AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೇಳಿದ ಮಾತನ್ನು ನಡೆಸಿಕೊಡಲೇ ಇಲ್ಲ ಸಾನ್ಯಾ ಅಯ್ಯರ್​

‘ಬಿಗ್ ಬಾಸ್ ಒಟಿಟಿ’ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಸಾನ್ಯಾ ಕಡೆಯಿಂದ ಆಗುತ್ತಿದೆ. ಆದರೆ, ಅವರಲ್ಲಿ ಒಂದು ಮೈನಸ್ ಪಾಯಿಂಟ್ ಇದೆ. ಸುದೀಪ್ ಕಳೆದ ವಾರ ಇದನ್ನು ಹೈಲೈಟ್ ಮಾಡಿದ್ದರು.

‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೇಳಿದ ಮಾತನ್ನು ನಡೆಸಿಕೊಡಲೇ ಇಲ್ಲ ಸಾನ್ಯಾ ಅಯ್ಯರ್​
ಸುದೀಪ್-ಸಾನ್ಯಾ
TV9 Web
| Edited By: |

Updated on: Aug 27, 2022 | 5:08 PM

Share

ಪ್ರತೀ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ‘ಬಿಗ್ ಬಾಸ್​’ ವೇದಿಕೆ ಏರುತ್ತಾರೆ. ಅವರ ನಿರೂಪಣೆ ನೋಡೋಕೆ ಫ್ಯಾನ್ಸ್ ಹಾಗೂ ಮನೆ ಮಂದಿ ಕಾದು ಕೂತಿರುತ್ತಾರೆ. ಅವರ ಖಡಕ್ ನಿರೂಪಣೆ ಅನೇಕರಿಗೆ ಇಷ್ಟ ಆಗುತ್ತದೆ. ಈಗ ‘ಬಿಗ್ ಬಾಸ್ ಒಟಿಟಿ’ ಶೋ ಅನ್ನು ಸುದೀಪ್ ಅವರೇ ನಡೆಸಿಕೊಡುತ್ತಿದ್ದಾರೆ. ಕೆಲ ವೀಕೆಂಡ್​ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಟಾಸ್ಕ್ ನೀಡುತ್ತಾರೆ. ಕಳೆದ ವಾರ ಸುದೀಪ್ ಅವರು ಒಂದು ಮಾತನ್ನು ನಡೆಸಿಕೊಡುವಂತೆ ಸಾನ್ಯಾ ಅಯ್ಯರ್ (Sanya Iyer) ಬಳಿ ಕೋರಿದ್ದರು. ಆದರೆ, ಈ ಮಾತನ್ನು ನಡೆಸಿಕೊಡಲು ಅವರು ವಿಫಲರಾಗಿದ್ದಾರೆ.

ಸಾನ್ಯಾ ಅಯ್ಯರ್ ಕಿರುತೆರೆ ಲೋಕದಲ್ಲಿ ಮಿಂಚಿದವರು. ಹಿರಿತೆರೆಯಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಅವರಿಗೆ ಇದೆ. ಈಗ ‘ಬಿಗ್ ಬಾಸ್ ಒಟಿಟಿ’ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಸಾನ್ಯಾ ಕಡೆಯಿಂದ ಆಗುತ್ತಿದೆ. ಟಾಸ್ಕ್​ಗಳನ್ನು ಅವರು ಚೆನ್ನಾಗಿ ಆಡುತ್ತಿದ್ದಾರೆ. ಹಲವು ಸಂದರ್ಭಗಳನ್ನು ಸಾನ್ಯಾ ನಿರ್ವಹಿಸಿದ ರೀತಿ ಅನೇಕರಿಗೆ ಇಷ್ಟವಾಗಿದೆ. ಆದರೆ, ಅವರಲ್ಲಿ ಒಂದು ಮೈನಸ್ ಪಾಯಿಂಟ್ ಇದೆ. ಸುದೀಪ್ ಕಳೆದ ವಾರ ಇದನ್ನು ಹೈಲೈಟ್ ಮಾಡಿದ್ದರು.

