AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK: ‘ಬಿಗ್​ ಬಾಸ್​’ನಲ್ಲಿ ಈ ವಾರ ಡಬಲ್​ ಎಲಿಮಿನೇಷನ್​; ಅಕ್ಷತಾ ಕುಕ್ಕಿ, ಚೈತ್ರಾ ಹಳ್ಳಿಕೇರಿ ಔಟ್​

Bigg Boss Elimination: ವಾರದ ಪಂಚಾಯಿತಿಯಲ್ಲಿ ಡಬಲ್​ ಎಲಿಮಿನೇಷನ್​ ಮಾಡಲಾಗಿದೆ. ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ ಅವರ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಪಯಣ ಅಂತ್ಯವಾಗಿದೆ.

BBK: ‘ಬಿಗ್​ ಬಾಸ್​’ನಲ್ಲಿ ಈ ವಾರ ಡಬಲ್​ ಎಲಿಮಿನೇಷನ್​; ಅಕ್ಷತಾ ಕುಕ್ಕಿ, ಚೈತ್ರಾ ಹಳ್ಳಿಕೇರಿ ಔಟ್​
ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕ್ಕಿ,
Follow us
TV9 Web
| Updated By: ಮದನ್​ ಕುಮಾರ್​

Updated on: Sep 03, 2022 | 9:13 PM

‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ನಾಲ್ಕನೇ ವಾರದ ಎಲಿಮಿನೇಷನ್ (Bigg Boss Elimination)​ ನಡೆದಿದೆ. ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಕೌತುಕಕ್ಕೆ ಈಗ ತೆರೆ ಬಿದ್ದಿದೆ. ಅಚ್ಚರಿ ಎಂದರೆ ಈ ಬಾರಿ ಇಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಅಕ್ಷತಾ ಕುಕ್ಕಿ (Akshatha Kuki) ಮತ್ತು ಚೈತ್ರಾ ಹಳ್ಳಿಕೇರಿ ಅವರು ದೊಡ್ಮನೆಯಿಂದ ಔಟ್​ ಆಗಿದ್ದಾರೆ. ವೀಕ್ಷಕರಿಂದ ಕಡಿಮೆ ವೂಟ್​ ಪಡೆದ ಕಾರಣದಿಂದ ಅವರು ಎಲಿಮಿನೇಟ್​ ಆಗಿದ್ದಾರೆ. ಚೈತ್ರಾ ಹಳ್ಳಿಕೇರಿ, ಜಶ್ವಂತ್​, ಜಯಶ್ರೀ ಆರಾಧ್ಯ, ನಂದಿನಿ, ಸಾನ್ಯಾ ಐಯ್ಯರ್​, ಅಕ್ಷತಾ ಕುಕ್ಕಿ, ರಾಕೇಶ್​ ಅಡಿಗ, ಸೋನು ಶ್ರೀನಿವಾಸ್​ ಗೌಡ ಅವರು ಈ ವಾರ ನಾಮಿನೇಟ್​ ಆಗಿದ್ದರು. ಅಂತಿಮವಾಗಿ ಅಕ್ಷತಾ ಮತ್ತು ಚೈತ್ರಾ ಹಳ್ಳಿಕೇರಿ  (Chaitra Hallikeri) ಎಲಿಮಿನೇಟ್​ ಆಗುವ ಮೂಲಕ ಬಿಗ್​ ಬಾಸ್​ ಆಟ ಮುಗಿಸಿದ್ದಾರೆ. ‘ಬಿಗ್​ ಬಾಸ್​ ಒಟಿಟಿ ಕನ್ನಡ’ ಶೋನ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನ ಆಗಿದೆ.

