‘ಸಿಂಗಾರ ಸಿರಿಯೆ..’ ಹಾಡಿಗೆ ತಲೆದೂಗಿದ ಪ್ರೇಕ್ಷಕರು; ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರಕ್ಕೆ ಸಿಕ್ತು ಮೈಲೇಜ್

‘ಸಿಂಗಾರ ಸಿರಿಯೆ’ ಹಾಡು ಸ್ವಾತಂತ್ರ್ಯೋತ್ಸದ ಅಂಗವಾಗಿ ಆಗಸ್ಟ್ 15ರಂದು ರಿಲೀಸ್ ಆಗಿದೆ. ಈ ಹಾಡು ಈಗಾಗಲೇ 15 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಟ್ರೆಂಡಿಂಗ್​ನಲ್ಲಿ ಈ  ಹಾಡು ಎರಡನೇ ಸ್ಥಾನದಲ್ಲಿದೆ. 

‘ಸಿಂಗಾರ ಸಿರಿಯೆ..’ ಹಾಡಿಗೆ ತಲೆದೂಗಿದ ಪ್ರೇಕ್ಷಕರು; ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರಕ್ಕೆ ಸಿಕ್ತು ಮೈಲೇಜ್
ಸಪ್ತಮಿ-ರಿಷಬ್
TV9kannada Web Team

| Edited By: Rajesh Duggumane

Aug 16, 2022 | 4:02 PM

ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಹಲವು ಚಿತ್ರಗಳ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಸೆಪ್ಟೆಂಬರ್ 30ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಸಿನಿಮಾದ ಟ್ರೇಲರ್ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಈಗ ಚಿತ್ರದ ಹೊಸ ಸಾಂಗ್ ರಿಲೀಸ್ ಆಗಿದೆ. ‘ಸಿಂಗಾರ ಸಿರಿಯೇ..’ (Singara Siriye) ಹೆಸರಿನ ಹಾಡು ಬಿಡುಗಡೆ ಆಗಿದ್ದು, ಪ್ರೇಕ್ಷಕರು ಈ ಹಾಡಿಗೆ ತಲೆದೂಗಿದ್ದಾರೆ. ಈ ಸಾಂಗ್ ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಳ್ಳುತ್ತಿದೆ.

‘ಕಾಂತಾರ’ ಚಿತ್ರ ಕರಾವಳಿ ತೀರದ ಸೊಗಡಿನಲ್ಲಿ ಮೂಡಿ ಬರುತ್ತಿದೆ. ಕಂಬಳದ ಕಥೆ ಈ ಚಿತ್ರದ ಹೈಲೈಟ್. ಟ್ರೇಲರ್ ಹಾಗೂ ಪೋಸ್ಟರ್​ ಮೂಲಕ ಈ ವಿಚಾರ ಪ್ರೇಕ್ಷಕರಿಗೆ ಗೊತ್ತಾಗಿದೆ. ಈಗ ‘ಸಿಂಗಾರ ಸಿರಿಯೆ’ ಹಾಡು ಸ್ವಾತಂತ್ರ್ಯೋತ್ಸದ ಅಂಗವಾಗಿ ಆಗಸ್ಟ್ 15ರಂದು ರಿಲೀಸ್ ಆಗಿದೆ. ಈ ಹಾಡು ಈಗಾಗಲೇ 15 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಟ್ರೆಂಡಿಂಗ್​ನಲ್ಲಿ ಈ  ಹಾಡು ಎರಡನೇ ಸ್ಥಾನದಲ್ಲಿದೆ.  ಈ ಮೂಲಕ ‘ಕಾಂತಾರ’ ಚಿತ್ರಕ್ಕೆ ದೊಡ್ಡ ಮೈಲೇಜ್ ಸಿಕ್ಕಿದೆ.

ಅಜನೀಶ್ ಲೋಕನಾಥ್ ಅವರು ಈಗಾಗಲೇ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ‘ಕಾಂತಾರ’ ಸಿನಿಮಾದ ಹಾಡುಗಳು ಮೂಡಿ ಬಂದಿವೆ. ‘ಸಿಂಗಾರ ಸಿರಿಯೆ’ ಹಾಡಿಗೆ ಅವರು ನೀಡಿದ ಸಂಗೀತ ಕೇಳಿ ಜನರು ತಲೆದೂಗಿದ್ದಾರೆ. ವಿಜಯ್ ಪ್ರಕಾಶ್, ಅನನ್ಯಾ ಭಟ್ ಹಾಗೂ ಪನ್ನಾರ್ ವಲ್ಟುರ್​ ಗಾಯನ ಹಾಡಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಪ್ರಮೋದ್ ಮರವಂತೆ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ: ದಸರಾ ಹಬ್ಬಕ್ಕೆ ಬರಲಿದೆ ‘ಕಾಂತಾರ’; ರಿಷಬ್​ ಶೆಟ್ಟಿ ಚಿತ್ರದ ರಿಲೀಸ್​ ಡೇಟ್​ ಘೋಷಿಸಿದ ‘ಹೊಂಬಾಳೆ ಫಿಲ್ಮ್ಸ್​’

ಇದನ್ನೂ ಓದಿ

ದಸರಾ ಹಬ್ಬದ ಪ್ರಯುಕ್ತ ಈ ಸಿನಿಮಾ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗುತ್ತಿದೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ‘ದಸರಾದ ಜೊತೆಗೆ ಕಾಡ್ಗಿಚ್ಚಿನ ಬಯಲಾಟಕ್ಕೆ ಸಾಕ್ಷಿಯಾಗಿ. ಸೆಪ್ಟೆಂಬರ್ 30ರಂದು ಕಾಂತಾರ ಅನಾವರಣ’ ಎಂದು ಈ ಮೊದಲು ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ಘೋಷಣೆ ಆಗಿತ್ತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada