BBK: ‘ನೀನು ಹಾಲು ಇದ್ದಂಗೆ, ಒಮ್ಮೆಲೆ ಉಕ್ಕುತ್ತೀಯ’: ಸೋನು ಗೌಡ ವ್ಯಕ್ತಿತ್ವವನ್ನು ಈ ರೀತಿ ಬಣ್ಣಿಸಿದ ಗುರೂಜಿ

Sonu Srinivas Gowda: ನಾಲ್ಕನೇ ವಾರದಲ್ಲಿ ಸೋನು ಶ್ರೀನಿವಾಸ್​ ಗೌಡ ಜೈಲು ಸೇರಿದರು. ಎಲ್ಲರೂ ಸೇರಿ ತಮಗೆ ಕಳಪೆ ಪಟ್ಟ ಕೊಟ್ಟರು ಎಂಬ ಕಾರಣಕ್ಕೆ ಅವರು ತುಂಬ ಬೇಸರ ಮಾಡಿಕೊಂಡರು.

BBK: ‘ನೀನು ಹಾಲು ಇದ್ದಂಗೆ, ಒಮ್ಮೆಲೆ ಉಕ್ಕುತ್ತೀಯ’: ಸೋನು ಗೌಡ ವ್ಯಕ್ತಿತ್ವವನ್ನು ಈ ರೀತಿ ಬಣ್ಣಿಸಿದ ಗುರೂಜಿ
ಆರ್ಯವರ್ಧನ್ ಗುರೂಜಿ, ಸೋನು ಶ್ರೀನಿವಾಸ್ ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on: Sep 04, 2022 | 5:27 PM

ವೂಟ್​ ಸೆಲೆಕ್ಟ್​ ಮೂಲಕ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋ ಈಗ ನಾಲ್ಕನೇ ವಾರವನ್ನು ಯಶಸ್ವಿಯಾಗಿ ಪೂರೈಸುತ್ತಿದೆ. ಆರನೇ ವಾರಕ್ಕೆ ಈ ಕಾರ್ಯಕ್ರಮ ಮುಕ್ತಾಯ ಆಗಲಿದೆ. ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ಈ ಶೋನಲ್ಲಿ ಭಾಗಿ ಆಗಿದ್ದಾರೆ. ವೈರಲ್​ ಹುಡುಗಿ ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ಸಖತ್​ ಹೈಲೈಟ್​ ಆಗುತ್ತಿದ್ದಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಮೂಲಕ ಅವರ ಕೆಲವರ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ. ಬಿಗ್ ಬಾಸ್​ಗೂ ಎದುರುತ್ತರ ನೀಡಿ ಸೋನು ಬೈಯಿಸಿಕೊಂಡಿದ್ದಾರೆ. ಕಳಪೆ ಆಟ ಪ್ರದರ್ಶಿಸಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಒಟ್ಟಾರೆ ಸೋನು ಗೌಡ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಆರ್ಯವರ್ಧನ್​ ಗುರೂಜಿ (Aryavardhan Guruji) ತಮ್ಮದೇ ರೀತಿಯಲ್ಲಿ ವಿವರಿಸಿದ್ದಾರೆ.

ನಾಲ್ಕನೇ ವಾರದಲ್ಲಿ ಸೋನು ಶ್ರೀನಿವಾಸ್​ ಗೌಡ ಜೈಲು ಸೇರಿದರು. ಎಲ್ಲರೂ ಸೇರಿ ತಮಗೆ ಕಳಪೆ ಪಟ್ಟ ಕೊಟ್ಟರು ಎಂಬ ಕಾರಣಕ್ಕೆ ಅವರು ತುಂಬ ಬೇಸರ ಮಾಡಿಕೊಂಡರು. ಜೈಲಿನಲ್ಲಿ ಇದ್ದಷ್ಟು ಹೊತ್ತು ಅವರು ಸಿಟ್ಟು ಮಾಡುಕೊಂಡೇ ಇದ್ದರು. ಈ ವೇಳೆ ಅವರನ್ನು ಸಮಾಧಾನ ಮಾಡಲು ಅನೇಕರು ಪ್ರಯತ್ನಿಸಿದರು. ಆರ್ಯವರ್ಧನ್​ ಗುರೂಜಿ ಕೂಡ ಆಗಾಗ ಬಂದು ಮಾತನಾಡಿಸಿದರು.

‘ನಾನು ಗಮನಿಸಿದಂತೆ ನೀನು ಒಂಥರ ಹಾಲು ಇದ್ದಂಗೆ. ಸಿಟ್ಟಾದರೆ ಒಂದೇ ಸಲ ಉಕ್ಕುತ್ತೀಯ. ಪಾತ್ರೆ ಸರಿ ಇಲ್ಲ ಎಂದರೆ ಒಂದೇ ಸಲ ಒಡೆದು ಹೋಗ್ತೀಯ’ ಎಂದು ಆರ್ಯವರ್ಧನ್​ ಗುರೂಜಿ ಹೇಳಿದರು. ಆ ಮಾತು ಕೇಳಿ ಸೋನುಗೆ ನಗು ಬಂತು. ‘ಆದರೆ ನಾನು ಮತ್ತೆ ಹಾಲಾಗಲು ಟ್ರೈ ಮಾಡಲ್ಲ. ಮಾತಾಡ್ತೀನಿ, ನಾರ್ಮಲ್​ ಆಗಿ ಇರ್ತೀನಿ. ಆದರೆ ಮೊದಲು ಇದಷ್ಟು ಪ್ರೀತಿ, ಮೊದಲು ಇದ್ದಷ್ಟು ಕಾಳಜಿ ತೋರಿಸಲ್ಲ. ಅಷ್ಟು ಪ್ರೀತಿ ಇದ್ದಿದ್ದಕ್ಕಾಗಿಯೇ ನನಗೆ ಈ ಜಾಗ’ ಎಂದು ಸೋನು ಗೌಡ ಹೇಳಿದ್ದಾರೆ.

ಸೋನು ಗೌಡ ಮತ್ತು ರಾಕೇಶ್​ ಅಡಿಗ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಸೋನು ಜೈಲಿಗೆ ಹೋಗಿದ್ದಕ್ಕೆ ರಾಕೇಶ್​ಗೆ ಬೇಸರ ಆಗಿದೆ. ಹಾಗಾಗಿ ಅವರ ಕೂಡ ಬೇರೆ ಯಾವುದೇ ಆಹಾರ ತಿನ್ನದೇ ಬರೀ ರಾಗಿ ಗಂಜಿ ತಿಂದುಕೊಂಡು ಕಾಲ ಕಳೆದಿದ್ದಾರೆ. ‘ಇದು ಯಾವ ರೀತಿ ಲವ್​ ಸ್ಟೋರಿಯೋ ಗೊತ್ತಾಗ್ತಾ ಇಲ್ಲ’ ಎಂದು ಸಾನ್ಯಾ ಐಯ್ಯರ್​ ಹೇಳಿದರು. ‘ಇದು ಲವ್​ ಅಲ್ಲಮ್ಮ, ಜೈಲಿಗೆ ಕಳಿಸಿದ್ದಕ್ಕೆ ಶಿಕ್ಷೆ’ ಎಂದು ರಾಕೇಶ್​ ಸಮಜಾಯಿಷಿ ನೀಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