ಮುಂಬೈ ಕಟ್ಟಡವನ್ನು ಬಾಡಿಗೆ ಕೊಟ್ಟ ಸಲ್ಮಾನ್ ಖಾನ್​; ತಿಂಗಳ ಬಾಡಿಗೆ 89 ಲಕ್ಷ ರೂಪಾಯಿ

ಸಲ್ಮಾನ್ ಖಾನ್ ಅವರು ಬಾಲಿವುಡ್​ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಸಿನಿಮಾದಿಂದ ಪಡೆದ ಸಂಭಾವನೆಯನ್ನು ಅವರು ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಮುಂಬೈ ಕಟ್ಟಡವನ್ನು ಬಾಡಿಗೆ ಕೊಟ್ಟ ಸಲ್ಮಾನ್ ಖಾನ್​; ತಿಂಗಳ ಬಾಡಿಗೆ 89 ಲಕ್ಷ ರೂಪಾಯಿ
ಸಲ್ಲು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 08, 2022 | 11:49 PM

ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​ನ ಬೇಡಿಕೆಯ ನಟ. ಪ್ರತಿ ಸಿನಿಮಾಗೆ ಅವರು ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಸೋತ ಹೊರತಾಗಿಯೂ ನಿರ್ಮಾಪಕರು ಸಲ್ಲು ಮನೆ ಮುಂದೆ ಕಾಲ್​ಶೀಟ್​ಗಾಗಿ ಕಾದು ನಿಲ್ಲುತ್ತಾರೆ. ಸಲ್ಮಾನ್ ಖಾನ್​ಗೆ ಕೇವಲ ಸಿನಿಮಾಗಳಿಂದ ಮಾತ್ರ ಹಣ ಹರಿದು ಬರುತ್ತಿಲ್ಲ. ಅವರು ದೇಶದ ನಾನಾ ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಮುಂಬೈನಲ್ಲಿ ಅನೇಕ ಕಟ್ಟಡ ಅವರ ಹೆಸರಲ್ಲಿದೆ. ಈ ನಗರದ ಹೊರ ಭಾಗದಲ್ಲಿ ಫಾರ್ಮ್​ಹೌಸ್ ಇದೆ. ಈಗ ಸಲ್ಮಾನ್ ಖಾನ್ ಮುಂಬೈನ ಕಟ್ಟಡವೊಂದನ್ನು ಬಾಡಿಗೆ ನೀಡಿದ್ದಾರೆ. ಇದಕ್ಕಾಗಿ ಅವರು ಪ್ರತಿ ತಿಂಗಳು ಪಡೆಯುವ ಬಾಡಿಗೆ ಬರೋಬ್ಬರಿ 89.6 ಲಕ್ಷ ರೂಪಾಯಿ!

ಸಲ್ಮಾನ್ ಖಾನ್ ಅವರು ಬಾಲಿವುಡ್​ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಅವರ ಸಾಲುಸಾಲು ಸಿನಿಮಾಗಳು ಸೋತಿವೆ. ಆದಾಗ್ಯೂ ಸಲ್ಮಾನ್ ಖಾನ್ ಅವರು ಬೇಡಿಕೆ ಕಳೆದುಕೊಂಡಿಲ್ಲ. ಸಿನಿಮಾದಿಂದ ಪಡೆದ ಸಂಭಾವನೆಯನ್ನು ಅವರು ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಮುಂಬೈನ ಹೃದಯಭಾಗದಲ್ಲಿರುವ ಕಟ್ಟಡವೊಂದನ್ನು ಸಲ್ಲು ಫ್ಯೂಚರ್ ರೀಟೇಲ್​ ಗ್ರೂಪ್​ಗೆ ಬಾಡಿಗೆ ನೀಡಿದ್ದಾರೆ. ಇದಕ್ಕಾಗಿ ಅವರು ಮೊದಲ ವರ್ಷ ಪ್ರತಿ ತಿಂಗಳು 89.6 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ. ಎರಡನೇ ವರ್ಷ ಈ ಬಾಡಿಗೆ 94.08 ಲಕ್ಷ ರೂ.ಗೆ ಏರಿಕೆ ಆಗಲಿದೆ.

ಸಾಂತಾಕ್ರ್ಯೂಜ್​ ವೆಸ್ಟ್​ ಭಾಗದಲ್ಲಿ ಈ ಕಟ್ಟಡ ಇದೆ. ನೆಲ ಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿಯನ್ನು ಬಾಡಿಗೆ ನೀಡಲಾಗಿದೆ. ಭದ್ರತಾ ಠೇವಣಿ ರೂಪದಲ್ಲಿ 2.68 ಕೋಟಿ ರೂಪಾಯಿ ಹಣವನ್ನು ಸಲ್ಲು ಪಡೆದಿದ್ದಾರೆ. ಈ ಕಟ್ಟಡದ ವಿಸ್ತೀರ್ಣ 23,042 ಚದರ ಅಡಿ ಇದೆ.

ಇದನ್ನೂ ಓದಿ
Image
‘ವಿಕ್ರಾಂತ್​ ರೋಣ’ ಬೆನ್ನಲ್ಲೇ ಸಲ್ಮಾನ್ ಖಾನ್ ಜತೆಗಿನ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ ಸುದೀಪ್
Image
Salman Khan: ‘ವಿಕ್ರಾಂತ್​ ರೋಣ’ ವೇದಿಕೆಯಲ್ಲಿ ಸುದೀಪ್​-ಸಲ್ಮಾನ್​​; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು
Image
Kichcha Sudeep: ಮುಂಬೈ, ಚೆನ್ನೈನಿಂದಲೂ ಸುದೀಪ್​ ಕಟೌಟ್​ಗೆ ಬಂತು ಬೇಡಿಕೆ; ಹೇಗಿದೆ ನೋಡಿ ‘ವಿಕ್ರಾಂತ್​ ರೋಣ’ ಕ್ರೇಜ್​
Image
Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​

ಇದನ್ನೂ ಓದಿ: ‘ವಿಕ್ರಾಂತ್​ ರೋಣ’ ಬೆನ್ನಲ್ಲೇ ಸಲ್ಮಾನ್ ಖಾನ್ ಜತೆಗಿನ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ ಸುದೀಪ್

ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಮಾನ್ ಖಾನ್ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಟೈಗರ್ 3’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರಕ್ಕೆ ಕತ್ರಿನಾ ನಾಯಕಿ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಿಸಿ ಕಾ ಭಾಯ್, ಕಿಸಿ ಕಿ ಜಾನ್’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ.

Published On - 10:10 pm, Thu, 8 September 22