AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanjay Dutt: ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂಜಯ್​ ದತ್​; ‘ಕೆಜಿಎಫ್​ 2’ ಅಧೀರನಿಗೆ ಶುಭಾಶಯಗಳ ಮಹಾಪೂರ

Sanjay Dutt Birthday: ಸಂಜಯ್​ ದತ್​ ಹುಟ್ಟುಹಬ್ಬದ ಪ್ರಯುಕ್ತ ಅವರ ಮೂರನೇ ಪತ್ನಿ ಮಾನ್ಯತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ವಿಶ್​ ಮಾಡಿದ್ದಾರೆ. ವರ್ಕೌಟ್​ ಮಾಡುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

Sanjay Dutt: ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂಜಯ್​ ದತ್​; ‘ಕೆಜಿಎಫ್​ 2’ ಅಧೀರನಿಗೆ ಶುಭಾಶಯಗಳ ಮಹಾಪೂರ
ಸಂಜಯ್ ದತ್
TV9 Web
| Edited By: |

Updated on:Jul 29, 2022 | 9:17 AM

Share

ಬಾಲಿವುಡ್​ನ ಖ್ಯಾತ ನಟ ಸಂಜಯ್ ದತ್​ ಅವರಿಗೆ ಇಂದು (ಜುಲೈ 29) ಜನ್ಮದಿನದ (Sanjay Dutt Birthday) ಸಡಗರ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಎಲ್ಲರಿಂದಲೂ ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. 63ನೇ ವಸಂತಕ್ಕೆ ಸಂಜಯ್​ ದತ್​ (Sanjay Dutt) ಕಾಲಿಟ್ಟಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ಹಲವು ದಶಕಗಳ ಅನುಭವ ಇದೆ. ಈಗಲೂ ಕೂಡ ಅವರು ಸಖತ್​ ಬೇಡಿಕೆ ಉಳಿಸಿಕೊಂಡಿದ್ದಾರೆ. ಅದರಲ್ಲೂ ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಿಡುಗಡೆ ಆದ ಬಳಿಕ ಅವರಿಗೆ ಪ್ಯಾನ್​ ಇಂಡಿಯಾ ಇಮೇಜ್​ ಬಂತು. ಈ ಚಿತ್ರದಲ್ಲಿ ಅವರು ಮಾಡಿದ ಅಧೀರ ಪಾತ್ರವನ್ನು ಪ್ರೇಕ್ಷಕರು ಸಖತ್​ ಮೆಚ್ಚಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ಸಂಜಯ್​ ದತ್​ ಬ್ಯುಸಿ ಆಗಿದ್ದಾರೆ. ಹೊಸ ಹೊಸ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿದೆ. ಅನಾರೋಗ್ಯವನ್ನೂ ಮೆಟ್ಟಿನಿಂತು ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ.

ಫಿಟ್ನೆಸ್​ ಬಗ್ಗೆ ಸಂಜಯ್​ ದತ್​ ಅವರು ಸದಾ ಕಾಳಜಿ ವಹಿಸುತ್ತಾರೆ. 63ನೇ ವಯಸ್ಸಿನಲ್ಲೂ ಅವರು ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದಾರೆ. ಎಂದಿಗೂ ಅವರು ವರ್ಕೌಟ್​ ತಪ್ಪಿಸುವುದಿಲ್ಲ. ಈ ವಿಚಾರದಲ್ಲಿ ಸಂಜಯ್​ ದತ್​ ಅನೇಕರಿಗೆ ಮಾದರಿ ಆಗಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನೂ ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​
Image
ಡ್ರಗ್ಸ್​ ಮತ್ತು ಹುಡುಗಿ ವಿಷಯದಲ್ಲಿ ಸಂಜಯ್​ ದತ್​ ತಿಳಿದುಕೊಂಡಿದ್ದೇ ಬೇರೆ: ಎಲ್ಲವನ್ನೂ ಬಾಯ್ಬಿಟ್ಟ ಅಧೀರ
Image
ಪ್ರೊಡಕ್ಷನ್​ ಹೌಸ್​ ಆರಂಭಿಸಿದ ‘ಕೆಜಿಎಫ್​ 2’ ವಿಲನ್​​; ಸಂಜಯ್​ ದತ್​ಗಿದೆ ದೊಡ್ಡ ಕನಸು
Image
ಶೂಟಿಂಗ್​ ಸೆಟ್​ನಲ್ಲಿ ಊಟ ಮಾಡಿ ಬೈಯಿಸಿಕೊಂಡಿದ್ದ ಸಂಜಯ್​ ದತ್​; ‘ಕೆಜಿಎಫ್​’ ಅಧೀರನ ಕಷ್ಟದ ಹಾದಿ

