KGF Chapter 2 Leak: ಯಶ್ ನಟನೆಯ ಚಿತ್ರಕ್ಕೆ ಪೈರಸಿ ಸಮಸ್ಯೆ; ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ‘ಕೆಜಿಎಫ್ 2’ ಲೀಕ್

KGF Chapter 2 | Yash | Prashanth Neel: ‘ಕೆಜಿಎಫ್ ಚಾಪ್ಟರ್ 2’ ವಿಶ್ವಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ. ಆದರೆ ತೆರೆಕಂಡ ಕೆಲವೇ ಗಂಟೆಗಳ ಒಳಗೆ ಚಿತ್ರವು ಲೀಕ್ ಆಗಿದೆ. ಹಲವು ವೆಬ್​ಸೈಟ್ ಹಾಗೂ ಟೊರೆಂಟ್ಸ್​ಗಳಲ್ಲಿ ಚಿತ್ರದ ಡೌನ್​ಲೋಡ್​ ಲಿಂಕ್​ಗಳು ಹರಿದಾಡಿವೆ. ಇದಕ್ಕೆ ಲಗಾಮು ಹಾಕಲು ಚಿತ್ರತಂಡ ಕಂಟ್ರೋಲ್ ರೂಂ ಸ್ಥಾಪಿಸಿದೆ.

KGF Chapter 2 Leak: ಯಶ್ ನಟನೆಯ ಚಿತ್ರಕ್ಕೆ ಪೈರಸಿ ಸಮಸ್ಯೆ; ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ‘ಕೆಜಿಎಫ್ 2’ ಲೀಕ್
KGF Chapter 2
Follow us
TV9 Web
| Updated By: shivaprasad.hs

Updated on: Apr 14, 2022 | 1:23 PM

ದೀರ್ಘಕಾಲದಿಂದ ಕನ್ನಡ ಚಿತ್ರ ಪ್ರೇಮಿಗಳೂ ಸೇರಿದಂತೆ ವಿಶ್ವಾದ್ಯಂತ ಜನರು ಕಾದಿದ್ದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಇಂದು (ಗುರುವಾರ) ರಿಲೀಸ್ ಆಗಿದೆ. ವಿಶ್ವಾದ್ಯಂತ ಸುಮಾರು 10,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಚಿತ್ರಕ್ಕೆ ಎಲ್ಲೆಡೆಯಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಪ್ರಿ-ಬುಕ್ಕಿಂಗ್​ನಿಂದ ದಾಖಲೆ ಬರೆದಿರುವ ಕೆಜಿಎಫ್ 2 ಮುಂದೆಯೂ ಭರ್ಜರಿ ಕಲೆಕ್ಷನ್ ಮಾಡುವ ಎಲ್ಲಾ ಸೂಚನೆಗಳಿವೆ. ಆದರೆ ಇತ್ತೀಚೆಗೆ ಎಲ್ಲಾ ಚಿತ್ರಗಳು ಎದುರಿಸುತ್ತಿರುವ ಗಂಭೀರವಾದ ಪೈರಸಿ ಕಂಟಕ ‘ಕೆಜಿಎಫ್ 2’ಗೂ ಎದುರಾಗಿದೆ. ಹಲವು ವೆಬ್​ಸೈಟ್​ಗಳಲ್ಲಿ ಹಾಗೂ ಟೊರೆಂಟ್ ಸೈಟ್​ಗಳಲ್ಲಿ ಚಿತ್ರದ ಲಿಂಕ್​ಗಳು ಹರಿದಾಡುತ್ತಿದ್ದು, ಹೆಚ್​ಡಿ ಗುಣಮಟ್ಟದಲ್ಲಿ ಚಿತ್ರ ಲಭ್ಯವಿದೆ ಎಂಬ ಸಂದೇಶಗಳು ಶೇರ್ ಆಗುತ್ತಿವೆ. ಈ ಸರ್ಚಿಂಗ್ ಕುರಿತ ಹಲವು ಕೀವೆರ್ಡ್​ಗಳು ಕೂಡ ಟ್ರೆಂಡ್ ಆಗಿವೆ. ಈ ಬಗ್ಗೆ ಲೇಟೆಸ್ಟ್ಲಿ ವರದಿ ಮಾಡಿದೆ.

ಪೈರಸಿ ತಡೆಗೆ ಶ್ರಮಿಸುತ್ತಿರುವ ಚಿತ್ರತಂಡ:

ಚಿತ್ರದ ರಿಲೀಸ್​ಗೂ ಮುನ್ನ ನಿರ್ದೇಶಕ ಪ್ರಶಾಂತ್ ನೀಲ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಪೈರಸಿಯಿಂದ ಹಲವು ವರ್ಷಗಳ ಶ್ರಮ ಒಂದೇ ಕ್ಷಣಕ್ಕೆ ಮಣ್ಣಾಗುತ್ತದೆ. ಈ ಕಾರಣಕ್ಕೆ ಪೈರಸಿ ಮಾಡದಂತೆ ಮತ್ತು ಪೈರಸಿಗೆ ಬೆಂಬಲ ನೀಡದಂತೆ ಮನವಿ ಮಾಡಿಕೊಂಡಿದ್ದರು ಕೆಜಿಎಫ್ 2 ನಿರ್ದೇಶಕ.

‘ಪೈರಸಿ ವಿರುದ್ಧದ ಫೈಟ್ ನಿಮ್ಮಿಂದಲೇ ಆರಂಭವಾಗಲಿದೆ. ಸಿನಿಮಾದ ವಿಡಿಯೋ ಹಾಗೂ ಫೋಟೋವನ್ನು ತೆಗೆಯಬೇಡಿ ಮತ್ತು ಆನ್​ಲೈನ್​ನಲ್ಲಿ ಅದನ್ನು ಪೋಸ್ಟ್ ಮಾಡಬೇಡಿ’ ಎಂದು ಬರೆದುಕೊಂಡಿದ್ದಾರೆ ಪ್ರಶಾಂತ್ ನೀಲ್. ಇದರ ಜತೆಗೆ ಹಾಕಿರುವ ಫೋಟೋದಲ್ಲಿ ತಮ್ಮ ಕಷ್ಟದ ಪಯಣದ ಬಗ್ಗೆ ಬರೆದುಕೊಂಡಿದ್ದಾರೆ ಅವರು. ‘ಕೆಜಿಎಫ್​ ಅನ್ನು ನಿಮ್ಮ ಮುಂದಿಡಲು ಆರು ವರ್ಷ ಬೆವರು, ರಕ್ತ ಹಾಗೂ ಕಣ್ಣೀರು ಸುರಿಸಿದ್ದೇವೆ. ಕೆಜಿಎಫ್​ 2 ವೀಕ್ಷಿಸುವಾಗ ವಿಡಿಯೋ ಮಾಡಬೇಡಿ. ಈ ಚಿತ್ರವನ್ನು ಚಿತ್ರಮಂದಿರದಲ್ಲೇ ವೀಕ್ಷಿಸಿ’ ಎಂದು ಕೋರಲಾಗಿದೆ.

ಅದಾಗ್ಯೂ ಪೈರಸಿ ಗಮನಕ್ಕೆ ಬಂದಲ್ಲಿ ಏನು ಮಾಡಬೇಕು ಎನ್ನುವುದನ್ನು ಚಿತ್ರತಂಡ ತಿಳಿಸಿತ್ತು. ಪೈರಸಿ ತಡೆಯುವ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದ್ದು, ಚಿತ್ರ ಲೀಕ್ ಆಗಿದ್ದರ ಮಾಹಿತಿ ಲಭ್ಯವಾಗಿದ್ದಲ್ಲಿ ತಿಳಿಸುವಂತೆ ಕೋರಲಾಗಿದೆ.

ಚಿತ್ರತಂಡ ಹಂಚಿಕೊಂಡಿದ್ದ ಟ್ವೀಟ್:

ಇದನ್ನೂ ಓದಿ: KGF 3: ‘ಕೆಜಿಎಫ್ ಚಾಪ್ಟರ್ 2’ ಕೊನೆಯಲ್ಲಿ ಬಿಗ್ ಸರ್ಪ್ರೈಸ್ ನೋಡಿ ಥ್ರಿಲ್ ಆದ ಅಭಿಮಾನಿಗಳು; ಟ್ರೆಂಡ್ ಆಯ್ತು ‘ಕೆಜಿಎಫ್ 3’

ಕೆಜಿಎಫ್ ತಾಲೂಕಿನಲ್ಲಿ ರಿಲೀಸ್ ಆಗದ ‘ಕೆಜಿಎಫ್ ಚಾಪ್ಟರ್ 2’- ಕಾರಣವೇನು? ರಾಜ್ಯದ ವಿವಿಧೆಡೆ ಬಿಡುಗಡೆ ಸಂಭ್ರಮ ಹೇಗಿದೆ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