#BoycottBanaras ಟ್ರೆಂಡ್ ಶುರು; ಜಮೀರ್ ಪುತ್ರನ ‘ಬನಾರಸ್’ ಚಿತ್ರಕ್ಕೆ ಹಿಂದೂ ಕಾರ್ಯಕರ್ತರ ವಿರೋಧ
Zameer Ahmed | Zaid Khan: ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ಅವರು ರಾಜಕೀಯದ ಕಡೆಗೆ ತಲೆ ಹಾಕಿಲ್ಲ. ಅವರಿಗೆ ಸಿನಿಮಾ ಮೇಲೆ ಆಸಕ್ತಿ ಇದೆ. ಆದರೆ ಅವರ ಮೊದಲ ಚಿತ್ರ ‘ಬನಾರಸ್’ಗೆ ಬಹಿಷ್ಕಾರದ ಭೀತಿ ಕಾಡುತ್ತಿದೆ.
ಸಾಕಷ್ಟು ಕನಸುಗಳನ್ನು ಹೊತ್ತುಕೊಂಡು ನಟ ಜೈದ್ ಖಾನ್ (Zaid Khan) ಅವರು ಚಿತ್ರರಂಗ ಪ್ರವೇಶಿಸಿದ್ದಾರೆ. ಅವರ ಚೊಚ್ಚಲ ಸಿನಿಮಾ ‘ಬನಾರಸ್’ (Banaras Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಜಯತೀರ್ಥ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಜೈದ್ ಖಾನ್ಗೆ ಜೋಡಿಯಾಗಿ ಸೋನಲ್ ಮಾಂಥೆರೋ ನಟಿಸಿದ್ದಾರೆ. ನವೆಂಬರ್ 4ರಂದು ‘ಬನಾರಸ್’ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಇತ್ತೀಚೆಗಷ್ಟೇ ಘೋಷಣೆ ಮಾಡಲಾಗಿದೆ. ಅದರ ಬೆನ್ನಲ್ಲೇ ಈ ಚಿತ್ರವನ್ನು ಬಹಿಷ್ಕರಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡಲಾಗುತ್ತಿದೆ. ಹಿಂದೂ ಕಾರ್ಯಕರ್ತರು #BoycottBanaras ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ಜೈದ್ ಖಾನ್ ಅವರ ತಂದೆ ಜಮೀರ್ ಅಹ್ಮದ್ (Zameer Ahmed) ಅವರ ರಾಜಕೀಯದ ನಿಲುವುಗಳು. ಹೌದು, ಜಮೀರ್ ಅವರ ರಾಜಕೀಯದಿಂದಾಗಿ ಅವರ ಮಗನ ಸಿನಿಮಾಗೆ ಬಹಿಷ್ಕಾರದ ಬಿಸಿ ತಟ್ಟುತ್ತಿದೆ.
ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅಡ್ಡಿಪಡಿಸಿದ್ದಕ್ಕಾಗಿ ಹಿಂದೂ ಕಾರ್ತಕರ್ತರು ಜಮೀರ್ ಅಹ್ಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಡಿಕೆ ಹಳ್ಳಿ, ಕೆಜಿ ಹಳ್ಳಿ ಗಲಭೆಗಳನ್ನು ಕೂಡ ನೆನಪಿಸಿಕೊಳ್ಳಲಾಗುತ್ತಿದೆ. ಗಲಭೆ ನಡೆಸಿದ ಆರೋಪಿಗಳಿಗೆ ಜಾಮೀನು ಒದಗಿಸಲು ಬೆಂಬಲ ನೀಡಿದ್ದರು ಎಂದು ಕೂಡ ಜಮೀರ್ ವಿರುದ್ಧ ಹಿಂದೂ ಕಾರ್ಯಕರ್ತರು ಗರಂ ಆಗಿದ್ದಾರೆ. ಹಾಗಾಗಿ ಅವರ ಪುತ್ರನ ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ.
ಚಿತ್ರರಂಗದ ಪಾಲಿಗೆ ಬಹಿಷ್ಕಾರ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಎಷ್ಟೇ ಕಷ್ಟಪಟ್ಟು ಸಿನಿಮಾ ಮಾಡಿದರೂ ಜನರಿಂದ ಬಹಿಷ್ಕಾರಕ್ಕೆ ಒಳಗಾದರೆ ಈ ಚಿತ್ರಕ್ಕೆ ಹೀನಾಯ ಸೋಲು ಉಂಟಾಗುವ ಸಾಧ್ಯತೆ ಇರುತ್ತದೆ. ಬಾಲಿವುಡ್ನಲ್ಲಿ ಅನೇಕ ಸಿನಿಮಾಗಳನ್ನು ಜನರು ಈ ರೀತಿ ಸೋಲಿಸಿದ್ದಾರೆ. ನಟ-ನಟಿಯರು ಈ ಹಿಂದೆ ನೀಡಿದ ಹೇಳಿಕೆಗಳು ಕೂಡ ನೆನಪಿನಲ್ಲಿ ಇಟ್ಟುಕೊಂಡು ಜನರು ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಬಹಿಷ್ಕಾರದ ಟ್ರೆಂಡ್ ಈಗ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದೆ.
ಹಿಂದೂಗಳ ಸಾರ್ವಜನಿಕ ಗಣೇಶೋತ್ಸವ ವಿರೋಧ ಮಾಡುವ ಜಮೀರ್ ಅಹ್ಮದ್ ಖಾನನ ಮಗನ ಪಿಲ್ಮ್ ಬನಾರಸ ಸಿನೆಮಾವನ್ನು ಬಹಿಷ್ಕಾರ ಮಾಡಿರಿ.#BoycottBanaras pic.twitter.com/IoFQnPejX3
— ?Mohan gowda?? (@Mohan_HJS) September 1, 2022
In pic 1 it seems they are standing on Hindu Mandirs. In pic 2 actress can be observed in Bhagwan Srikrishna’s form. In pic 3 Zaid Khan is standing on a Hindu Mandir, don’t know how @Uppolice allowed him to do so.#boycottBanaras for Intentionally hurting the sentiments of Hindus pic.twitter.com/iKA1hlOg5R
— Ravindranath (@MRavindra2021) September 1, 2022
ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ಅವರು ರಾಜಕೀಯದ ಕಡೆಗೆ ತಲೆ ಹಾಕಿಲ್ಲ. ಅವರ ಆಸಕ್ತಿ ಏನಿದ್ದರೂ ಸಿನಿಮಾ ಮೇಲಿದೆ. ಮೊದಲ ಚಿತ್ರಕ್ಕಾಗಿ ಅವರು ಸಕಲ ತಯಾರಿ ಮಾಡಿಕೊಂಡು ಕ್ಯಾಮೆರಾ ಎದುರಿಸಿದ್ದಾರೆ. ಈ ಸಿನಿಮಾದ ‘ಮಾಯಗಂಗೆ..’ ಹಾಡು ಸೂಪರ್ ಹಿಟ್ ಆಗಿದೆ. ಆದರೆ ಪೋಸ್ಟರ್ಗಳನ್ನು ನೋಡಿ ಕೆಲವರು ಕಿರಿಕ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.