ಸಂಜಯ್​ ದತ್​ ಹುಟ್ಟುಹಬ್ಬದ ಪ್ರಯುಕ್ತ ಅವರ ಮೂರನೇ ಪತ್ನಿ ಮಾನ್ಯತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ವಿಶ್​ ಮಾಡಿದ್ದಾರೆ. ವರ್ಕೌಟ್​ ಮಾಡುತ್ತಿರುವ ಫೋಟೋವನ್ನು ಪೋಸ್ಟ್​ ಮಾಡಿದ್ದು, ‘ನನ್ನ ರಾಕ್​ಸ್ಟಾರ್​ಗೆ ಹುಟ್ಟುಹಬ್ಬದ ಶುಭಾಶಯಗಳು. ಎಂದೆಂದಿಗೂ ನಮಗೆ ಸ್ಫೂರ್ತಿ ನೀಡುತ್ತಿರಿ’ ಎಂದು ಮಾನ್ಯತಾ ಅವರು ಹಾರೈಸಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಕೂಡ ಸಂಜಯ್​ ದತ್​ ಜನ್ಮದಿನಕ್ಕೆ ವಿಶ್​ ಮಾಡುತ್ತಿದ್ದಾರೆ.

View this post on Instagram

A post shared by Maanayata Dutt (@maanayata)

2022ರ ವರ್ಷ ಸಂಜಯ್​ ದತ್​ ಅವರಿಗೆ ಸಖತ್​ ವಿಶೇಷ. ಈ ವರ್ಷ ಅವರು ನಟಿಸಿದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ತೆರೆಕಂಡು ಅದ್ಭುತ ಯಶಸ್ಸು ಪಡೆಯಿತು. ಅಧೀರ ಪಾತ್ರದಲ್ಲಿ ಸಂಜು ಬಾಬಾ ಮಿಂಚಿದರು. ಆ ಮೂಲಕ ಅವರ ಬೇಡಿಕೆ ಹೆಚ್ಚಿತು. ‘ಕೆಜಿಎಫ್​ 2’ ತಂಡದ ಜೊತೆ ಕೆಲಸ ಮಾಡಿದ್ದಕ್ಕೆ ಅವರಿಗೆ ಸಖತ್​ ಖುಷಿ ಇದೆ. ದಕ್ಷಿಣ ಭಾರತದ ಸಿನಿಮಾಗಳನ್ನು ಅವರು ಹಾಡಿ ಹೊಗಳುತ್ತಿದ್ದಾರೆ. ಸಂಜಯ್​ ದತ್​ ನಟಿಸಿದ ‘ಶಂಷೇರಾ’ ಚಿತ್ರ ಇತ್ತೀಚೆಗೆ ಬಿಡುಗಡೆ ಆಯಿತು. ಆದರೆ ಅಂದುಕೊಂಡ ಮಟ್ಟಕ್ಕೆ ಆ ಸಿನಿಮಾ ಕಲೆಕ್ಷನ್​ ಮಾಡಿಲ್ಲ.

Published On - 9:17 am, Fri, 29 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್