ನಟಿಯ ಸಾವಿನ ಕೇಸ್: ಪ್ರಕರಣದ ಮರುವಿಚಾರಣೆಗೆ ಕೋರ್ಟ್ ನಕಾರ  

ಜಿಯಾ ಹಾಗೂ ಸೂರಜ್ ಪರಸ್ಪರ ಪ್ರೀತಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಜಿಯಾ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಬಾಯ್​ಫ್ರೆಂಡ್ ಬಗ್ಗೆ ರಬಿಯಾಗೆ ಅನುಮಾನ ಮೂಡಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಆತ್ಮಹತ್ಯೆ ಎಂದು ವರದಿ ನೀಡಿತ್ತು.

ನಟಿಯ ಸಾವಿನ ಕೇಸ್: ಪ್ರಕರಣದ ಮರುವಿಚಾರಣೆಗೆ ಕೋರ್ಟ್ ನಕಾರ  
ಜಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 13, 2022 | 4:07 PM

ಜಿಯಾ ಖಾನ್ (Jiah Khan) ಅವರು ಆತ್ಮಹತ್ಯೆ ಮಾಡಿಕೊಂಡು 10 ವರ್ಷ ಕಳೆಯುತ್ತಾ ಬಂದಿದೆ. 2013ರ ಜೂನ್ 3ರಂದು ಮುಂಬೈನ ನಿವಾಸದಲ್ಲಿ ಜಿಯಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿತ್ತು. ಅವರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಜಿಯಾ ತಾಯಿ ರಬಿಯಾ ಖಾನ್ (Rabia Khan) ಅವರು ಆರೋಪ ಮಾಡುತ್ತಲೇ ಬಂದಿದ್ದರು. ಜಿಯಾ ಬಾಯ್​ಫ್ರೆಂಡ್ ಸೂರಜ್ ಪಾಂಚೋಲಿ ಮೇಲೆ ಅವರು ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣವನ್ನು ರೀ-ಓಪನ್ ಮಾಡುವಂತೆ ರಬಿಯಾ ಹೈಕೋರ್ಟ್​ನಲ್ಲಿ ಕೋರಿದ್ದರು. ಆದರೆ, ಇದನ್ನು ಕೋರ್ಟ್ ನಿರಾಕರಿಸಿದೆ.

ಜಿಯಾ ಹಾಗೂ ಸೂರಜ್ ಪರಸ್ಪರ ಪ್ರೀತಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಜಿಯಾ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಬಾಯ್​ಫ್ರೆಂಡ್ ಬಗ್ಗೆ ರಬಿಯಾಗೆ ಅನುಮಾನ ಮೂಡಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ ಆತ್ಮಹತ್ಯೆ ಎಂದು ವರದಿ ನೀಡಿತ್ತು. ‘ತನಿಖಾ ವರದಿಯಲ್ಲಿ ತಪ್ಪಿದೆ. ಈ ಪ್ರಕರಣವನ್ನು ಮರು ವಿಚಾರಣೆ ನಡೆಸಬೇಕು. ಮಗಳ ಸಾವಿಗೆ ನ್ಯಾಯ ಸಿಗಬೇಕು’ ಎಂದು ರಬಿಯಾ ಬಾಂಬೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಶೇಷ ಎಂದರೆ ಅಮೆರಿಕದ ಎಫ್​ಬಿಐ ಸಹಾಯದೊಂದಿಗೆ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಬೇಕು ಎಂಬುದಾಗಿಯೂ ಅವರು ಅರ್ಜಿಯಲ್ಲಿ ಕೋರಿದ್ದರು.

‘ಮುಂಬೈ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಪ್ಪುಗಳಿದ್ದವು. ಈ ಪ್ರಕರಣ ನಂತರ ಸಿಬಿಐಗೆ ಹಸ್ತಾಂತರ ಆಯಿತು. ಸಿಬಿಐ ಸಮಿತಿ ಕೂಡ ತನ್ನ ವರದಿಯಲ್ಲಿ ಅದೇ ಮಾದರಿಯ ತಪ್ಪನ್ನು ಮಾಡಿದೆ. ಈ ಕಾರಣದಿಂದ ಪ್ರಕರಣದಲ್ಲಿ ಮರುತನಿಖೆ ಆಗಬೇಕು’ ಎಂದು ರಬಿಯಾ ಪರ ವಕೀಲರು ಬಾಂಬೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.

‘ನಮಗೆ ಸಿಬಿಐ ತನಿಖೆ ಮೇಲೆ ಸಂಪೂರ್ಣ ನಂಬಿಕೆ ಇದೆ. ಈ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡುವ ಮೂಲಕ ರಬಿಯಾ ಅವರು ಪ್ರಕರಣವನ್ನು ಮತ್ತಷ್ಟು ದುರ್ಬಲ ಮಾಡುತ್ತಿದ್ದಾರೆ’ ಎಂದು ನ್ಯಾಯಮೂರ್ತಿಗಳಾದ ಎಎಸ್​ ಗಡ್ಕರಿ ಹಾಗೂ ಎಂಎನ್ ಜಾಧವ್ ಹೇಳಿದ್ದಾರೆ.

