Kireeti: ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ ಶಿವಣ್ಣ; ಇಲ್ಲಿದೆ ವಿಡಿಯೋ
Shivarajkumar | Kireeti Reddy: ಕಿರೀಟಿ ಜೊತೆ ಶೂಟಿಂಗ್ನಲ್ಲಿ ನಟಿ ಜೆನಿಲಿಯಾ ಡಿಸೋಜಾ ಕೂಡ ಭಾಗಿ ಆಗಿದ್ದಾರೆ. ಚಿತ್ರತಂಡದ ಜೊತೆ ಶಿವರಾಜ್ಕುಮಾರ್ ಅವರು ಒಂದಷ್ಟು ಸಮಯ ಕಳೆದಿದ್ದಾರೆ.
ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ (Kireeti Reddy) ನಟನೆಯ ಚೊಚ್ಚಲ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಶಿವರಾಜ್ಕುಮಾರ್ ಅವರು ಸರ್ಪ್ರೈಸ್ ಭೇಟಿ ನೀಡಿದ್ದಾರೆ. ಶೂಟಿಂಗ್ನಲ್ಲಿ ನಟಿ ಜೆನಿಲಿಯಾ ಡಿಸೋಜಾ (Genelia Dsouza) ಕೂಡ ಭಾಗಿ ಆಗಿದ್ದಾರೆ. ಚಿತ್ರತಂಡದ ಜೊತೆ ಒಂದಷ್ಟು ಸಮಯ ಕಳೆದ ಶಿವರಾಜ್ಕುಮಾರ್ (Shivarajkumar) ಅವರು ಆಲ್ ದಿ ಬೆಸ್ಟ್ ಹೇಳಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಕೂಡ ಉಪಸ್ಥಿತರಿದ್ದರು. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಸಿನಿಮಾ ಮೂಡಿಬರುತ್ತಿದೆ.
Published on: Sep 04, 2022 02:49 PM
Latest Videos