ಇದನ್ನೂ ಓದಿ
Image
ಸಾನ್ಯಾ, ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಿಕ್ಕಿ ಬಿದ್ದ ಉದಯ್ ಸೂರ್ಯ
Image
ಬಿಗ್ ಬಾಸ್​ಗೆ ಅವಾಜ್ ಹಾಕಿದ ಸೋನು ಶ್ರೀನಿವಾಸ್ ಗೌಡ; ಕ್ಷಮೆ ಕೇಳಲು ಪಟ್ಟು ಹಿಡಿದ ವೈರಲ್ ಹುಡುಗಿ
Image
ಆ್ಯಟಿಟ್ಯೂಡ್ ತೋರಿಸಿದ ಜಯಶ್ರೀಗೆ ಕಠಿಣ ಶಿಕ್ಷೆ ಕೊಟ್ಟ ಬಿಗ್ ಬಾಸ್; ಎಲಿಮಿನೇಷನ್​ಗೆ ಮತ್ತಷ್ಟು ಹತ್ತಿರ
Image
ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಯ್ತು ಬಾಡಿ ಶೇಮಿಂಗ್? ಅಭಿಪ್ರಾಯ ಹೊರ ಹಾಕಿದ ಸಾನ್ಯಾ ಅಯ್ಯರ್

ಸಾನ್ಯಾ ಅಯ್ಯರ್ ಎದುರು ಕಠಿಣ ಪರಿಸ್ಥಿತಿ ಬಂದರೆ ಅವರು ಕಣ್ಣೀರು ಹಾಕಲು ಪ್ರಾರಂಭಿಸುತ್ತಾರೆ. ಈ ವಿಚಾರದ ಬಗ್ಗೆ ಸುದೀಪ್ ಕಳೆದ ವಾರ ಮಾತನಾಡಿದ್ದರು. ರೂಪೇಶ್ ಹಾಗೂ ಸಾನ್ಯಾ ಅಯ್ಯರ್ ಫ್ರೆಂಡ್​ಶಿಪ್ ಬಗ್ಗೆ ಕೆಲವರು ಕೆಟ್ಟದಾಗಿ ಮಾತನಾಡಿದ್ದರು. ಇದೇ ವಿಚಾರ ಚರ್ಚೆಗೆ ಬಂದಾಗ ಸಾನ್ಯ ಅಯ್ಯರ್ ಕಣ್ಣೀರು ಹಾಕಿದ್ದರು. ಈ ಬಗ್ಗೆ ಚರ್ಚೆ ಮಾಡುವಾಗ ‘ಸಾನ್ಯ ಅವರೇ ಇನ್ಮುಂದೆ ಅಳಬೇಡಿ. ಅದು ನಿಮಗೆ ಸೂಟ್ ಆಗುವುದಿಲ್ಲ’ ಎಂದು ಸುದೀಪ್ ಹೇಳಿದ್ದರು. ಇದಕ್ಕೆ ಸಾನ್ಯಾ ಒಪ್ಪಿಗೆ ಸೂಚಿಸಿದ್ದರು.

ಇದನ್ನೂ ಓದಿ: ‘ಲಕ್ಕಿ ಮ್ಯಾನ್​​ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ,​ ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್​

ಆದರೆ, ಈಗ ಸಾನ್ಯಾ ಅಯ್ಯರ್ ಮತ್ತೆ ಅತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉದಯ್ ಸೂರ್ಯ ಅವರು ಸಾನ್ಯಾ ಹಾಗೂ ರೂಪೇಶ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಈ ವಿಚಾರ ಗೊತ್ತಾದಾಗ ಸಾನ್ಯಾ ಅಯ್ಯರ್ ಕಣ್ಣೀರು ಹಾಕಿದ್ದಾರೆ. ಲಕ್ಷುರಿ ಬಜೆಟ್​ನಲ್ಲಿ ತಮಗೆ ಪನೀರ್ ಹಾಗೂ ಕಾಫಿ ಪೌಡರ್ ಸಿಕ್ಕಿಲ್ಲ ಎಂದಾಗಲೂ ಕಣ್ಣೀರು ಹಾಕಿದ್ದರು. ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ.