75 ರೂಪಾಯಿ ಟಿಕೆಟ್ ಆಫರ್ ಮುಂದೂಡಿದ ಮಲ್ಟಿಪ್ಲೆಕ್ಸ್; ಹೊಸ ಡೇಟ್ ಬಗ್ಗೆ ಇಲ್ಲಿದೆ ಮಾಹಿತಿ
ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಸೆಪ್ಟೆಂಬರ್ 16ರಂದು ಟಿಕೆಟ್ ದರವನ್ನು 75 ರೂ. ನಿಗದಿ ಮಾಡಲಾಗಿತ್ತು. ಆದರೆ, ಈಗ ಇದನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ.
ಮಲ್ಟಿಪ್ಲೆಕ್ಸ್ನಲ್ಲಿ (Multiplex) ಸಿನಿಮಾ ನೋಡಬೇಕು ಎಂದು ಅನೇಕರು ಆಸೆ ಪಡುತ್ತಾರೆ. ಇದಕ್ಕೆ ಕಾರಣ ಅಲ್ಲಿ ಸಿಗುವ ಎಕ್ಸ್ಪೀರಿಯನ್ಸ್. ಸಾಮಾನ್ಯ ಚಿತ್ರಮಂದಿರಕ್ಕಿಂತ ಒಳ್ಳೆಯ ಅನುಭವವನ್ನು ಮಲ್ಟಿಪ್ಲೆಕ್ಸ್ನಲ್ಲಿ ಪಡೆಯಬಹುದು. ಆದರೆ, ಟಿಕೆಟ್ ಬೆಲೆಯ ಕಾರಣದಿಂದ ಅನೇಕರಿಗೆ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡೋಕೆ ಸಾಧ್ಯವಾಗುವುದಿಲ್ಲ. ಆದರೆ, ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಸೆಪ್ಟೆಂಬರ್ 16ರಂದು ಕೇವಲ 75 ರೂಪಾಯಿಗೆ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ಆಫರ್ ಈಗ ಮುಂದೂಡಲ್ಪಟ್ಟಿದೆ ಎನ್ನಲಾಗುತ್ತಿದೆ.
ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡಬೇಕು ಎಂದರೆ ಕೊಂಚ ದುಬಾರಿ ಹಣ ಪಾವತಿಸಬೇಕು. 150 ರೂ, 200 ರೂ. ಹೀಗೆ ಸಿನಿಮಾ ಹಾಗೂ ಶೋನ ಸಮಯಕ್ಕೆ ಅನುಗುಣವಾಗಿ ದರದಲ್ಲಿ ಬದಲಾವಣೆ ಇರುತ್ತದೆ. ಆದರೆ, ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಸೆಪ್ಟೆಂಬರ್ 16ರಂದು ಟಿಕೆಟ್ ದರವನ್ನು 75 ರೂ. ನಿಗದಿ ಮಾಡಲಾಗಿತ್ತು. ಆದರೆ, ಈಗ ಇದನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.
75 ರೂಪಾಯಿ ಟಿಕೆಟ್ ದರದ ವಿಚಾರವನ್ನು ಭಾರತದ ಮಲ್ಟಿಪ್ಲೆಕ್ಸ್ ಒಕ್ಕೂಟ (ಎಂಎಐ) ಘೋಷಿಸಿತ್ತು. ಆದರೆ, ‘ಬ್ರಹ್ಮಾಸ್ತ್ರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಇಂಥ ಸಂದರ್ಭದಲ್ಲಿ 75 ರೂ. ಟಿಕೆಟ್ ಇಟ್ಟರೆ ದೊಡ್ಡ ನಷ್ಟ ಉಂಟಾಗಲಿದೆ. ಬಾಲಿವುಡ್ನಲ್ಲಿ ಇತ್ತೀಚೆಗೆ ಯಾವುದೇ ಸಿನಿಮಾಗಳು ಈ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಈ ಕಾರಣದಿಂದಲೂ ‘ಬ್ರಹ್ಮಾಸ್ತ್ರ’ ಚಿತ್ರದ ಕಲೆಕ್ಷನ್ ಏರಿಕೆ ಆಗುವುದು ಮುಖ್ಯವಾಗಿದೆ. ಈ ಎಲ್ಲಾ ಕಾರಣದಿಂದ ದಿನಾಂಕ ಪೋಸ್ಟ್ಪೋನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಆಗಲಿದೆ.
ಇದನ್ನೂ ಓದಿ: ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ಟಿಕೆಟ್ ಬೆಲೆ 75 ರೂಪಾಯಿ ಮಾತ್ರ; ವಿಶೇಷ ದಿನಕ್ಕೆ ಇಲ್ಲಿದೆ ಮಸ್ತ್ ಆಫರ್
ರಾಷ್ಟ್ರೀಯ ಸಿನಿಮಾ ದಿನದಂದು ಪಿವಿಆರ್, ಐನಾಕ್ಸ್ ಸೇರಿ ಎಲ್ಲಾ ಮಲ್ಟಿಪ್ಲೆಕ್ಸ್ಗಳಲ್ಲಿ ಎಲ್ಲಾ ಸಿನಿಮಾ ಶೋಗಳ ದರ 75 ರೂಪಾಯಿ ನಿಗದಿ ಮಾಡಿರಲಾಗುತ್ತದೆ. ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿದರೆ ಬುಕಿಂಗ್ ಚಾರ್ಜ್ಅನ್ನು ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಅಮೆರಿಕದಲ್ಲಿ ಸೆಪ್ಟೆಂಬರ್ 3ರಂದು ರಾಷ್ಟ್ರೀಯ ಸಿನಿಮಾ ದಿನವನ್ನು ಆಚರಿಸಲಾಗಿದೆ. ಇಂಗ್ಲೆಂಡ್ ಹಾಗೂ ಮೊದಲಾದ ರಾಷ್ಟ್ರಗಳು ಕೂಡ ಈ ವಿಶೇಷ ದಿನವನ್ನು ಆಚರಿಸುತ್ತಿವೆ.