ಇಷ್ಟು ದಿನಗಳ ಕಾಲ ಸೇಫ್​ ಆಗಿದ್ದ ಅಕ್ಷತಾ ಮತ್ತು ಚೈತ್ರಾ ಅವರು ನಾಲ್ಕನೇ ವಾರಕ್ಕೆ ಎಲಿಮಿನೇಟ್​ ಆಗಿದ್ದಾರೆ. ದೊಡ್ಮನೆಯಲ್ಲಿ ಚೈತ್ರಾ ಹೆಚ್ಚು ಆಲಸ್ಯದಿಂದ ಇರುತ್ತಿದ್ದರು. ಜಯಶ್ರೀ ಹೊರತುಪಡಿಸಿ ಬೇರೆ ಯಾರ ಜೊತೆಗೂ ಅವರಿಗೆ ಹೆಚ್ಚು ಒಡನಾಟ ಇರಲಿಲ್ಲ. ಹಾಗಾಗಿ ಅವರಿಗೆ ಕಡಿಮೆ ವೂಟ್​ ಬಂದಿರಬಹುದು. ಟಾಸ್ಕ್​ ಮತ್ತು ಎಂಟರ್​ಟೇನ್​ಮೆಂಟ್​ ವಿಚಾರದಲ್ಲಿ ಅಕ್ಷತಾ ಕುಕ್ಕಿ ಅವರು ಹೇಳಿಕೊಳ್ಳುವಂಥ ಪರ್ಫಾರ್ಮೆನ್ಸ್​ ನೀಡಲಿಲ್ಲ. ಈ ಎಲ್ಲ ಕಾರಣದಿಂದ ಪ್ರೇಕ್ಷಕರ ಮನಗೆಲ್ಲುವಲ್ಲಿ ಅವರು ಸೋತಿದ್ದಾರೆ.

ಬಿಗ್​ ಬಾಸ್​ ಎಂದರೆ ಹಲವು ಆಯಾಮಗಳ ಆಟ. ಟಾಸ್ಕ್​ ಆಡುತ್ತಲೇ ಭಾವನೆಗಳನ್ನೂ ನಿಭಾಯಿಸಬೇಕು. ಪ್ರೇಕ್ಷಕರಿಗೆ ಮನರಂಜನೆ ನೀಡಬೇಕು. ಎಲ್ಲರ ಜೊತೆ ಬೆರೆಯಬೇಕು. ಆದರೂ ಸ್ವಂತಿಕೆ ಉಳಿಸಿಕೊಳ್ಳಬೇಕು. ಹೀಗೆ ಹತ್ತು ಹಲವು ವಿಷಯಗಳ ಆಧಾರದ ಮೇಲೆ ಜನರು ವೋಟ್​ ಮಾಡುತ್ತಾರೆ.

ಇದನ್ನೂ ಓದಿ
Image
ಬಿಗ್ ಬಾಸ್​​ನಲ್ಲಿ ಐದನೇ ವಿಕೆಟ್ ಪತನ; ಉದಯ್​ ಹೊರಹೋಗಲು ಕಾರಣವಾದ ವಿಚಾರಗಳೇನು?
Image
‘ಬಿಗ್ ಬಾಸ್’ ಮನೆಯಿಂದ ಸ್ಫೂರ್ತಿ ಗೌಡ ಔಟ್​; ಎಲಿಮಿನೇಷನ್​ಗೆ ಕಾರಣವಾಯ್ತು ಆ ಒಂದು ವಿಚಾರ
Image
Bigg Boss Kannada OTT: ‘ಬಿಗ್ ಬಾಸ್​ ಒಟಿಟಿ’ಯಿಂದ ಮೊದಲು ಹೊರಬಂದು ಒಳಗಿನ ಸತ್ಯಗಳನ್ನು ತೆರೆದಿಟ್ಟ ಕಿರಣ್​ ಯೋಗೇಶ್ವರ್​
Image
Kiran Yogeshwar: ಬಿಗ್​ ಬಾಸ್​ ಮನೆಯಿಂದ ಕಿರಣ್​ ಯೋಗೇಶ್ವರ್​ ಔಟ್​; ನಡೆಯಿತು ಮೊದಲ ಎಲಿಮಿನೇಷನ್​

ಐದನೇ ವಾರದತ್ತ ‘ಬಿಗ್​ ಬಾಸ್ ಕನ್ನಡ​ ಒಟಿಟಿ’ ಮೊದಲ ಸೀಸನ್​ ಸಾಗುತ್ತಿದೆ. ಆರನೇ ವಾರಕ್ಕೆ ಈ ಶೋ ಮುಗಿಯಲಿದೆ. ಇದರಲ್ಲಿ ಭಾಗವಹಿಸಿದ ಕೆಲವರಿಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ಕ್ಕೆ ಎಂಟ್ರಿ ಸಿಗಲಿದೆ. ಆ ಚಾನ್ಸ್​ ಯಾರು ಪಡೆಯುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್