AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕಾಟ್ ಟ್ರೆಂಡ್​ಗೆ ಸೆಡ್ಡು ಹೊಡೆದ ‘ಬ್ರಹ್ಮಾಸ್ತ್ರ’; ಬಾಕ್ಸ್ ಆಫೀಸ್ ಉಡೀಸ್​ ಮಾಡಿದ ರಣಬೀರ್​-ಆಲಿಯಾ ಚಿತ್ರ

ರಣಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಹಲವು ವಿಶೇಷತೆಗಳೊಂದಿಗೆ ತೆರೆಗೆ ಬಂತು. ರಣಬೀರ್ ಹಾಗೂ ಆಲಿಯಾ ಒಟ್ಟಾಗಿ ನಟಿಸಿದ ಮೊದಲ ಸಿನಿಮಾ ಇದು. ರಣಬೀರ್ ಹಾಗೂ ಆಲಿಯಾ ಕೆಮಿಸ್ಟ್ರಿ ಹೇಗಿದೆ ಎಂದು ತಿಳಿದುಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದರು.

ಬೈಕಾಟ್ ಟ್ರೆಂಡ್​ಗೆ ಸೆಡ್ಡು ಹೊಡೆದ ‘ಬ್ರಹ್ಮಾಸ್ತ್ರ’; ಬಾಕ್ಸ್ ಆಫೀಸ್ ಉಡೀಸ್​ ಮಾಡಿದ ರಣಬೀರ್​-ಆಲಿಯಾ ಚಿತ್ರ
ರಣಬೀರ್-ಆಲಿಯಾ
TV9 Web
| Edited By: |

Updated on:Sep 10, 2022 | 7:49 PM

Share

ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಬಾಲಿವುಡ್ ಬಾಕ್ಸ್​ ಆಫೀಸ್​​​ನಲ್ಲಿ ಕಮಾಲ್ ಮಾಡಿದೆ. ಈ ಸಿನಿಮಾ ವಿಶ್ವ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಚಿತ್ರದಿಂದ ಬಾಲಿವುಡ್​ಗೆ ಬೂಸ್ಟ್ ಸಿಕ್ಕಿದೆ. ಕೆಲವರು  ‘ಬ್ರಹ್ಮಾಸ್ತ್ರ’ ಬಗ್ಗೆ ಟೀಕೆ ಮಾಡಿದ ಹೊರತಾಗಿಯೂ ಚಿತ್ರ ಒಳ್ಳೆಯ ಗಳಿಕೆ ಮಾಡಿದೆ. ಮೊದಲ ದಿನ ಈ ಸಿನಿಮಾ ವಿಶ್ವಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 75 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಬಾಲಿವುಡ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಮೊದಲ ದಿನದ ಕಲೆಕ್ಷನ್​ನಲ್ಲಿ ಸಿನಿಮಾ ಗೆಲುವು ಕಂಡಿದೆ.

ರಣಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಹಲವು ವಿಶೇಷತೆಗಳೊಂದಿಗೆ ತೆರೆಗೆ ಬಂತು. ರಣಬೀರ್ ಹಾಗೂ ಆಲಿಯಾ ಒಟ್ಟಾಗಿ ನಟಿಸಿದ ಮೊದಲ ಸಿನಿಮಾ ಇದು. ರಣಬೀರ್ ಹಾಗೂ ಆಲಿಯಾ ಕೆಮಿಸ್ಟ್ರಿ ಹೇಗಿದೆ ಎಂದು ತಿಳಿದುಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದರು. ಈ ಚಿತ್ರ ಹಿಂದಿ ಮಾತ್ರವಲ್ಲದೆ ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗಿದ್ದು ವಿಶೇಷ. ರಾಜಮೌಳಿ ಅವರು ದಕ್ಷಿಣ ಭಾರತದಲ್ಲಿ ಸಿನಿಮಾ ಹಂಚಿಕೆ ಜವಾಬ್ದಾರಿ ಹೊತ್ತುಕೊಂಡಿದ್ದರು. ಈ ಕಾರಣದಿಂದಲೂ ಸಿನಿಮಾಗೆ ಮೈಲೇಜ್ ಸಿಕ್ಕಿದೆ.

ಇದನ್ನೂ ಓದಿ
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
Image
Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​
Image
ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?

ಅಡ್ವಾನ್ಸ್ ಬುಕಿಂಗ್​ನಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಕಮಾಲ್ ಮಾಡಿತ್ತು. ಮೊದಲ ದಿನ ಈ ಚಿತ್ರ ಅಡ್ವಾನ್ಸ್ ಬುಕಿಂಗ್​ನಿಂದ 11 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಒಂದು ವರ್ಗದ ಜನರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ ಕಾರಣ ಸಿನಿಮಾವನ್ನು ದೊಡ್ಡ ಸಂಖ್ಯೆಯಲ್ಲಿ ವೀಕ್ಷಿಸಲಾಗಿದೆ. ಹೀಗಾಗಿ, ಮೊದಲ ದಿನದ ಕಲೆಕ್ಷನ್ 75 ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ.

ಇಂದು (ಸೆಪ್ಟೆಂಬರ್ 10) ಹಾಗೂ ನಾಳೆ (ಸೆಪ್ಟೆಂಬರ್ 11) ವೀಕೆಂಡ್ ಆದ್ದರಿಂದ ಸಿನಿಮಾದ ಕಲೆಕ್ಷನ್ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ‘ಬ್ರಹ್ಮಾಸ್ತ್ರ’ ಸಿನಿಮಾವನ್ನು ಬೈಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಶುರುವಾಗಿತ್ತು. ಆದರೆ, ಇದನ್ನೂ ಮೀರಿ ಸಿನಿಮಾ ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್​ನಲ್ಲಿ ‘ಬ್ರಹ್ಮಾಸ್ತ್ರ’ ಕಮಾಲ್; ಆದರೆ, ‘ಕೆಜಿಎಫ್ 2’ ಸಮೀಪವೂ ಬರಲಿಲ್ಲ ರಣಬೀರ್ ಸಿನಿಮಾ ಕಲೆಕ್ಷನ್

‘ಬ್ರಹ್ಮಾಸ್ತ್ರ’ ಸಿನಿಮಾ ನೋಡಿದ ಮೊದಲ ದಿನ ಕೆಲವರು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ನೀಡಿದರು. ಸಿನಿಮಾದ ವಿಎಫ್​ಎಕ್ಸ್ ಬಗ್ಗೆ ಟೀಕೆ ಮಾಡಿದ್ದರು. ಆದರೆ, ಒಂದು ವರ್ಗದ ಜನರಿಗೆ ಸಿನಿಮಾ ಇಷ್ಟ ಆಗಿದೆ. ಈ ಕಾರಣದಿಂದ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

Published On - 9:04 am, Sat, 10 September 22

Follow Us
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