ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ಟಿಕೆಟ್ ಬೆಲೆ 75 ರೂಪಾಯಿ ಮಾತ್ರ; ವಿಶೇಷ ದಿನಕ್ಕೆ ಇಲ್ಲಿದೆ ಮಸ್ತ್ ಆಫರ್
National Cinema Day: ಕೊವಿಡ್ ನಂತರದ ಈ ಕಾಲಘಟ್ಟದಲ್ಲಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರದತ್ತ ಸೆಳೆಯಲು ಈ ರೀತಿ ಆಫರ್ ನೀಡಲಾಗುತ್ತಿದೆ. ಸೆ.16ರಂದು ‘ರಾಷ್ಟ್ರೀಯ ಸಿನಿಮಾ ದಿನ’ ಆಚರಣೆ ಮಾಡಲಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಸಿನಿಮಾ ಟಿಕೆಟ್ ದರ ಹೆಚ್ಚುತ್ತಲೇ ಇದೆ. ಇದರಿಂದ ಬಡವರಿಗೆ ಮತ್ತು ಮಧ್ಯಮವರ್ಗದ ಸಿನಿಪ್ರಿಯರಿಗೆ ಹೊರೆ ಆಗುತ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್ಗಳಲ್ಲಿ (Multiplex) ಸಿನಿಮಾ ನೋಡಬೇಕು ಎಂದರೆ ಪ್ರತಿ ಟಿಕೆಟ್ಗೆ ದುಬಾರಿ ಬೆಲೆ ನೀಡಬೇಕು. ಹೈಬಜೆಟ್ ಸಿನಿಮಾಗಳ ಟಿಕೆಟ್ ಬೆಲೆ ಸಾವಿರ ರೂಪಾಯಿ ದಾಟಿದ ಉದಾಹರಣೆಯೂ ಸಾಕಷ್ಟಿದೆ. ಇದರ ನಡುವೆ ಒಂದು ಗುಡ್ ನ್ಯೂಸ್ ಕೇಳಿಬಂದಿದೆ. ಸೆ.16ರಂದು ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡಿದರೆ ಪ್ರತಿ ಟಿಕೆಟ್ಗೆ ಕೇವಲ 75 ರೂಪಾಯಿ ದರ ಇರಲಿದೆ. ಈ ರೀತಿ ಒಂದು ಮಸ್ತ್ ಆಫರ್ ನೀಡಲಾಗುತ್ತಿದೆ. ಸೆ.16ರಂದು ‘ರಾಷ್ಟ್ರೀಯ ಸಿನಿಮಾ ದಿನ’ (National Cinema Day) ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಕೇವಲ 75 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಲಾಗಿದೆ.
‘ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ವತಿಯಿಂದ ಈ ಭರ್ಜರಿ ಆಫರ್ ನೀಡಲಾಗುತ್ತಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್ ಕಂಪನಿಗಳು ಕೈ ಜೋಡಿಸಿವೆ. ದೇಶಾದ್ಯಂತ ಇರುವ ಅಂದಾಜು 4 ಸಾವಿರ ಸ್ಕ್ರೀನ್ಗಳಲ್ಲಿ ಈ ಆಫರ್ ನೀಡಲಾಗುತ್ತಿದೆ. ಈ ಸುದ್ದಿ ಕೇಳಿ ಸಿನಿಪ್ರಿಯರು ಖುಷಿಪಟ್ಟಿದ್ದಾರೆ. ಸೆ.16ರಂದು ಕೇವಲ 75 ರೂಪಾಯಿಗೆ ತಮ್ಮಿಷ್ಟದ ಸಿನಿಮಾ ನೋಡಲು ಪ್ರೇಕ್ಷಕರು ಕಾದಿದ್ದಾರೆ.
ಕೊರೊನಾ ನಂತರ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಟ್ರೆಂಡ್ ಕಮ್ಮಿ ಆಗಿದೆ. ಕೆಲವೇ ಕೆಲವು ಚಿತ್ರಗಳಿಗೆ ಮಾತ್ರ ಜನರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಉಳಿದಂತೆ ಅನೇಕ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೊರಗಿವೆ. ಕೊವಿಡ್ ನಂತರದ ಈ ಕಾಲಘಟ್ಟದಲ್ಲಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರದತ್ತ ಸೆಳೆಯಲು ಈ ರೀತಿ ಆಫರ್ ನೀಡಲಾಗುತ್ತಿದೆ. ಸೆ.16ರಂದು ಇಡೀ ದೇಶಾದ್ಯಂತ ಇರುವ ಮಲ್ಟಿಪ್ಲೆಕ್ಸ್ನಲ್ಲಿ ‘ರಾಷ್ಟ್ರೀಯ ಸಿನಿಮಾ ದಿನ’ವನ್ನು ಆಚರಿಸಲಾಗುತ್ತಿದೆ.
National Cinema Day will be held at more than 4000 participating screens and will include cinema screens of PVR, INOX, CINEPOLIS, CARNIVAL, MIRAJ, CITYPRIDE, ASIAN, MUKTA A2, MOVIE TIME, WAVE, M2K, DELITE and many others. pic.twitter.com/nVpM5neXd1
— Multiplex Association Of India (@MAofIndia) September 2, 2022
‘ಬ್ರಹ್ಮಾಸ್ತ್ರ’ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗಲಿದೆ. ಸೆ.16ರಂದು ಕನ್ನಡದ ‘ಮಾನ್ಸೂನ್ ರಾಗ’ ಚಿತ್ರ ತೆರೆ ಕಾಣಲಿದೆ. ಈಗಾಗಲೇ ಹಲವು ಸಿನಿಮಾಗಳು ಮಲ್ಟಿಪ್ಲೆಕ್ಸ್ನಲ್ಲಿ ಪ್ರದರ್ಶನ ಕಾಣುತ್ತಿವೆ. ಆ ಎಲ್ಲ ಸಿನಿಮಾಗಳ ಬೆಲೆ ಸೆ.16ರಂದು ಮಲ್ಟಿಪ್ಲೆಕ್ಸ್ಗಳಲ್ಲಿ ಕೇವಲ 75 ರೂಪಾಯಿ ಆಗಿರಲಿದೆ. ಇನ್ನು, ‘ಬುಕ್ ಮೈ ಶೋ’ ರೀತಿಯ ಆ್ಯಪ್ಗಳ ಮೂಲಕ ಟಿಕೆಟ್ ಬುಕ್ ಮಾಡಿದರೆ ಹೆಚ್ಚುವರಿ ಶುಲ್ಕ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:55 pm, Sat, 3 September 22