AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brahmastra Box Office Collection: ಸೋಮವಾರದ ಪರೀಕ್ಷೆಯಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರ ಪಾಸ್​ ಆಯ್ತಾ?

Alia Bhatt | Ranbir Kapoor: ‘ಬ್ರಹ್ಮಾಸ್ತ್ರ’ ಟ್ರೇಲರ್​ನಲ್ಲಿ ಕಳಪೆ ಗ್ರಾಫಿಕ್ಸ್​ ಇದೆ ಎಂಬ ಕಾರಣಕ್ಕೆ ಅನೇಕರು ಟ್ರೋಲ್​ ಮಾಡಿದ್ದರು. ಅದರಿಂದ ಚಿತ್ರದ ಕಲೆಕ್ಷನ್​ಗೆ ಯಾವುದೇ ಧಕ್ಕೆ ಆಗಿಲ್ಲ.

Brahmastra Box Office Collection: ಸೋಮವಾರದ ಪರೀಕ್ಷೆಯಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರ ಪಾಸ್​ ಆಯ್ತಾ?
ರಣಬೀರ್ ಕಪೂರ್, ಆಲಿಯಾ ಭಟ್
TV9 Web
| Updated By: ಮದನ್​ ಕುಮಾರ್​|

Updated on:Sep 13, 2022 | 2:46 PM

Share

ಬಾಕ್ಸ್​ ಆಫೀಸ್​ ವಿಚಾರದಲ್ಲಿ ಸೋಮವಾರ ತುಂಬ ಮುಖ್ಯವಾಗುತ್ತದೆ. ಶುಕ್ರವಾರ ರಿಲೀಸ್​ ಆದ ಸಿನಿಮಾ ಸೋಮವಾರದವರೆಗೆ ಫಾರ್ಮ್​ ಕಾಯ್ದುಕೊಂಡರೆ ನಿರ್ಮಾಪಕರಿಗೆ ಖುಷಿ ಆಗುತ್ತದೆ. ಅದೇ ಕಾರಣದಿಂದ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾ ಸೋಮವಾರ (ಸೆ.12) ಎಷ್ಟು ಕಲೆಕ್ಷನ್​ ಮಾಡಬಹುದು ಎಂದು ತಿಳಿಯಲು ಎಲ್ಲರೂ ಕಾದಿದ್ದರು. ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ ಸೆ.12ರಂದು ಈ ಚಿತ್ರಕ್ಕೆ ಶೇಕಡ 50ರಷ್ಟು ಹಿನ್ನೆಡೆ ಆಗಿದೆ. ಹಾಗಂತ ಚಿತ್ರತಂಡ ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಈಗಿನ ಬಾಲಿವುಡ್​ (Bollywood) ಟ್ರೆಂಡ್​ಗೆ ಹೋಲಿಸಿದರೆ ಸೋಮವಾರ ‘ಬ್ರಹ್ಮಾಸ್ತ್ರ’ ಮಾಡಿರುವ ಕಲೆಕ್ಷನ್​ (Box Office Collection) ಆಶಾದಾಯಕ ಆಗಿದೆ. ಸೋಮವಾರ ಹಿಂದಿ ವರ್ಷನ್​ನಿಂದ 16 ಕೋಟಿ ರೂಪಾಯಿ ಗಳಿಸಿ ಈ ಚಿತ್ರ ಬೀಗುತ್ತಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್​ 250 ಕೋಟಿ ರೂಪಾಯಿಗೆ ಸನಿಹದಲ್ಲಿದೆ.

