ಬಿಗ್ ಬಾಸ್​​ನಲ್ಲಿ ಐದನೇ ವಿಕೆಟ್ ಪತನ; ಉದಯ್​ ಹೊರಹೋಗಲು ಕಾರಣವಾದ ವಿಚಾರಗಳೇನು?

ಕಿಚ್ಚ ಸುದೀಪ್ ಅವರು ಪ್ರತಿ ವಾರ ನಿರೂಪಣೆ ಮಾಡುತ್ತಾರೆ. ಟಿವಿ ಸೀಸನ್​ಗಳಲ್ಲಿ ಭಾನುವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಒಟಿಟಿಯಲ್ಲಿ ಶನಿವಾರವೇ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ.

ಬಿಗ್ ಬಾಸ್​​ನಲ್ಲಿ ಐದನೇ ವಿಕೆಟ್ ಪತನ; ಉದಯ್​ ಹೊರಹೋಗಲು ಕಾರಣವಾದ ವಿಚಾರಗಳೇನು?
ಉದಯ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 27, 2022 | 8:42 PM

‘ಬಿಗ್ ಬಾಸ್​ ಕನ್ನಡ ಒಟಿಟಿ’ (Bigg Boss OTT) ದಿನಕಳೆದಂತೆ ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಇದರ ಜತೆಗೆ ಸ್ಪರ್ಧೆ ಕೂಡ ಹೆಚ್ಚುತ್ತಿದೆ. ಈಗ ಮನೆಯಲ್ಲಿ ಐದನೇ ವಿಕೆಟ್ ಬಿದ್ದಿದೆ. ಈ ವಾರ ಮನೆಯಿಂದ  ಉದಯ್ ಸೂರ್ಯ (Uday Surya) ಔಟ್ ಆಗಿದ್ದಾರೆ. ಈ ಮೂಲಕ ದೊಡ್ಮನೆ ಸೇರಿದ್ದ 16 ಮಂದಿಯಲ್ಲಿ ಈಗ 11 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇನ್ನು ಕೇವಲ ಮೂರು ವಾರಗಳ ಕಾಲ ‘ಬಿಗ್ ಬಾಸ್ ಒಟಿಟಿ’ ನಡೆಯುವುದರಿಂದ ಕಾಂಪಿಟೇಷನ್​ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಕಿಚ್ಚ ಸುದೀಪ್ ಅವರು ಪ್ರತಿ ವಾರ ನಿರೂಪಣೆ ಮಾಡುತ್ತಾರೆ. ಟಿವಿ ಸೀಸನ್​ಗಳಲ್ಲಿ ಭಾನುವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಒಟಿಟಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಲಾಗಿದೆ. ಶನಿವಾರವೇ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಉದಯ್ ಹೊರ ಹೋಗುತ್ತಿರುವ ಬಗ್ಗೆ ಸುದೀಪ್ ಘೋಷಣೆ ಮಾಡಿದರು. ಈ ಮೂಲಕ ಮೂರನೇ ವಾರಕ್ಕೆ ಉದಯ್ ಪ್ರಯಾಣ ಮುಗಿಸಿದ್ದಾರೆ.

ಉದಯ್ ಸೂರ್ಯ, ರೂಪೇಶ್ ಶೆಟ್ಟಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೊಮಣ್ಣ ಮೇಲೆ ಈ ವಾರದ ನಾಮಿನೇಷನ್ ತೂಗುಗತ್ತಿ ಇತ್ತು. ಆ ಪೈಕಿ ಆರ್ಯವರ್ಧನ್ ಗುರೂಜಿ ಮೊದಲು ಸೇವ್ ಆದರು. ಆ ಬಳಿಕ ರೂಪೇಶ್​ ಶೆಟ್ಟಿ, ಸೋಮಣ್ಣ, ಅಕ್ಷತಾ, ಚೈತ್ರಾ, ಜಯಶ್ರೀ ಉಳಿದುಕೊಂಡರು. ಕೊನೆಯಲ್ಲಿ ಉದಯ್ ಎಲಿಮಿನೇಟ್ ಆಗಿದ್ದಾರೆ.

ಇದನ್ನೂ ಓದಿ
Image
ಸಾನ್ಯಾ, ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಿಕ್ಕಿ ಬಿದ್ದ ಉದಯ್ ಸೂರ್ಯ
Image
ಬಿಗ್ ಬಾಸ್​ಗೆ ಅವಾಜ್ ಹಾಕಿದ ಸೋನು ಶ್ರೀನಿವಾಸ್ ಗೌಡ; ಕ್ಷಮೆ ಕೇಳಲು ಪಟ್ಟು ಹಿಡಿದ ವೈರಲ್ ಹುಡುಗಿ
Image
ಆ್ಯಟಿಟ್ಯೂಡ್ ತೋರಿಸಿದ ಜಯಶ್ರೀಗೆ ಕಠಿಣ ಶಿಕ್ಷೆ ಕೊಟ್ಟ ಬಿಗ್ ಬಾಸ್; ಎಲಿಮಿನೇಷನ್​ಗೆ ಮತ್ತಷ್ಟು ಹತ್ತಿರ
Image
ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಯ್ತು ಬಾಡಿ ಶೇಮಿಂಗ್? ಅಭಿಪ್ರಾಯ ಹೊರ ಹಾಕಿದ ಸಾನ್ಯಾ ಅಯ್ಯರ್

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೇಳಿದ ಮಾತನ್ನು ನಡೆಸಿಕೊಡಲೇ ಇಲ್ಲ ಸಾನ್ಯಾ ಅಯ್ಯರ್​

‘ಬಿಗ್ ಬಾಸ್’ ಮನೆಯಲ್ಲಿ ಉದಯ್​ ಸೂರ್ಯ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದರು. ಕೆಲವರ ಬಗ್ಗೆ ಅವರು ಕೆಟ್ಟ ರೀತಿಯಲ್ಲಿ ಮಾತನಾಡಿದ್ದಾರೆ, ಹೆಣ್ಣು ಮಕ್ಕಳನ್ನು ಕೀಳಾಗಿ ನೋಡಿದ್ದಾರೆ ಎಂಬ ಆರೋಪ ಬಂತು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಇಡೀ ಮನೆಯವರು ಉದಯ್ ವಿರುದ್ಧ ತಿರುಗಿ ಬಿದ್ದರು. ಇನ್ನು, ಮನೆಯಲ್ಲಿ ಅವರು ಡಬಲ್​ಗೇಮ್ ಆಡುತ್ತಿದ್ದರು ಎಂಬ ಆರೋಪ ಕೂಡ ಇದೆ. ಇದರಿಂದ ಕೂಡ ಅವರಿಗೆ ಹಿನ್ನಡೆ ಆಗಿದೆ.

Published On - 8:32 pm, Sat, 27 August 22