AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಸರ್​ ಮೂಲಕ ಗಮನ ಸೆಳೆದ ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್​’; ಹೊಂಬಾಳೆ ಫಿಲ್ಮ್ಸ್​ ಪ್ರಯತ್ನಕ್ಕೆ ಸಿಕ್ತು ಮೆಚ್ಚುಗೆ

ಭಿನ್ನ ರೀತಿಯ ಚಿತ್ರಗಳನ್ನು ತೆರೆಗೆ ತರೋಕೆ ವಿಜಯ್ ಕಿರಗಂದೂರು ಅವರು ಪ್ರಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನ ಎಷ್ಟು ಭಿನ್ನವಾದುದು ಎಂಬುದಕ್ಕೆ ‘ಕಾಂತಾರ’ ಹಾಗೂ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದ ಟೀಸರ್​ಗಳೇ ಸಾಕ್ಷಿ.

ಟೀಸರ್​ ಮೂಲಕ ಗಮನ ಸೆಳೆದ ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್​’; ಹೊಂಬಾಳೆ ಫಿಲ್ಮ್ಸ್​ ಪ್ರಯತ್ನಕ್ಕೆ ಸಿಕ್ತು ಮೆಚ್ಚುಗೆ
ರಿಷಬ್-ಜಗ್ಗೇಶ್
TV9 Web
| Edited By: |

Updated on:Apr 14, 2022 | 3:32 PM

Share

‘ಹೊಂಬಾಳೆ ಫಿಲ್ಮ್ಸ್​’ ಸಿನಿ (Hombale Fimls) ಪ್ರಿಯರಿಗೆ ಮತ್ತೆ ರಸದೌತಣ ಬಡಿಸಲು ರೆಡಿ ಆಗಿದೆ. ‘ಕೆಜಿಎಫ್ ಚಾಪ್ಟರ್​ 2’ (KGF Chapter 2) ಚಿತ್ರದ ಮೂಲಕ ಹೊಸ ಇತಿಹಾಸ ಬರೆಯುತ್ತಿರುವ ಈ ಸಿನಿಮಾ ನಿರ್ಮಾಣ ಸಂಸ್ಥೆ, ಮತ್ತಷ್ಟು ಹೊಸಹೊಸ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಭಿನ್ನ ರೀತಿಯ ಚಿತ್ರಗಳನ್ನು ತೆರೆಗೆ ತರೋಕೆ ವಿಜಯ್ ಕಿರಗಂದೂರು ಅವರು ಪ್ರಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನ ಎಷ್ಟು ಭಿನ್ನವಾದುದು ಎಂಬುದಕ್ಕೆ ‘ಕಾಂತಾರ’ (Kanatara Movie)ಹಾಗೂ ‘ರಾಘವೇಂದ್ರ ಸ್ಟೋರ್ಸ್​’ ಸಿನಿಮಾದ ಟೀಸರ್​ಗಳೇ ಸಾಕ್ಷಿ. ‘ಕೆಜಿಎಫ್ 2’ ರಿಲೀಸ್​ಗೂ ಮುನ್ನ ಈ ಟೀಸರ್ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಎರಡೂ ಟೀಸರ್​ಗಳು ‘ಕೆಜಿಎಫ್​ 2’ ಸಿನಿಮಾ ಜತೆ ಅಟ್ಯಾಚ್​ ಆಗಿ ಪ್ರದರ್ಶನ ಕಾಣಲಿವೆ.

‘ಕಾಂತಾರ’

