AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ದ ಕೂದಲು, ರಗಡ್ ಲುಕ್; ಲಡಾಖ್​ನಲ್ಲಿ ನಿಂತು ಫೋಟೋ ಹಂಚಿಕೊಂಡ ಸಲ್ಮಾನ್ ಖಾನ್

ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ಲೇಹ್,ಲಡಾಖ್​’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಕಣ್ಣಿಗೆ ಕಪ್ಪು ಗ್ಲಾಸ್ ಧರಿಸಿ, ಕಪ್ಪು ಬಣ್ಣದ ಬಟ್ಟೆ ಧರಿಸಿ ನಿಂತಿದ್ದಾರೆ.

ಉದ್ದ ಕೂದಲು, ರಗಡ್ ಲುಕ್; ಲಡಾಖ್​ನಲ್ಲಿ ನಿಂತು ಫೋಟೋ ಹಂಚಿಕೊಂಡ ಸಲ್ಮಾನ್ ಖಾನ್
ಸಲ್ಮಾನ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 19, 2022 | 3:42 PM

Share

ಸಲ್ಮಾನ್ ಖಾನ್ (Salman Khan) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜತೆಗೆ ‘ಹಿಂದಿ ಬಿಗ್ ಬಾಸ್ 16’ ರಿಯಾಲಿಟಿ ಶೋನ ಸಾರಥ್ಯ ವಹಿಸಲು ಅವರು ಅಣಿ ಆಗುತ್ತಿದ್ದಾರೆ. ಈ ಮಧ್ಯೆ ಅವರು ಲೇಹ್​, ಲಡಾಖ್​ಗೆ ತೆರಳಿದ್ದಾರೆ. ಅಲ್ಲಿ ನಿಂತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರ ಉದ್ದ ಕೂದಲು ಎಲ್ಲರ ಗಮನ ಸೆಳೆಯುತ್ತಿದೆ. ಇದು ಯಾವ ಸಿನಿಮಾದ ಲುಕ್ ಎಂಬ ಗುಟ್ಟನ್ನು ಸಲ್ಮಾನ್ ಖಾನ್ ಬಿಟ್ಟುಕೊಟ್ಟಿಲ್ಲ.

‘ಕಭಿ ಈದ್, ಕಭಿ ದಿವಾಲಿ’ ಶೂಟಿಂಗ್​ನಲ್ಲಿ ಸಲ್ಮಾನ್ ಖಾನ್ ಬ್ಯುಸಿ ಇದ್ದಾರೆ. ಇದರ ಜತೆಗೆ ‘ಟೈಗರ್​ 3’ ಸಿನಿಮಾ ಕೆಲಸಗಳು ಪ್ರಗತಿಯಲ್ಲಿವೆ. ಸತತವಾಗಿ ಸೋಲು ಕಂಡ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್​ಗೆ ಒಂದು ಗೆಲುವಿನ ಅವಶ್ಯಕತೆ ಇದೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ತುಂಬಾನೇ ಕಾಳಜಿವಹಿಸಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ. ಈಗ ಅವರ ಹೊಸ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ
Image
‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?
Image
Salman Khan: ‘ವಿಕ್ರಾಂತ್​ ರೋಣ’ ವೇದಿಕೆಯಲ್ಲಿ ಸುದೀಪ್​-ಸಲ್ಮಾನ್​​; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು
Image
Kichcha Sudeep: ಮುಂಬೈ, ಚೆನ್ನೈನಿಂದಲೂ ಸುದೀಪ್​ ಕಟೌಟ್​ಗೆ ಬಂತು ಬೇಡಿಕೆ; ಹೇಗಿದೆ ನೋಡಿ ‘ವಿಕ್ರಾಂತ್​ ರೋಣ’ ಕ್ರೇಜ್​
Image
Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​

ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ‘ಲೇಹ್,ಲಡಾಖ್​’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಕಣ್ಣಿಗೆ ಕಪ್ಪು ಗ್ಲಾಸ್ ಧರಿಸಿ, ಕಪ್ಪು ಬಣ್ಣದ ಬಟ್ಟೆ ಧರಿಸಿ ನಿಂತಿದ್ದಾರೆ. ಅವರ ಹಿಂದೆ ಇರುವ ಬೈಕ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಫೋಟೋ ಪೋಸ್ಟ್ ಮಾಡಿ ಕೇವಲ ಎರಡು ಗಂಟೆಗಳಲ್ಲಿ 8 ಲಕ್ಷ ಲೈಕ್ಸ್ ಹಾಗೂ 16 ಸಾವಿರ ಕಮೆಂಟ್​ಗಳು ಬಂದಿವೆ.

ಸಲ್ಮಾನ್ ಖಾನ್ ಅವರು ಯಾವ ಚಿತ್ರಕ್ಕಾಗಿ ಈ ಅವತಾರ ತಾಳಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅವರ ಹಿಂದಿರುವ ಬೈಕ್ ಫ್ಯಾನ್ಸ್​ಗೆ ಸಖತ್ ಇಷ್ಟವಾಗಿದೆ. ಈ ರೀತಿಯ ಬೈಕ್​ಗಳು ಸಿನಿಮಾದಲ್ಲಿ ಹೆಚ್ಚು ಬಳಕೆ ಆಗುತ್ತಿದೆ. ‘ಕೆಜಿಎಫ್’ ಚಿತ್ರದಲ್ಲಿ ಇದೇ ಮಾದರಿಯ ಬೈಕ್ ಇತ್ತು. ಅದು ಟ್ರೆಂಡ್ ಸೆಟ್ ಮಾಡಿತ್ತು. ಸಲ್ಮಾನ್ ಖಾನ್ ಅವರ ಈ ಬೈಕ್ ಕೂಡ ಟ್ರೆಂಡ್ ಸೃಷ್ಟಿ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ವಿಕ್ರಾಂತ್​ ರೋಣ’ ಬೆನ್ನಲ್ಲೇ ಸಲ್ಮಾನ್ ಖಾನ್ ಜತೆಗಿನ ಸಿನಿಮಾ ಬಗ್ಗೆ ಅಪ್​ಡೇಟ್ ನೀಡಿದ ಸುದೀಪ್

ಕೆಲವರು ಇದನ್ನು ‘ಟೈಗರ್ 3’ ಚಿತ್ರದ ಶೂಟಿಂಗ್ ಎಂದಿದ್ದಾರೆ. ಇನ್ನೂ ಕೆಲವರು ‘ಇದು ಕಭಿ ಈದ್ ಕಭಿ ದಿವಾಲಿ ಚಿತ್ರದ ಶೂಟಿಂಗ್. ಪೂಜಾ ಹೆಗ್ಡೆ ಕೂಡ ಲಡಾಖ್​ನಲ್ಲೇ ಇದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರು ಈ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ‘ಕಭಿ ಈದ್​..’ ಸಿನಿಮಾ ಈ ವರ್ಷ ಡಿಸೆಂಬರ್ 30ಕ್ಕೆ ರಿಲೀಸ್ ಆಗಲಿದೆ. ‘ಟೈಗರ್ 3’ ಚಿತ್ರ 2023ರ ಜನವರಿ 25ಕ್ಕೆ ಬಿಡುಗಡೆ ಆಗಲಿದೆ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