Taapsee Pannu: ಎಲ್ಲರ ಎದುರು ತಾಪ್ಸಿ ಪನ್ನು ಕಿರಿಕ್​; ನಟಿಯ ಕೋಪಕ್ಕೆ ಕಾರಣವಾಯ್ತು ಫೋಟೋಗ್ರಾಫರ್​ ವರ್ತನೆ

TV9 Digital Desk

| Edited By: ಮದನ್​ ಕುಮಾರ್​

Updated on:Aug 09, 2022 | 8:32 AM

Taapsee Pannu | Paparazzi: ನಟಿ ತಾಪ್ಸಿ ಪನ್ನು ಮತ್ತು ಪಾಪರಾಜಿಗಳ ನಡುವೆ ಮುಂಬೈನಲ್ಲಿ ಕಿರಿಕ್​ ಆಗಿದೆ. ಈ ಸಂದರ್ಭದ ವಿಡಿಯೋ ಸಖತ್​ ವೈರಲ್​ ಆಗಿದೆ.

Taapsee Pannu: ಎಲ್ಲರ ಎದುರು ತಾಪ್ಸಿ ಪನ್ನು ಕಿರಿಕ್​; ನಟಿಯ ಕೋಪಕ್ಕೆ ಕಾರಣವಾಯ್ತು ಫೋಟೋಗ್ರಾಫರ್​ ವರ್ತನೆ
ತಾಪ್ಸಿ ಪನ್ನು ವೈರಲ್ ವಿಡಿಯೋ

ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು (Paparazzi) ಮುತ್ತಿಗೆ ಹಾಕಿಕೊಳ್ಳುತ್ತಾರೆ. ನಟ-ನಟಿಯರ ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯುವ ಸಲುವಾಗಿ ಪಾಪರಾಜಿಗಳು ಸದಾ ಕಿತ್ತಾಟ ನಡೆಸುತ್ತಾರೆ. ಇದರಿಂದ ಸೆಲೆಬ್ರಿಟಿಗಳಿಗೆ ಕಿರಿಕಿರಿ ಆದಂತಹ ಅನೇಕ ಉದಾಹರಣೆಗಳಿವೆ. ಈಗ ನಟಿ ತಾಪ್ಸಿ ಪನ್ನು (Taapsee Pannu) ಅವರಿಗೂ ಅದೇ ರೀತಿ ಆಗಿದೆ. ಮುಂಬೈನಲ್ಲಿ ಅವರು ಕೋಪಗೊಂಡು ಕೂಗಾಡಿದ ವಿಡಿಯೋ ವೈರಲ್​ ಆಗಿದೆ. ಒಂದೇ ಒಂದು ಫೋಟೋ ಸಲುವಾಗಿ ಇಷ್ಟೆಲ್ಲ ಕಿರಿಕ್​ ಆಗಿದೆ. ತಾಪ್ಸಿ ಪನ್ನು ಅವರದ್ದು ನೇರ ನಡೆ-ನುಡಿಯ ವ್ಯಕ್ತಿತ್ವ. ಆ ಕಾರಣಕ್ಕಾಗಿ ಅವರು ಅನೇಕ ಬಾರಿ ವಿವಾದ (Taapsee Pannu Controversy) ಮಾಡಿಕೊಂಡಿದ್ದಿದೆ. ಈಗ ಪಾಪರಾಜಿಗಳ ಜೊತೆ ಅವರು ಜಗಳವಾಡಿದ್ದಾರೆ. ಅಂತಿಮವಾಗಿ ‘ನೀವೇ ಸರಿ.. ಕಲಾವಿದರದ್ದೇ ತಪ್ಪು ಬಿಡಿ’ ಎಂದು ಕೈ ಮುಗಿದು ಮುಂದೆ ಸಾಗಿದ್ದಾರೆ. ಆ ಘಟನೆಯ ವಿವರ ಇಲ್ಲಿದೆ.

ಪವೇಲ್​ ಗುಲಾಟಿ ಮತ್ತು ತಾಪ್ಸಿ ಪನ್ನು ಜೊತೆಯಾಗಿ ನಟಿಸಿರುವ ‘ದೋಬಾರಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಆಗಸ್ಟ್​ 19ರಂದು ತೆರೆಕಾಣಲಿದೆ.​ ಅದರ ಪ್ರಚಾರದ ಸಲುವಾಗಿ ಅವರು ಅನೇಕ ಕಡೆಗಳಿಗೆ ತೆರಳಿ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಇತ್ತೀಚಿಗೆ ಮುಂಬೈನಲ್ಲಿ ಅವರೊಂದು ಕಾರ್ಯಕ್ರಮಕ್ಕೆ ಹಾಜರಿ ಹಾಕಿದರು. ಈ ವೇಳೆ ಪಾಪರಾಜಿಗಳ ಜೊತೆ ಕಿರಿಕ್​ ಮಾಡಿಕೊಂಡಿದ್ದಾರೆ.

ಇವೆಂಟ್​ ನಡೆಯುವ ಸ್ಥಳಕ್ಕೆ ತಾಪ್ಸಿ ಪನ್ನು ಆಗಮಿಸುತ್ತಿದ್ದಂತೆಯೇ ಅವರ ಫೋಟೋಗಳನ್ನು ಸೆರೆ ಹಿಡಿಯಲು ಪಾಪರಾಜಿಗಳು ಮುಗಿಬಿದ್ದರು. ಆದರೆ ಅವರಿಗೆ ತಾಪ್ಸಿ ಪೋಸ್ ನೀಡಲಿಲ್ಲ. ಅದಾಗಲೇ ಕಾರ್ಯಕ್ರಮಕ್ಕೆ ತಡವಾಗಿದ್ದರಿಂದ ನೇರವಾಗಿ ಅವರು ವೇದಿಕೆ ಕಡೆಗೆ ಹೋಗಲು ಮುಂದಾದರು. ಆದರೆ ಅವರನ್ನು ಪಾಪರಾಜಿಗಳು ಸುತ್ತಿವರಿದು ಪೋಸ್​ ನೀಡಲೇಬೇಕು ಎಂದು ಪಟ್ಟು ಹಿಡಿದರು. ಇದರಿಂದ ತಾಪ್ಸಿಗೆ ಸಿಟ್ಟು ಬಂತು.

ಇದನ್ನೂ ಓದಿ

‘ನಿಮಗಾಗಿ ನಾವು ಕಾಯುತ್ತಿದ್ದೇವೆ. ಇಷ್ಟು ತಡವಾಗಿ ಬಂದು ಪೋಸ್​ ನೀಡುತ್ತಿಲ್ಲವಲ್ಲ’ ಎಂದು ಪಾಪರಾಜಿಗಳು ಹೇಳಿದರು. ‘ಆಯೋಜಕರು ಹೇಳಿದ ಸಮಯಕ್ಕೆ ನಾನು ಬಂದಿದ್ದೇನೆ’ ಎಂದು ತಾಪ್ಸಿ ತಿರುಗೇಟು ನೀಡಿದರು. ಈ ವಾದ ಕೆಲವು ನಿಮಿಷ ಮುಂದುವರಿಯಿತು. ನಂತರ ‘ನಿಮ್ಮದೇ ಸರಿ.. ಕಲಾವಿದರದ್ದು ಯಾವಾಗಲೂ ತಪ್ಪು’ ಎಂದು ವ್ಯಂಗ್ಯವಾಗಿ ಹೇಳಿ ಕೈ ಮುಗಿದು ತಾಪ್ಸಿ ಮುಂದೆ ಸಾಗಿದರು. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada