ಕಾಳಿ ದೇವತೆ ಸಿಗರೇಟ್​ ಸೇದುತ್ತಿರುವ ಪೋಸ್ಟರ್​: ನಿರ್ದೇಶಕಿಯ ವಿರುದ್ಧ ದಾಖಲಾಯ್ತು ದೂರು

ಲೀನಾ ಅವರು ಡಾಕ್ಯುಮೆಂಟರಿ ಒಂದನ್ನು ಮಾಡುತ್ತಿದ್ದಾರೆ. ಅದರ ಪೋಸ್ಟರ್​ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕಾಳಿ ದೇವತೆ ಸಿಗರೇಟ್ ಸೇದುತ್ತಿರುವ ರೀತಿಯಲ್ಲಿ ತೋರಿಸಲಾಗಿದೆ.

ಕಾಳಿ ದೇವತೆ ಸಿಗರೇಟ್​ ಸೇದುತ್ತಿರುವ ಪೋಸ್ಟರ್​: ನಿರ್ದೇಶಕಿಯ ವಿರುದ್ಧ ದಾಖಲಾಯ್ತು ದೂರು
ಲೀನಾ
TV9kannada Web Team

| Edited By: Rajesh Duggumane

Jul 04, 2022 | 2:44 PM

ಚಿತ್ರರಂಗಕ್ಕೂ (Cinema Industry) ವಿವಾದಕ್ಕೂ ಸಾಕಷ್ಟು ನಂಟಿದೆ. ಸಿನಿಮಾದಲ್ಲಿ ಬರುವ ಕೆಲ ಪೋಸ್ಟರ್​, ಸಿನಿಮಾದ ಕೆಲ ದೃಶ್ಯಗಳು ವಿವಾದ ಹೊತ್ತಿಸಿದ ಹಲವು ಉದಾಹರಣೆಗಳಿವೆ. ಈ ವಿಚಾರಕ್ಕೆ ಸಂಬಂಧಿಸಿ ದೊಡ್ಡ ದೊಡ್ಡ ಪ್ರತಿಭಟನೆಗಳೂ ಆಗಿವೆ. ಈಗ ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ಅವರು ಇದೇ ಮಾದರಿಯ ವಿವಾದ ಹೊತ್ತಿಸಿದ್ದಾರೆ. ಅವರು ಹಿಂದೂ ದೇವರಿಗೆ ಅವಮಾನ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅವರ ವಿರುದ್ಧ ದೂರು ಕೂಡ ದಾಖಲಾಗಿದೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟು ಹಾಕುತ್ತಿದೆ.

ಲೀನಾ ಅವರು ಡಾಕ್ಯುಮೆಂಟರಿ ಒಂದನ್ನು ಮಾಡುತ್ತಿದ್ದಾರೆ. ಅದರ ಪೋಸ್ಟರ್​ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕಾಳಿ ದೇವತೆ ಸಿಗರೇಟ್ ಸೇದುತ್ತಿರುವ ರೀತಿಯಲ್ಲಿ ತೋರಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಅನೇಕರು ನಿರ್ದೇಶಕಿ ವಿರುದ್ಧ ಧ್ವನಿ ಎತ್ತಿದ್ದಾರೆ.

ಮಹಿಳೆಯೊಬ್ಬಳು ಕಾಳಿ ದೇವತೆ ಮಾದರಿಯಲ್ಲಿ ಡ್ರೆಸ್ ಹಾಕಿದ್ದಾರೆ. ಈ ಪೋಸ್ಟರ್​ನಲ್ಲಿ ಆ ಮಹಿಳೆ ಸಿಗರೇಟ್ ಸೇದುತ್ತಿದ್ದಾಳೆ. ಇದರ ವಿರುದ್ಧ ಹಿಂದೂಗಳು ಧ್ವನಿ ಎತ್ತಿದ್ದಾರೆ. ಲೀನಾ ಅವರನ್ನು ಬಂಧಿಸಲು ಸೋಶಿಯಲ್ ಮೀಡಿಯಾದಲ್ಲಿ ಆಂದೋಲನ ಆರಂಭ ಆಗಿದೆ.

ಈ ಪೋಸ್ಟರ್​ಗೆ ಸಂಬಂಧಿಸಿ ಲೀನಾ ಅವರು ಪ್ರತಿಕ್ರಿಯೆ ನೀಡಿದ್ದು, ದ್ವೇಷದ ಮಧ್ಯೆ ಪ್ರೀತಿಯನ್ನೇ ಆಯ್ಕೆ ಮಾಡಲು ಅಭಿಮಾನಿಗಳ ಬಳಿ ಕೋರಿದ್ದಾರೆ. ‘ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾನಿಲಯವು ಶಿಬಿರ ಒಂದನ್ನು ಆಯೋಜಿಸಿತ್ತು. ಆ ಶಿಬಿರದಲ್ಲಿ ನಾನು ಭಾಗವಹಿಸಿ ನಿರ್ದೇಶಿಸಿದ ಸಾಕ್ಷ್ಯಚಿತ್ರ ಕಾಳಿ. ನಾನು ಇದನ್ನು ನಿರ್ದೇಶನ ಮಾಡಿದ್ದೇನೆ, ನಟಿಸಿದ್ದೇನೆ ಮತ್ತು ನಿರ್ಮಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಲೀನಾ ಅವರು ಕಾಳಿ ದೇವತೆಯಂತೆ ಡ್ರೆಸ್ ಹಾಕಿ ಸಿಗರೇಟ್ ಸೇದುತ್ತಿರುವುದು ಈ ವಿಡಿಯೋದಲ್ಲಿದೆ. ಚೀಪ್ ಪಬ್ಲಿಸಿಟಿಗೆ ಹಿಂದು ದೇವರನ್ನು ಅವಮಾನ ಮಾಡುವುದು ನಿಜಕ್ಕೂ ನಾಚಿಕೆಗೇಡು. ಅಂತಹ ಸಿನಿಮಾ ನಿರ್ಮಾತೃರನ್ನು ಬ್ಯಾನ ಮಾಡಬೇಕು’ಎಂದು ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅಪಘಾತ: ‘ಕೆಜಿಎಫ್ 2’ ನಟನ ಬೆಂಜ್ ಕಾರು ಸಂಪೂರ್ಣ ಜಖಂ; ಕೂದಲೆಳೆ ಅಂತರದಲ್ಲಿ ನಟ ಪಾರು

ಇದನ್ನೂ ಓದಿ

‘ಆರ್​ಆರ್​ಆರ್​’ ಸಿನಿಮಾ ಹೊಸ ದಾಖಲೆ; ಹಾಲಿವುಡ್ ಅವಾರ್ಡ್​ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆದ ರಾಜಮೌಳಿ ಚಿತ್ರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada