ ಅವರು ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಚಿತ್ರದಲ್ಲಿ ಆಮಿರ್​ ಖಾನ್​ಗೆ ಜೋಡಿಯಾಗಿ ಕರೀನಾ ಕಪೂರ್​ ಖಾನ್​ ನಟಿಸಿದ್ದಾರೆ. ಇದರ ಪ್ರಚಾರದ ಸಲುವಾಗಿ ಜನಪ್ರಿಯ ‘ಕಾಫಿ ವಿತ್​ ಕರಣ್​ ಸೀಸನ್​ 7’ (Koffee With Karan 7) ಶೋಗೆ ಹಾಜರಿ ಹಾಕಿದ್ದಾರೆ. ಎಪಿಸೋಡ್​ ಶೂಟಿಂಗ್​ ಸಂದರ್ಭದ ಫೋಟೋ ವೈರಲ್​ ಆಗಿದೆ. ಇದರಲ್ಲಿ ಆಮಿರ್ ಖಾನ್​ ಅವರು ಸಿಗರೇಟ್​ ಸೇದುತ್ತಿರುವುದು ಕಂಡುಬಂದಿದೆ.

ಈ ಮೊದಲು ಆಮಿರ್​ ಖಾನ್​ ಸಿಕ್ಕಾಪಟ್ಟೆ ಸಿಗರೇಟ್​ ಸೇದುತ್ತಿದ್ದರು. ಅದಕ್ಕೆ ಕುಟುಂಬದವರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿತ್ತು. ಧೂಮಪಾನದ ಸಹವಾಸ ಬಿಟ್ಟುಬಿಡುವಂತೆ ಮಕ್ಕಳಾದ ಇರಾ ಖಾನ್​ ಮತ್ತು ಜುನೈದ್​ ಖಾನ್​ ಅವರು ಒತ್ತಾಯ ಮಾಡಿದ್ದರು. ಹಾಗಿದ್ದರೂ ಸಂಪೂರ್ಣ ತ್ಯಜಿಸಲು ಆಮಿರ್​ ಖಾನ್​ಗೆ ಸಾಧ್ಯವಾಗಿರಲಿಲ್ಲ. ಆದರೆ ಪುತ್ರ ಆಜಾದ್​ ಖಾನ್​ ಜನಿಸಿದ ಬಳಿಕ ಅವರು ಸಿಗರೇಟ್​ ಬಿಟ್ಟಿದ್ದರು ಎಂದು ವರದಿ ಆಗಿತ್ತು.

ಪುತ್ರ ಆಜಾದ್ ಖಾನ್​ ಸಲುವಾಗಿ ಆಮಿರ್​ ಖಾನ್​ ಅವರು ಸಿಗರೇಟ್​ ಚಟ ಬಿಟ್ಟಿದ್ದಾರೆ ಎಂಬುದನ್ನು ನಿಜ ಎಂದೇ ಅಭಿಮಾನಿಗಳು ನಂಬಿದ್ದರು. ಆದರೆ ಈಗ ವೈರಲ್​ ಆಗಿರುವ ಈ ಫೋಟೋದಲ್ಲಿ ಅವರು ಪೈಪ್​ ಸೇದುತ್ತಿರುವುದು ಕಾಣಿಸಿದೆ. ‘ಒತ್ತಡದ ಕಾರಣದಿಂದ ಆಮಿರ್​ ಖಾನ್​ ಮತ್ತೆ ಸಿಗರೇಟ್​ ಸೇದಲು ಪ್ರಾರಂಭಿದ್ದಾರೆ..’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗುತ್ತಿದೆ.

ಇದನ್ನೂ ಓದಿ
Image
‘ಕೆಜಿಎಫ್ 2’ ನೋಡಿ ಬದಲಾಗಿದೆ ಬಾಲಿವುಡ್ ಪ್ರೇಕ್ಷಕರ ಮನಸ್ಥಿತಿ? ಆಮಿರ್ ಖಾನ್​ಗೆ ಶುರುವಾಗಿದೆ ಭಯ
Image
ಆಗಸ್ಟ್​ 11ಕ್ಕೆ ಆಮಿರ್​ ಖಾನ್​ ವರ್ಸಸ್​ ಅಕ್ಷಯ್​ ಕುಮಾರ್​; ಪ್ರೇಕ್ಷಕರ ಬೆಂಬಲ ಯಾರ ಸಿನಿಮಾಗೆ?
Image
ಪ್ರೀತಿಸಿದ ಹುಡುಗಿ ರಿಜೆಕ್ಟ್​ ಮಾಡಿದ್ದಕ್ಕೆ ತಲೆ ಬೋಳಿಸಿಕೊಂಡಿದ್ದ ಆಮಿರ್ ಖಾನ್​; ಹಳೆ ಘಟನೆ ನೆನೆದ ನಟ
Image
ಫ್ಯಾಮಿಲಿ ಜತೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?

ಆಮಿರ್​ ಖಾನ್​ ಮತ್ತು ಕರೀನಾ ಕಪೂರ್​ ಖಾನ್​ ಅವರು ‘ಕಾಫಿ ವಿತ್​ ಕರಣ್​’ ಶೋಗೆ ಬರಬೇಕು ಎಂಬುದು ಕೊನೇ ಕ್ಷಣದಲ್ಲಿ ಆದ ನಿರ್ಧಾರ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಈ ಹಿಂದೆ ಕರಣ್​ ಜೋಹರ್​ ಹಂಚಿಕೊಂಡ ಲಾಂಚಿಂಗ್​ ಪ್ರೋಮೋದಲ್ಲಿ ಇವರಿಬ್ಬರು ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಇಬ್ಬರೂ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಪ್ರಮೋಷನ್​ ಸಲುವಾಗಿ ‘ಕಾಫಿ ವಿತ್​ ಕರಣ್​’ ಶೋಗೆ ಹಾಜರಿ ಹಾಕಿದ್ದಾರೆ. ಆ ಎಪಿಸೋಡ್​ ನೋಡಲು ಅಭಿಮಾನಿಗಳು ಕಾದಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