ಅಡ್ವಾನ್ಸ್ ಬುಕಿಂಗ್​ನಲ್ಲಿ ‘ಬ್ರಹ್ಮಾಸ್ತ್ರ’ ಕಮಾಲ್; ಆದರೆ, ‘ಕೆಜಿಎಫ್ 2’ ಸಮೀಪವೂ ಬರಲಿಲ್ಲ ರಣಬೀರ್ ಸಿನಿಮಾ ಕಲೆಕ್ಷನ್

ಈ ಚಿತ್ರದ ಬಗ್ಗೆ ಒಂದು ವರ್ಗದ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು ಕೆಲವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಅಡ್ವಾನ್ಸ್ ಬುಕಿಂಗ್​ನಲ್ಲಿ ‘ಬ್ರಹ್ಮಾಸ್ತ್ರ’ ಕಮಾಲ್; ಆದರೆ, ‘ಕೆಜಿಎಫ್ 2’ ಸಮೀಪವೂ ಬರಲಿಲ್ಲ ರಣಬೀರ್ ಸಿನಿಮಾ ಕಲೆಕ್ಷನ್
ರಣಬೀರ್​-ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 08, 2022 | 3:53 PM

‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ರಿಲೀಸ್​ಗೆ ಕ್ಷಣಗಣನೆ ಆರಂಭ ಆಗಿದೆ. ಸೆಪ್ಟೆಂಬರ್ 9ರಂದು ವಿಶ್ವಾದ್ಯಂತ ರಿಲೀಸ್ ಆಗಲಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಈ ಸಿನಿಮಾದ ಟ್ರೇಲರ್​ನಲ್ಲಿ ಕಳಪೆ ಗ್ರಾಫಿಕ್ಸ್ ನೋಡಿ ಅನೇಕರು ಚಿತ್ರದ ಬಗ್ಗೆ ಟೀಕೆ ಮಾಡಿದ್ದರು. ಈ ಕಾರಣಕ್ಕೆ ಉಳಿದ ಬಾಲಿವುಡ್ ಸಿನಿಮಾಗಳಂತೆ ಈ ಚಿತ್ರವೂ ಸೋಲಲಿದೆ ಎಂದು ಕೆಲವರು ವಾದ ಮುಂದಿಟ್ಟಿದ್ದಾರೆ. ಆದರೆ, ಅಡ್ವಾನ್ಸ್ ಬುಕಿಂಗ್​ನಲ್ಲಿ ಸಿನಿಮಾ ಒಳ್ಳೆಯ ಪರ್ಫಾರ್ಮೆನ್ಸ್ ತೋರಿಸುತ್ತಿದೆ. ಹೀಗಾಗಿ, ಸಿನಿಮಾ ಉತ್ತಮ ರೀತಿಯಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ಆಗಿದ್ದಾರೆ. ಅವರು ಮಗುವಿನ ನಿರೀಕ್ಷೆಯಲ್ಲೂ ಇದ್ದಾರೆ. ಈ ಸಂದರ್ಭದಲ್ಲೇ ಅವರು ಒಟ್ಟಾಗಿ ನಟಿಸಿರುವ ಮೊದಲ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಒಂದು ವರ್ಗದ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲು ಕೆಲವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಬುಧವರಾ (ಸೆಪ್ಟೆಂಬರ್ 7) ರಾತ್ರಿ ವೇಳೆಗೆ ‘ಬ್ರಹ್ಮಾಸ್ತ್ರ’ ಅಡ್ವಾನ್ಸ್ ಬುಕಿಂಗ್​ನಿಂದ 23 ಕೋಟಿ ರೂಪಾಯಿ ಹರಿದು ಬಂದಿದೆ. ಸೆಪ್ಟೆಂಬರ್ 9ರ ಶೋನ 11 ಕೋಟಿ ರೂಪಾಯಿ ಬೆಲೆಯ ಟಿಕೆಟ್​ಗಳು ಮಾರಾಟ ಆಗಿದೆ. ಶನಿವಾರ ಹಾಗೂ ಭಾನುವಾರ ಅಡ್ವಾನ್ಸ್ ಬುಕಿಂಗ್​ನಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ‘ಆರ್​ಆರ್​ಆರ್​’ ಹಿಂದಿ ವರ್ಷನ್​​ನ ಅಡ್ವಾನ್ಸ್​ ಬುಕಿಂಗ್​ನಿಂದ ಮೊದಲ ದಿನ 7 ಕೋಟಿ ರೂಪಾಯಿ ಕಮಾಯಿ ಆಗಿತ್ತು.

ಇದನ್ನೂ ಓದಿ
Image
Alia Bhatt: ‘ರಣವೀರ್​ ಸಿಂಗ್​ ಜತೆ ಏನು ಬೇಕಾದ್ರೂ ಮಾತಾಡ್ತೀನಿ’; ಮದುವೆ ಬಳಿಕ ಆಲಿಯಾ ಭಟ್​ ಅಚ್ಚರಿಯ ಹೇಳಿಕೆ
Image
Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
Image
Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​
Image
ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?

‘ಬ್ರಹ್ಮಾಸ್ತ್ರ’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಬಿಸ್ನೆಸ್ ಕೂಡ ಉತ್ತಮವಾಗಿ ಮಾಡುತ್ತಿದೆ. ಆದರೆ, ಯಶ್ ನಟನೆಯ ‘ಕೆಜಿಎಫ್ 2’ ದಾಖಲೆ ಮುರಿಯಲು ರಣಬೀರ್ ಕಪೂರ್ ಸಿನಿಮಾಗೆ ಸಾಧ್ಯವಾಗಿಲ್ಲ ಮತ್ತು ಆಗುವುದೂ ಇಲ್ಲ ಎಂದು ಸಿನಿ ಪಂಡಿತರು ಹೇಳಿದ್ದಾರೆ. ‘ಕೆಜಿಎಫ್ 2’ ಹಿಂದಿ ವರ್ಷನ್​ ಅಡ್ವಾನ್ಸ್ ಬುಕಿಂಗ್​ನಿಂದ ಮೊದಲ ದಿನ 40 ಕೋಟಿ ರೂಪಾಯಿ ಹಾಗೂ ಒಟ್ಟಾರೆ 80 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು.  

ಇದನ್ನೂ ಓದಿ: ಸೆ.9ಕ್ಕೆ ‘ಲಕ್ಕಿ ಮ್ಯಾನ್​’ ವರ್ಸಸ್​ ‘ಬ್ರಹ್ಮಾಸ್ತ್ರ’: ಬುಕ್​ ಮೈ ಶೋನಲ್ಲಿ ಹೇಗಿದೆ ಬಲಾಬಲ?

ಇತ್ತೀಚೆಗೆ ಬಾಲಿವುಡ್​ ಮಂಕಾಗಿದೆ. ಹೇಳಿಕೊಳ್ಳುವಂತಹ ಕಲೆಕ್ಷನ್ ಯಾವ ಚಿತ್ರದಿಂದಲೂ ಆಗುತ್ತಿಲ್ಲ. ಈಗ ‘ಬ್ರಹ್ಮಾಸ್ತ್ರ’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಯಾವ ರೀತಿಯಲ್ಲಿ ಬಿಸ್ನೆಸ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್