‘ಕಾಂತಾರ’ ಇದೊಂದು ಹಳ್ಳಿಯಲ್ಲಿ ನಡೆಯುವ, ಹಳ್ಳಿಯ ಜನರ ನಂಬಿಕೆಯ ಕಥೆ. ಹಳ್ಳಿಯ ಆಚರಣೆಗಳನ್ನು ಮಾಡುತ್ತಾ, ಕಾಡನ್ನೇ ನಂಬಿ ಜೀವನ ನಡೆಸುವ ಒಂದು ತಂಡ. ಆ ಊರಿಗೆ ಹೊಸ ಫಾರೆಸ್ಟ್​ ಅಧಿಕಾರಿಯ ಆಗಮನವಾಗುತ್ತದೆ. ಏನೇ ನಡೆಯಬೇಕಿದ್ದರೂ ತನ್ನ ಅನುಮತಿ ಪಡೆಯಬೇಕು ಎನ್ನುವ ಆಜ್ಞೆಯನ್ನು ಆತ ಹೊರಡಿಸುತ್ತಾನೆ. ಅಲ್ಲಿಂದ ತಿಕ್ಕಾಟ ಶುರು. ಈ ಟೀಸರ್​ನಲ್ಲಿ ಹಲವು ವಿಚಾರಗಳನ್ನು ತೋರಿಸಲಾಗಿದೆ. ಕಂಬಳ, ಕಾಡಿನ ಜನರ ನಂಬಿಕೆ, ಅಧಿಕಾರಿಯ ದರ್ಪವನ್ನು ತೋರಿಸಲಾಗಿದೆ. ರಿಷಬ್ ಶೆಟ್ಟಿ ಅವರು ಹೀರೋ ಆಗಿ ಮಿಂಚಿದ್ದಾರೆ. ಫಾರೆಸ್ಟ್​ ಅಧಿಕಾರಿಯಾಗಿ ಕಿಶೋರ್ ಗಮನ ಸೆಳೆಯುತ್ತಾರೆ.

ರಿಷನ್ ಶೆಟ್ಟಿ ಅವರು ನಿರ್ದೇಶನದ ವಿಚಾರದಲ್ಲಿ ಸಾಕಷ್ಟು ಪಳಗಿದ್ದಾರೆ. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಭಿನ್ನ ಕಥೆ ಹೇಳುತ್ತಾರೆ. ಈ ಬಾರಿ ‘ಕಾಂತಾರ’ ಮೂಲಕ ಬರುತ್ತಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡುತ್ತಿದೆ. ಇದೇ ವರ್ಷ ಚಿತ್ರ ತೆರೆಗೆ ಬರುತ್ತಿದೆ.

‘ರಾಘವೇಂದ್ರ ಸ್ಟೋರ್ಸ್​’

‘ರಾಘವೇಂದ್ರ ಸ್ಟೋರ್ಸ್​ ’ ಸಿನಿಮಾ ಮೂಲಕ ನಟ ಜಗ್ಗೇಶ್ ಹಾಗೂ ನಿರ್ದೇಶಕ ಸಂತೋಷ್ ಆನಂದ್​ರಾಮ್​ ಮೊದಲ ಬಾರಿಗೆ ಒಂದಾಗಿದ್ದಾರೆ. ಇದು ಔಟ್​ ಆ್ಯಂಡ್ ಔಟ್ ಕಾಮಿಡಿ ಸಿನಿಮಾ ಅನ್ನೋದಕ್ಕೆ ಟೀಸರ್ ಸಾಕ್ಷ್ಯ ನೀಡಿದೆ. ಟೀಸರ್​ನಲ್ಲಿ ಹಲವು ಪಂಚಿಂಗ್​ ಹಾಗೂ ಡಬ್ಬಲ್ ಮೀನಿಂಗ್​ ಡೈಲಾಗ್​ಗಳು ಇವೆ. 40 ವರ್ಷವಾದರೂ ಮದುವೆ ಆಗದೆ ಇರುವ ಬಾಣಸಿಗನ ಪಾತ್ರದಲ್ಲಿ ಜಗ್ಗೇಶ್​ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: KGF Chapter 2 Leak: ಯಶ್ ನಟನೆಯ ಚಿತ್ರಕ್ಕೆ ಪೈರಸಿ ಸಮಸ್ಯೆ; ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ‘ಕೆಜಿಎಫ್ 2’ ಲೀಕ್

KGF Chapter 2 Review: ಕೆಜಿಎಫ್​ ಚಾಪ್ಟರ್​ 2 ವಿಮರ್ಶೆ; ಪ್ರಶಾಂತ್ ನೀಲ್ ಕೈಚಳಕ, ಯಶ್ ಫ್ಯಾನ್ಸ್​ಗೆ ಧಮಾಕ

Published On - 1:49 pm, Thu, 14 April 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್