ದಸರಾ ಹಬ್ಬಕ್ಕೆ ಬರಲಿದೆ ‘ಕಾಂತಾರ’; ರಿಷಬ್​ ಶೆಟ್ಟಿ ಚಿತ್ರದ ರಿಲೀಸ್​ ಡೇಟ್​ ಘೋಷಿಸಿದ ‘ಹೊಂಬಾಳೆ ಫಿಲ್ಮ್ಸ್​’

TV9 Digital Desk

| Edited By: ಮದನ್​ ಕುಮಾರ್​

Updated on:Jun 04, 2022 | 8:53 AM

Kantara Movie Release Date: ‘ಹೊಂಬಾಳೆ ಫಿಲ್ಮ್ಸ್​’ ನಿರ್ಮಾಣದ ‘ಕಾಂತಾರ’ ಸಿನಿಮಾ ನೋಡಲು ರಿಷಬ್​ ಶೆಟ್ಟಿ ಅಭಿಮಾನಿಗಳು ಕಾದಿದ್ದಾರೆ. ಸೆಪ್ಟೆಂಬರ್ 30ರಂದು ಈ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ದಸರಾ ಹಬ್ಬಕ್ಕೆ ಬರಲಿದೆ ‘ಕಾಂತಾರ’; ರಿಷಬ್​ ಶೆಟ್ಟಿ ಚಿತ್ರದ ರಿಲೀಸ್​ ಡೇಟ್​ ಘೋಷಿಸಿದ ‘ಹೊಂಬಾಳೆ ಫಿಲ್ಮ್ಸ್​’
ರಿಷಬ್​ ಶೆಟ್ಟಿ

ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಿಷಬ್​ ಶೆಟ್ಟಿ (Rishab Shetty) ಅವರ ಪ್ರತಿ ಸಿನಿಮಾದಲ್ಲೂ ಪ್ರೇಕ್ಷಕರಿಗೆ ಹೊಸದೇನನ್ನೋ ಪರಿಚಯಿಸುತ್ತಾರೆ. ಈಗ ಅವರು ‘ಕಾಂತಾರ’ ಸಿನಿಮಾದ (Kantara Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕರಾವಳಿ ಭಾಗದ ಕಥೆ ಹೊಂದಿರುವ ಈ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದು, ಮುಖ್ಯ ಭೂಮಿಕೆಯಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಭರಪೂರ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ (Hombale Films) ಮೂಲಕ ಈ ಚಿತ್ರ ಮೂಡಿಬರುತ್ತಿರುವ ಕಾರಣದಿಂದ ಹೈಪ್​ ಹೆಚ್ಚಿದೆ. ಈಗ ‘ಕಾಂತಾರ’ ಸಿನಿಮಾದ ರಿಲೀಸ್​ ಡೇಟ್​ ಅನೌನ್ಸ್​ ಮಾಡಲಾಗಿದೆ. ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ಸೆ.30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ವಿಜಯ್​ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​​ನಿಂದ ಚಿತ್ರದ ಮೇಲಿನ ಕೌತುಕ ಡಬಲ್​ ಆಗಿದೆ.

ಭಾರತೀಯ ಚಿತ್ರರಂಗದಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ‘ಹೊಂಬಾಳೆ ಫಿಲ್ಮ್ಸ್​’ ಬೆಳೆದು ನಿಂತಿದೆ. ‘ಕೆಜಿಎಫ್​: ಚಾಪ್ಟರ್​ 2’ ರೀತಿಯ ಬೃಹತ್​ ಸಿನಿಮಾವನ್ನು ನಿರ್ಮಾಣ ಮಾಡಿದ ಖ್ಯಾತಿ ಈ ಸಂಸ್ಥೆಗೆ ಸಲ್ಲುತ್ತದೆ. ಹಾಗಂತ ಒಂದೇ ರೀತಿಯ ಚಿತ್ರಗಳನ್ನು ಈ ಸಂಸ್ಥೆ ನಿರ್ಮಾಣ ಮಾಡುತ್ತಿಲ್ಲ. ಬಗೆಬಗೆಯ ಸಿನಿಮಾಗಳಿಗೆ ಬಂಡವಾಳ ಹೂಡಲಾಗುತ್ತಿದೆ. ಆ ಪೈಕಿ ‘ಕಾಂತಾರ’ ಸಿನಿಮಾ ಮೂಲಕ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ನವರಸಗಳ ರಸದೌತಣ ಬಡಿಸ್ತಾರೆ ಜಗ್ಗೇಶ್​; ಆ.5ಕ್ಕೆ ‘ರಾಘವೇಂದ್ರ ಸ್ಟೋರ್ಸ್​’ ಶುರು

‘ದಸರಾದ ಜೊತೆಗೆ ಕಾಡ್ಗಿಚ್ಚಿನ ಬಯಲಾಟಕ್ಕೆ ಸಾಕ್ಷಿಯಾಗಿ. ಸೆಪ್ಟೆಂಬರ್ 30ರಂದು ಕಾಂತಾರ ಅನಾವರಣ’ ಎಂದು ‘ಹೊಂಬಾಳೆ ಫಿಲ್ಮ್ಸ್​’ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಪೋಸ್ಟ್​ ಮಾಡಲಾಗಿದೆ. ಈ ಸಿನಿಮಾ ನೋಡಲು ರಿಷಬ್​ ಶೆಟ್ಟಿ ಅಭಿಮಾನಿಗಳು ಕಾದಿದ್ದಾರೆ. ಯೂಟ್ಯೂಬ್​ನಲ್ಲಿ ‘ಕಾಂತಾರ’ ಟೀಸರ್​ ಬರೋಬ್ಬರಿ 21 ಲಕ್ಷಕ್ಕಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಸಿನಿಮಾ ಮೇಲೆ ಜನರಿಗೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ.

ರಿಷಬ್​ ಶೆಟ್ಟಿ ಜೊತೆಗೆ ಅಚ್ಯುತ್​ ಕುಮಾರ್​, ಪ್ರಮೋದ್​ ಶೆಟ್ಟಿ, ಸಪ್ತಮಿ ಗೌಡ, ಕಿಶೋರ್​ ಮುಂತಾದವರು ‘ಕಾಂತಾರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಿ. ಅಜನೀಶ್​ ಲೋಕನಾಥ್​ ಅವರ ಸಂಗೀತ ನೀಡುತ್ತಿದ್ದಾರೆ. ಭರ್ಜರಿ ಸಾಹಸ ದೃಶ್ಯಗಳು ಈ ಸಿನಿಮಾದಲ್ಲಿ ಇದೆ ಎಂಬುದಕ್ಕೆ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಈ ಸಿನಿಮಾದಿಂದ ರಿಷಬ್​​ ಶೆಟ್ಟಿ ವೃತ್ತಿಬದುಕಿನ ಮೈಲೇಜ್​ ಹೆಚ್ಚಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada