ಶಾಂಭವಿ ಅಂತ ಮತ್ತೆ ಹೆಸರು ಚೇಂಜ್ ಮಾಡಿಕೊಳ್ತಾರಾ ಸೋನು ಗೌಡ? ದೊಡ್ಮನೆಯಲ್ಲಿ ನಡೆದಿದೆ ಚರ್ಚೆ
Rakesh Adiga | Sonu Srinivas Gowda: ಪ್ರೇಕ್ಷಕರ ಮನದಲ್ಲಿ ಈ ರೀತಿ ಪ್ರಶ್ನೆ ಮೂಡುವ ರೀತಿಯಲ್ಲಿ ರಾಕೇಶ್ ಅಡಿಗ ಮಾತನಾಡಿದ್ದಾರೆ. ಅದನ್ನು ಕೇಳಿಸಿಕೊಂಡ ಸೋನು ಗೌಡ ಅವರು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದ್ದಾರೆ.
ವೈರಲ್ ವಿಡಿಯೋ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಅವರು ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಆಟದಲ್ಲಿ ನಾಲ್ಕನೇ ವಾರದವರೆಗೂ ಸಖತ್ ಫೈಟ್ ನೀಡಿದ್ದಾರೆ. ದೊಡ್ಮನೆಯೊಳಗೆ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಅವರ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಸೋನು (Sonu Srinivas Gowda) ಅವರ ಮೊದಲ ಹೆಸರು ಶಾಂಭವಿ ಗೌಡ. ಈಗ ಅವರು ಮತ್ತೆ ಹಳೇ ಹೆಸರನ್ನೇ ಇಟ್ಟುಕೊಳ್ತಾರಾ? ಪ್ರೇಕ್ಷಕರ ಮನದಲ್ಲಿ ಈ ರೀತಿ ಪ್ರಶ್ನೆ ಮೂಡುವ ರೀತಿಯಲ್ಲಿ ರಾಕೇಶ್ ಅಡಿಗ (Rakesh Adiga) ಅವರು ಮಾತನಾಡಿದ್ದಾರೆ. ಅದನ್ನು ಕೇಳಿಸಿಕೊಂಡು ಸೋನು ಗೌಡ ಅವರು ಮನಸ್ಸಿನಲ್ಲೇ ಏನೋ ಲೆಕ್ಕಾಚಾರ ಹಾಕಿದ್ದಾರೆ. ಅದನ್ನು ತಿಳಿಯಲು ಈ ವಿಡಿಯೋ ನೋಡಿ. ವೂಟ್ ಸೆಲೆಕ್ಟ್ ಒಟಿಟಿ ಮೂಲಕ ಈ ಶೋ ಪ್ರಸಾರ ಆಗುತ್ತಿದೆ.
Latest Videos