‘ಕೆಜಿಎಫ್ 2’ ನೋಡಿ ಬದಲಾಗಿದೆ ಬಾಲಿವುಡ್ ಪ್ರೇಕ್ಷಕರ ಮನಸ್ಥಿತಿ? ಆಮಿರ್ ಖಾನ್​ಗೆ ಶುರುವಾಗಿದೆ ಭಯ

ಈ ಚಿತ್ರದಲ್ಲಿ ಕೆಲ ಯುದ್ಧದ ದೃಶ್ಯಗಳು ಇರುತ್ತವೆಯಾದರೂ ಮಾಸ್ ಆ್ಯಕ್ಷನ್ ಇಲ್ಲ. ಈ ಕಾರಣಕ್ಕೆ ಬಾಲಿವುಡ್ ಮಂದಿ ಈ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೋ ಅಥವಾ ಇಲ್ಲವೋ ಎಂಬ ಭಯ ಆಮಿರ್ ಖಾನ್​ಗೆ ಕಾಡುತ್ತಿದೆ ಎನ್ನಲಾಗುತ್ತಿದೆ.

‘ಕೆಜಿಎಫ್ 2’ ನೋಡಿ ಬದಲಾಗಿದೆ ಬಾಲಿವುಡ್ ಪ್ರೇಕ್ಷಕರ ಮನಸ್ಥಿತಿ? ಆಮಿರ್ ಖಾನ್​ಗೆ ಶುರುವಾಗಿದೆ ಭಯ
ಆಮಿರ್​-ಯಶ್
TV9kannada Web Team

| Edited By: Rajesh Duggumane

Jul 17, 2022 | 7:00 AM

ಯಶ್ (Yash) ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ  ‘ಕೆಜಿಎಫ್ 2’ ಸಿನಿಮಾ (KGF Chapter 2) ಸೃಷ್ಟಿ ಮಾಡಿದ ದಾಖಲೆಗಳು ಒಂದೆರಡಲ್ಲ. ಈ ಚಿತ್ರ ಬಾಲಿವುಡ್​ ಒಂದರಲ್ಲೇ 430 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾಲಿವುಡ್​ನಲ್ಲೇ ಸಿದ್ಧಗೊಂಡ ಚಿತ್ರಗಳೂ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ಈ ಸಿನಿಮಾದಲ್ಲಿ ಹೀರೋಯಿಸಂ, ತಾಯಿ ಸೆಂಟಿಮೆಂಟ್​ ತೋರಿಸಿದ ರೀತಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಬಾಲಿವುಡ್​​ನ ಯಾವುದೇ ದೊಡ್ಡ ಬಜೆಟ್​ ಸಿನಿಮಾ ತೆರೆಕಂಡರೂ ಅದನ್ನು ‘ಕೆಜಿಎಫ್ 2’ಗೆ ಹೋಲಿಕೆ ಮಾಡಲಾಗುತ್ತಿದೆ. ಇದು ಅನೇಕ ದೊಡ್ಡ ಚಿತ್ರಗಳಿಗೆ ಹಿನ್ನಡೆ ಆಗುತ್ತಿದೆ ಎನ್ನಲಾಗುತ್ತಿದೆ. ಆ ಸಾಲಿನಲ್ಲಿ ‘ಲಾಲ್ ಸಿಂಗ್ ಚಡ್ಡಾ’  (Laal Singh Chaddha) ಕೂಡ ಇದೆ ಎನ್ನಲಾಗುತ್ತಿದೆ.

ಹಾಲಿವುಡ್​ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ‘ಲಾಲ್ ಸಿಂಗ್ ಚಡ್ಡಾ’. ಮೂಲ ಚಿತ್ರವನ್ನು ಬಹುತೇಕ ಯಥಾವತ್ತು ಇಡಲಾಗಿದೆ ಎಂಬುದು ಟ್ರೇಲರ್​ನಲ್ಲಿ ಗಮನಕ್ಕೆ ಬಂದಿದೆ. ಈ ಚಿತ್ರದಲ್ಲಿ ಕೆಲ ಯುದ್ಧದ ದೃಶ್ಯಗಳು ಇರುತ್ತವೆಯಾದರೂ ಮಾಸ್ ಆ್ಯಕ್ಷನ್ ಇಲ್ಲ. ಈ ಕಾರಣಕ್ಕೆ ಬಾಲಿವುಡ್ ಮಂದಿ ಈ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೋ ಅಥವಾ ಇಲ್ಲವೋ ಎಂಬ ಭಯ ಆಮಿರ್ ಖಾನ್​ಗೆ ಕಾಡುತ್ತಿದೆ ಎನ್ನಲಾಗುತ್ತಿದೆ.

ಈ ಮೊದಲು ‘ರಾಧೆ ಶ್ಯಾಮ್’ ಸಿನಿಮಾ ಹೀನಾಯ ಸೋಲು ಕಂಡಿತ್ತು. ಈ ಚಿತ್ರದಲ್ಲಿ ಯಾವುದೇ ಮಾಸ್ ಅಂಶ ಇರಲಿಲ್ಲ. ಸಿನಿಮಾ ಸೋಲಲು ಇದು ಪ್ರಮುಖ ಕಾರಣ ಎನ್ನಲಾಗಿತ್ತು. ಈಗ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ತಂಡದವರಿಗೂ ಇದೇ ಮಾದರಿಯ ಭಯ ಕಾಡುತ್ತಿದೆ ಎಂದು ವರದಿ ಆಗಿದೆ. ಈ ಕಾರಣಕ್ಕೆ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲು ತಂಡ ಪ್ಲ್ಯಾನ್ ರೂಪಿಸುತ್ತಿದೆ.

ಇದನ್ನೂ ಓದಿ: ರಾಜಮೌಳಿ, ಚಿರಂಜೀವಿಗೆ ‘ಲಾಲ್ ಸಿಂಗ್ ಚಡ್ಡಾ’ ಸ್ಪೆಷಲ್ ಶೋ; ಸ್ಟಾರ್​ಗಳ ಪ್ರತಿಕ್ರಿಯೆ ನೋಡಿ ಕಣ್ಣೀರಿಟ್ಟ ಆಮಿರ್ ಖಾನ್

ಇದನ್ನೂ ಓದಿ

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ತೆರೆಗೆ ಬರೋಕೆ ಒಂದು ತಿಂಗಳು ಮಾತ್ರ ಬಾಕಿ ಇದೆ. ಆದಾಗ್ಯೂ ಸಿನಿಮಾಗೆ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿ ಆಗಿಲ್ಲ. ಈ ಚಿತ್ರದ ರಿಲೀಸ್ ದಿನಾಂಕ ಪದೇ ಪದೇ ಮುಂದೂಡಲ್ಪಟ್ಟಿರುವುದೂ ಚಿತ್ರದ ಹೈಪ್ ಸೃಷ್ಟಿ ಕುಗ್ಗಲು ಕಾರಣ ಎನ್ನಲಾಗುತ್ತಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈ ಚಿತ್ರದ ಟ್ರೇಲರ್​ಅನ್ನು ಐಪಿಎಲ್ ಫಿನಾಲೆಯಲ್ಲಿ ರಿಲೀಸ್ ಮಾಡಲಾಯಿತು. ಇದು ಕೂಡ ಚಿತ್ರಕ್ಕೆ ಅಂದುಕೊಂಡ ಮಟ್ಟಿಗೆ ಸಹಕಾರಿ ಆಗಿಲ್ಲ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada