ತಾಪ್ಸಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಮಿಷನ್ ಇಂಪಾಸಿಬಲ್ ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಪ್ರಚಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ನಡುವೆ ನಟಿ ಸಂಭಾವನೆ ಬಗ್ಗೆ ಮಾತನಾಡಿದ್ದು, ಮಹಿಳಾ ನಟಿಯರಿಗೆ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಸಾಮರ್ಥ್ಯದ ಮೇಲೆ ಸಂಭಾವನೆ ನಿಗದಿ ಮಾಡಲಾಗುತ್ತದೆ ಎಂದಿದ್ದಾರೆ.
ದಕ್ಷಿಣದಲ್ಲಿ ಯಶಸ್ಸು ಕಂಡ ತಾಪ್ಸಿ ಪನ್ನು ಈಗ ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ತಾಪ್ಸಿ ಗುರುತಿಸಿಕೊಳ್ಳುತ್ತಿದ್ದಾರೆ.
1 / 6
ಸಣ್ಣ ಚಿತ್ರಗಳಿಂದ ಬಾಲಿವುಡ್ನಲ್ಲಿ ಪಯಣ ಆರಂಭಿಸಿದ ತಾಪ್ಸಿ, ಈಗ ಬಹುಬೇಡಿಕೆಯ ನಟಿಯಾಗಿದ್ದಾರೆ. ತಮ್ಮದೇ ಆದ ಪ್ರೇಕ್ಷಕ ವರ್ಗವನ್ನೂ ನಟಿ ಸೃಷ್ಟಿಸಿಕೊಂಡಿದ್ದಾರೆ.
2 / 6
ಸ್ಟಾರ್ಗಳ ಚಿತ್ರಗಳಿಂದ ದೂರ ಉಳಿದಿರುವ ನಟಿ, ವಿಷಯ ಪ್ರಧಾನ ಚಿತ್ರಗಳತ್ತ ಒಲವು ತೋರುತ್ತಿದ್ದಾರೆ. ಮಸಾಲಾ ಚಿತ್ರಗಳ ಬಗ್ಗೆ ಈ ಹಿಂದೆ ತಾಪ್ಸಿ ಕಟು ಟೀಕೆಯನ್ನೂ ಮಾಡಿದ್ದರು.
3 / 6
ಪ್ರಸ್ತುತ ತಾಪ್ಸಿ ನಟಿಯರ ಸಂಭಾವನೆ ಹಾಗೂ ಚಿತ್ರಗಳ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆ. ‘‘ಮಹಿಳಾ ಪ್ರಧಾನ ಚಿತ್ರಗಳಿಗೆ ಜನರು ಆಗಮಿಸುವುದು ‘ಮೌತ್ ಪಬ್ಲಿಸಿಟಿ’ ಅರ್ಥಾತ್ ಬಾಯಿಂದ ಬಾಯಿಗೆ ಮೆಚ್ಚುಗೆ ಹರಡಿದ ನಂತರ’’ ಎಂದಿದ್ದಾರೆ ತಾಪ್ಸಿ. ಆದರೆ ಹೀರೋಗಳ ಚಿತ್ರಗಳಿಗೆ ಜನರು ಮುಂಗಡವಾಗಿ ಬುಕ್ಕಿಂಗ್ ಮಾಡಿ ಆಗಮಿಸುತ್ತಾರೆ ಎಂದು ನಟಿ ಹೇಳಿದ್ದಾರೆ.
4 / 6
ಇದರಿಂದ ಆಗುವ ಸಮಸ್ಯೆಗಳ ಬಗ್ಗೆ ಹೇಳಿರುವ ತಾಪ್ಸಿ, ನಟಿಯರಿಗೆ ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ಸಾಮರ್ಥ್ಯದ ಆಧಾರದ ಮೇಲೆ ಸಂಭಾವನೆ ನಿಗದಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
5 / 6
‘‘ಈ ವಿಚಾರ ನಿಜ ಆದರೆ ಒಪ್ಪಿಕೊಳ್ಳಲು ಕಷ್ಟ’’ ಎಂದಿದ್ದಾರೆ ತಾಪ್ಸಿ. ಈ ಹಿಂದೆ ಹಲವು ಬಾರಿ ತಾಪ್ಸಿ ಸಂಭಾವನೆ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದರು.