‘ಕೋಬ್ರಾ’ ಸಿನಿಮಾ ಟ್ರೇಲರ್ನಲ್ಲಿ ಮಿಂಚಿದ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್; ಮೊದಲ ಸಿನಿಮಾದ ವಿಶೇಷತೆ ಏನು?
ಈ ಸಿನಿಮಾದ ಟ್ರೇಲರ್ನಲ್ಲಿ ವಿಕ್ರಮ್ ಅವರು ಹಲವು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಇರ್ಫಾನ್ ಪಠಾಣ್ ಅವರ ಪಾತ್ರ ಕೂಡ ಹೈಲೈಟ್ ಆಗಿದೆ.
ಕ್ರಿಕೆಟ್ ಲೋಕದಲ್ಲಿ ಮಿಂಚಿದ ಅನೇಕರು ನಂತರ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಿದೆ. ಟೀಂ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್, ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗ ಟೀಂ ಇಂಡಿಯಾ ಬೌಲಿಂಗ್ ಆಲ್ರೌಂಡರ್ ಆಗಿ ಮಿಂಚಿದ್ದ ಇರ್ಫಾನ್ ಪಠಾಣ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ವಿಕ್ರಮ್ ನಟನೆಯ ತಮಿಳಿನ ‘ಕೋಬ್ರಾ’ ಸಿನಿಮಾದಲ್ಲಿ (Cobra Movie) ಇರ್ಫಾನ್ ಪಠಾಣ್ ಕೂಡ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್ ಈಗ ರಿಲೀಸ್ ಆಗಿದ್ದು, ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಮೊದಲ ಸಿನಿಮಾದ ಟ್ರೇಲರ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
‘ಕೋಬ್ರಾ’ ಸಿನಿಮಾದಲ್ಲಿ ವಿಕ್ರಮ್ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಕನ್ನಡದ ಶ್ರೀನಿಧಿ ಶೆಟ್ಟಿ ಈ ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಈ ಸಿನಿಮಾದ ಟ್ರೇಲರ್ನಲ್ಲಿ ವಿಕ್ರಮ್ ಅವರು ಹಲವು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಇರ್ಫಾನ್ ಪಠಾಣ್ ಅವರ ಪಾತ್ರ ಕೂಡ ಹೈಲೈಟ್ ಆಗಿದೆ. ಅವರನ್ನು ದೊಡ್ಡ ಪರದೆಮೇಲೆ ನೋಡಲು ಅವರ ಫ್ಯಾನ್ಸ್ ಕಾದಿದ್ದಾರೆ.
So happy for you brother @IrfanPathan to watch you perform in #Cobra. This looks like a complete action packed film, wishing you & entire cast huge success on this. Can’t wait to watch this one ? ? pic.twitter.com/UZiaiJMsYq
— Suresh Raina?? (@ImRaina) August 26, 2022
The trailer takes me back to our conversation which we had a decade ago. Irfan bhai said, I’ll do everything in life, “I’m an all rounder”! You stayed true to your words. Looking forward to your silver screen debut bhai❤️ @IrfanPathan pic.twitter.com/pNvOu6fPV9
— Deepak Hooda (@HoodaOnFire) August 26, 2022
ಟೀಂ ಇಂಡಿಯಾಗೆ ಬೌಲಿಂಗ್ ಆಲ್ರೌಂಡರ್ ಆಗಿ ಇರ್ಫಾನ್ ಪಠಾಣ್ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡು ಸಾಕಷ್ಟು ವರ್ಷಗಳು ಕಳೆದಿವೆ. ಈಗ ಅವರು ಚಿತ್ರರಂಗದಲ್ಲಿ ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಬಂದಿದ್ದಾರೆ. ಟ್ವಿಟರ್ನಲ್ಲಿ ಈ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ಇರ್ಫಾನ್ ಪಾತ್ರ ಕಂಡು ಫ್ಯಾನ್ಸ್ ಖುಷಿಯಾಗಿದ್ದಾರೆ. ಸುರೇಶ್ ರೈನಾ, ರಾಬಿನ್ ಉತ್ತಪ್ಪ, ದೀಪಕ್ ಹೂಡಾ ಸೇರಿ ಅನೇಕರು ಇರ್ಫಾನ್ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇರ್ಫಾನ್ ಅವರ ಪಾತ್ರದಿಂದಲೂ ‘ಕೋಬ್ರಾ’ ಚಿತ್ರದ ಮೈಲೇಜ್ ಹೆಚ್ಚಿದೆ.
ಇದನ್ನೂ ಓದಿ: ಆಸ್ಪತ್ರೆಯಿಂದ ನಟ ವಿಕ್ರಮ್ ಡಿಸ್ಚಾರ್ಜ್; ‘ಕೋಬ್ರಾ’ ಆಡಿಯೋ ಲಾಂಚ್ಗೆ ಬರೋದು ಖಚಿತ
‘ಕೋಬ್ರಾ’ ಚಿತ್ರಕ್ಕೆ ಅಜಯ್ ಜ್ಞಾನಮುತ್ತು ಅವರು ನಿರ್ದೇಶನ ಮಾಡಿದ್ದಾರೆ. ಲಲಿತ್ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಬರೋಬ್ಬರಿ 90 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿನಿಮಾ ಸಿದ್ಧಗೊಂಡಿದೆ. ಆಗಸ್ಟ್ 31ರಂದು ‘ಕೋಬ್ರಾ’ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.