ಇದನ್ನೂ ಓದಿ: ಆಮಿರ್ ಖಾನ್ ಜತೆ ತೆರೆ ಹಂಚಿಕೊಂಡ ಈ ನಟಿ ಈಗ ಹೇಗಾಗಿದ್ದಾರೆ ನೋಡಿ

ಜಿಯಾ ಖಾನ್ ಅವರು ಬಾಲಿವುಡ್​ಗೆ ಎಂಟ್ರಿ ನೀಡಿದ್ದು 2007ರಲ್ಲಿ. ಅಮಿತಾಭ್ ಬಚ್ಚನ್ ನಟನೆಯ ‘ನಿಶಬ್ದ’ ಅವರ ಮೊದಲ ಸಿನಿಮಾ. ನಂತರ ಆಮಿರ್ ಖಾನ್ ನಟನೆಯ ‘ಗಜನಿ’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2010ರಲ್ಲಿ ತೆರೆಗೆ ಬಂದ ‘ಹೌಸ್​ಫುಲ್​’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಇದು ಅವರ ಕೊನೆಯ ಸಿನಿಮಾ.

Published On - 4:06 pm, Tue, 13 September 22

ನೂರು ಕೋಟಿ ಆಫರ್: ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೇಳಿದ್ದೇನು ನೋಡಿ!
ನೂರು ಕೋಟಿ ಆಫರ್: ಮತ್ತೊಬ್ಬ ಕಾಂಗ್ರೆಸ್ ಶಾಸಕ ಹೇಳಿದ್ದೇನು ನೋಡಿ!
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾಕೆ ಜನಪರ ಯೋಜನೆಗಳಿಲ್ಲ? ಸಿದ್ದರಾಮಯ್ಯ
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾಕೆ ಜನಪರ ಯೋಜನೆಗಳಿಲ್ಲ? ಸಿದ್ದರಾಮಯ್ಯ
ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿಗೆ ಥಳಿಸಿದ ಯುವಕರು
ಪೆಟ್ರೋಲ್ ಬಂಕ್​ಗೆ ನುಗ್ಗಿ ಸಿಬ್ಬಂದಿಗೆ ಥಳಿಸಿದ ಯುವಕರು
ಯೋಗೇಶ್ವರ್ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ: ಪರಮೇಶ್ವರ್
ಯೋಗೇಶ್ವರ್ ಮಾತಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ: ಪರಮೇಶ್ವರ್
ಬಿಜೆಪಿಗೆ ಹಣದ ಕೊರತೆಯಿಲ್ಲ, ಹಣ ಚೆಲ್ಲಿ ಶಾಸಕರನ್ನು ಖರೀದಿಸುತ್ತಾರೆ: ಗಾಣಿಗ
ಬಿಜೆಪಿಗೆ ಹಣದ ಕೊರತೆಯಿಲ್ಲ, ಹಣ ಚೆಲ್ಲಿ ಶಾಸಕರನ್ನು ಖರೀದಿಸುತ್ತಾರೆ: ಗಾಣಿಗ
ಬ್ರೆಜಿಲ್​ನಲ್ಲಿ ಮಂತ್ರ-ಘೋಷಗಳೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ
ಬ್ರೆಜಿಲ್​ನಲ್ಲಿ ಮಂತ್ರ-ಘೋಷಗಳೊಂದಿಗೆ ಪ್ರಧಾನಿ ಮೋದಿಗೆ ಸ್ವಾಗತ
ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಗೆ ಬಿಗ್ ಬಾಸ್ ಮನೆ ಶೇಕ್; ಪ್ರಬಲರೇ ಟಾರ್ಗೆಟ್
ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಗೆ ಬಿಗ್ ಬಾಸ್ ಮನೆ ಶೇಕ್; ಪ್ರಬಲರೇ ಟಾರ್ಗೆಟ್
ಬಿಜೆಪಿಯಿಂದ 50 ಅಲ್ಲ, 100 ಕೋಟಿ ರೂ. ಆಫರ್: ರವಿಕುಮಾರ್​ ಗಣಿಗ ಮತ್ತೆ ಆರೋಪ
ಬಿಜೆಪಿಯಿಂದ 50 ಅಲ್ಲ, 100 ಕೋಟಿ ರೂ. ಆಫರ್: ರವಿಕುಮಾರ್​ ಗಣಿಗ ಮತ್ತೆ ಆರೋಪ
Video: ಆಂಬ್ಯುಲೆನ್ಸ್​ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ
Video: ಆಂಬ್ಯುಲೆನ್ಸ್​ಗೆ ದಾರಿ ಬಿಡದ ಕಾರು ಚಾಲಕನಿಗೆ 2.5 ಲಕ್ಷ ರೂ. ದಂಡ
Daily Devotional: ಪುಣ್ಯ ಕ್ಷೇತ್ರಗಳಿಗೆ ಹೋದಾಗ ಆಹಾರ ಪದ್ಧತಿ ಹೇಗಿರಬೇಕು
Daily Devotional: ಪುಣ್ಯ ಕ್ಷೇತ್ರಗಳಿಗೆ ಹೋದಾಗ ಆಹಾರ ಪದ್ಧತಿ ಹೇಗಿರಬೇಕು