‘ಬ್ರಹ್ಮಾಸ್ತ್ರ’ ಸಿನಿಮಾಗೆ ಅಯಾನ್​ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಸ್ನೇಹಿತರ ಜೊತೆಗೂಡಿ ಕರಣ್​ ಜೋಹರ್​ ಅವರು ನಿರ್ಮಾಣ ಮಾಡಿದ್ದಾರೆ. ಟ್ರೇಲರ್​ನಲ್ಲಿ ಕಳಪೆ ಗ್ರಾಫಿಕ್ಸ್​ ಇದೆ ಎಂಬ ಕಾರಣಕ್ಕೆ ಅನೇಕರು ಟ್ರೋಲ್​ ಮಾಡಿದ್ದರು. ಅದರಿಂದ ಚಿತ್ರಕ್ಕೆ ಯಾವುದೇ ಧಕ್ಕೆ ಆಗಿಲ್ಲ. ವಿಶೇಷ ಕಥಾಹಂದರ ಇರುವ ಈ ಸಿನಿಮಾವನ್ನು ಜನರು ಇಷ್ಟಪಟ್ಟು ನೋಡುತ್ತಿದ್ದಾರೆ. ಬಹುದಿನಗಳ ಬಳಿಕ ಹಿಂದಿ ಚಿತ್ರರಂಗಕ್ಕೆ ಒಂದು ದೊಡ್ಡ ಗೆಲುವು ಸಿಕ್ಕಂತಾಗಿದೆ.

ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಆಲಿಯಾ ಭಟ್​ ನಟಿಸಿದ್ದಾರೆ. ಅಮಿತಾಭ್​ ಬಚ್ಚನ್​, ನಾಗಾರ್ಜುನ ಅವರಂಥ ಘಟಾನುಘಟಿ ಕಲಾವಿದರು ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅವರು ಅತಿಥಿ ಪಾತ್ರ ಮಾಡಿರುವುದು ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ಇದನ್ನೂ ಓದಿ
Image
ಬೈಕಾಟ್ ಟ್ರೆಂಡ್​ಗೆ ಸೆಡ್ಡು ಹೊಡೆದ ‘ಬ್ರಹ್ಮಾಸ್ತ್ರ’; ಬಾಕ್ಸ್ ಆಫೀಸ್ ಉಡೀಸ್​ ಮಾಡಿದ ರಣಬೀರ್​-ಆಲಿಯಾ ಚಿತ್ರ
Image
‘ಇದು ಎಕ್ಸ್​​ಟ್ರಾ ಬಜೆಟ್​​ನ ನಾಗಿಣಿ ಧಾರಾವಾಹಿ’; ‘ಬ್ರಹ್ಮಾಸ್ತ್ರ’ ಸಿನಿಮಾ ನೋಡಿದವರು ಹೀಗಂದ್ರು
Image
KRK ಬಂಧನಕ್ಕೆ ‘ಬ್ರಹ್ಮಾಸ್ತ್ರ’ ಟೀಮ್​ ಕಾರಣ ಎಂದು ಆರೋಪಿಸಿದ ನೆಟ್ಟಿಗರು; ಏನಿದು ಹುನ್ನಾರ?
Image
ಸೆ.9ಕ್ಕೆ ‘ಲಕ್ಕಿ ಮ್ಯಾನ್​’ ವರ್ಸಸ್​ ‘ಬ್ರಹ್ಮಾಸ್ತ್ರ’: ಬುಕ್​ ಮೈ ಶೋನಲ್ಲಿ ಹೇಗಿದೆ ಬಲಾಬಲ?

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆ ಆಗಿದೆ. ಹಿಂದಿಯ ಈ ಚಿತ್ರವನ್ನು ತೆಲುಗು, ಕನ್ನಡ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್​ ಮಾಡಿ ತೆರೆಕಾಣಿಸಲಾಗಿದೆ. ತೆಲುಗು ವರ್ಷನ್​ನಿಂದ ಉತ್ತಮ ಕಮಾಯಿ ಆಗುತ್ತಿದೆ ಎಂದು ವರದಿ ಆಗಿದೆ. ಪಕ್ಕಾ ಲೆಕ್ಕದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಈ ಚಿತ್ರವನ್ನು ದಕ್ಷಿಣ ಭಾರತದಲ್ಲಿ ರಾಜಮೌಳಿ ಅವರು ಪ್ರಸೆಂಟ್​ ಮಾಡಿದ್ದಾರೆ. ಅದರಿಂದಲೂ ಉತ್ತಮ ಪ್ರಚಾರ ಸಿಕ್ಕಿದೆ.

ಇದೇ ಮೊದಲ ಬಾರಿಗೆ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಜೋಡಿಯಾಗಿ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್​ ನೋಡಿ ಜನರು ಇಷ್ಟಪಟ್ಟಿದ್ದಾರೆ. ವಿಮರ್ಶೆಯಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸದ್ದು ಮಾಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:46 pm, Tue, 13 September 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು